ನವಲಗುಂದ,ಸೆ.29; ಮಹಾತ್ಮರು ನಡೆದಾಡಿದ ಈ ಪುಣ್ಯ ಭೂಮಿಯಲ್ಲಿ ಹಜರತ್ ಮಹಮ್ಮದ್ ಪೈಗಂಬರ್ ಅವರ ಹುಟ್ಟುಹಬ್ಬವನ್ನು ಸಿಹಿ ಹಂಚುವ ಮೂಲಕ ಆಚರಣೆ ಮಾಡಿದ್ದು ಶ್ಲ್ಯಾಘನೀಯವೆಂದು ಗವಿಮಠದ ಬಸವಲಿಂಗ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಈದ್ ಮಿಲಾದ ಹಬ್ಬದ ಪ್ರಯುಕ್ತ ನಗರದ ಗಾಂಧಿ ಮಾರುಕಟ್ಟೆಯಲ್ಲಿ ಡಾ:ಎ. ಪಿ. ಜೆ ಅಬ್ದುಲ್ ಕಲಾಂ ಸಂಘದವರು ಹಮ್ಮಿಕೊಂಡಿದ್ದ ಶರಬತ್ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು ಯುವಕರು ಉತ್ತಮ ಕೆಲಸ ಮಾಡುವ ಮೂಲಕ ಮಹಮ್ಮದ ಪೈಗಂಬರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದಾರೆ ಎಂದರು.
ಹಿರಿಯರಾದ ರಾಯನಗೌಡ ಪಾಟೀಲ್ ಮಾತನಾಡಿ ಇಸ್ಲಾಂ ಧರ್ಮ ಸ್ಥಾಪಕರಾದ ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವನ್ನು ಶರಬತ್ ಹಂಚುವ ಮೂಲಕ ಸರಳವಾಗಿ ಆಚರಣೆ ಮಾಡಿದ್ದು ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಇಮ್ತಿಯಾಜ್ ಮೌಲಾನಾ, ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ ಅಬ್ಬಾಸಅಲಿ ದೇವರಿಡು, ಉಪಾಧ್ಯಕ್ಷ ದಾವಲಸಾಬ ಮಸೂತಿ,ಕಾರ್ಯದರ್ಶಿ ರಿಯಾಜ್ ಅಹ್ಮದ ಪೀರಜಾದೆ, ಸುಲೇಮಾನ್ ನಾಶಿಪುಡಿ, ಪಿ.ಎಸ್.ಐ ಜನಾರ್ದನ ಬಿ, ಡಾ:ಎ.ಪಿ.ಜೆ ಅಬ್ದುಲ್ ಕಲಾಂ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ರಿಯಾಜ್‍ಅಹ್ಮದ ನಾಶಿಪುಡಿ, ಸದಸ್ಯರಾದ ಮುನ್ನಾ ಕಲ್ಲಕುಟ್ರಿ, ಆಜಾದ ನಾಶಿಪುಡಿ, ಫಕೃದ್ದಿನ್ ಇಂಜನಿಯರ್, ಶಾನೂರ ಅಣ್ಣಿಗೇರಿ, ಬಾವೂಶಾ ಮಕಾಂದಾರ, ಇರಪಾನ್ ಶಿರಸಂಗಿ, ಭಾಷಾಸಾಬ ಮಹಮ್ಮದನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..