ಶರತ್ ಚಂದ್ರ ಚಟರ್ಜಿಯ 148ನೇ ಜನ್ಮದಿನಾಚರಣೆ:


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.16:  ನಗರದ ಎಐಡಿಎಸ್ಓ  ಜಿಲ್ಲಾ ಕಛೇರಿಯಲ್ಲಿ ನಿನ್ನೆ ಮಹಾನ್ ಸಾಹಿತಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಶರತ್ ಚಂದ್ರ ಚಟರ್ಜಿ ಅವರ ಜನ್ಮದಿನ ಕಾರ್ಯಕ್ರಮ ನಡೆಯಿತು.
ಎಐಡಿಎಸ್ಓ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಅವರು ಮಾತನಾಡಿ. ಭಾರತ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ
ಶರತ್ ರು ಕೇವಲ ಕಲೆಗಾಗಿ ಕಲೆ ಎನ್ನದೆ, ಮಾನವ ಸಮಾಜದಲ್ಲಿರುವ ಅನ್ಯಾಯ-ದಬ್ಬಾಳಿಕೆಗಳನ್ನು, ಜನಸಾಮಾನ್ಯರ ನೋವುಗಳನ್ನು, ಚಿತ್ರಿಸುತ್ತ  ಸಮಾಜದಲ್ಲಿನ ಪಿಡುಗುಗಳ ವಿರುದ್ಧ ಬಂಡಾಯದ ಕೂಗನ್ನು ತಮ್ಮ ಸಾಹಿತ್ಯದ ಮೂಲಕ ಅಭಿವ್ಯಕ್ತಿ ಪಡಿಸಿದವರು.
ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯು ವಿದ್ಯಾರ್ಥಿಗಳ ಮಧ್ಯೆ ಹೋಗಿ ಮುಖ್ಯವಾಗಿ ಶರತ್ ಚಂದ್ರ ಅವರ ಕಥೆ ಕಾದಂಬರಿಗಳ ಬಗ್ಗೆ ಚರ್ಚೆ ಮಾಡಿ ಅವರಲ್ಲಿ ಒಳ್ಳೆಯ ಮೌಲ್ಯಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓ ಬಳ್ಳಾರಿ ಜಿಲ್ಲಾ ಅಧ್ಯಕ್ಷರು ರವಿಕಿರಣ್ ಜೆ.ಪಿ, ಉಪಾಧ್ಯಕ್ಷರಾದ ಕೆ.ಈರಣ್ಣ, ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯರು ಎಂ.ಶಾಂತಿ, ಅನುಪಮಾ, ನಿಹಾರಿಕ ಮತ್ತು ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

One attachment • Scanned by Gmail