ಶರನ್ನವರಾತ್ರಿ ಕಾರ್ಯಕ್ರಮ


ಬಾಗಲಕೋಟೆ, ಅ.16 : ಸಮೀಪದ ಸುಕ್ಷೇತ್ರ ಶ್ರೀ ಗದ್ದನಕೇರಿಯ ಅಂಬಾಭವಾನಿ ದೇವಸ್ಥಾನದಲ್ಲಿ 2023 ನೇ ಸಾಲಿನ ಶೋಬನ ಕೃತು ನಾಮ ಸಂವತ್ಸರ ಅಶ್ವಿಜಮಾಸ ಶರನ್ನವರಾತ್ರಿ ಕಾರ್ಯಕ್ರಮಗಳು ರವಿವಾರದಿಂದ ಘಟ ಸ್ಥಾಪನೆಯೊಂದಿಗೆ ಆರಂಭವಾಯಿತು. ಅಕ್ಟೋಬರ್ 24ರ ವರೆಗೆ ಕಾರ್ಯಕ್ರಮ ನಡೆಯಲಿವೆ. ಅಕ್ಟೋಬರ್ 19ರಂದು ಗುರುವಾರ ಲಲಿತಾ ಪಂಚಮಿ ಅಕ್ಟೋಬರ್ 22ರಂದು ರವಿವಾರದುರ್ಗಸ್ತಮಿ ಅಕ್ಟೋಬರ್ 23ರಂದು ಸೋಮವಾರ ಮಹಾನವಮಿ ಕಂಡೆ ಪೂಜೆ ಮತ್ತು ಆಯುಧ ಪೂಜೆ ಹಾಗೂ ಮಹಾಪ್ರಸಾದ ಇರುವುದು. 24ರಂದು ವಿಜಯದಶಮಿ ಬನ್ನಿ ಮುಡಿಯುವುದು ಅಂಬಾ ಭವಾನಿ ದೇವಸ್ಥಾನದಲ್ಲಿ ಪ್ರತಿನಿತ್ಯ ದೇವಿಗೆ ವಿಶೇಷ ಪೂಜೆ ಅಲಂಕಾರ ಹಾಗೂ ಕಾಕಡಾರತಿ ಸಂಜೆ ಹರಿ ಭಜನೆ ನಡೆಯುವುದೆಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಶಾರದಾ ಅಂಬೋರೆ ತಿಳಿಸಿದ್ದಾರೆ