ಶರಣ ಹಡಪದ ಅಪ್ಪಣ್ಣನವರ ಚಿಂತನೆಗಳು ಇಂದಿಗೂ ಪ್ರಸ್ತುತ:ಪ್ರೊ. ದಯಾನಂದ ಅಗಸರ

ಕಲಬುರಗಿ:ಜು.3: ಸಮಾನತೆಯ ಸಮಾಜವನ್ನು ರೂಪಿಸಲು 12 ಶತಮಾನದಲ್ಲಿ ಸರ್ವರನ್ನು ಒಳಗೊಂಡ ಶರಣರು ತಾನೊಬ್ಬನೇ ದಿವ್ಯತೆಯನ್ನು ಸಾಧಿಸದೆ ತಮ್ಮ ಅನುಭಾವ ಚಿಂತನೆಗಳನ್ನು ಸಮಾಜದ ಏಳಿಗೆಗೆ ಶ್ರಮಿಸಿದ ಚಿಂತಕರಲ್ಲಿ ಶರಣ ಶ್ರೀ ಹಡಪದ ಅಪ್ಪಣ್ಣ ಒಬ್ಬರಾಗಿದ್ದಾರೆ. ಅವರ ವಚನಗಳಲ್ಲಿನ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಶ್ರೀ. ಶರಣ ಹಡಪದ ಅಪ್ಪಣ್ಣ ಅಧ್ಯಯನ ಪೀಠದಲ್ಲಿ ಆಯೋಜಿಸಿದ ಶ್ರೀ ಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ. ಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದರು.
ಸಮಾಜದ ಸಮರ್ಥವಾಗಿ ಮುನ್ನಡೆಸಲು ಲೌಖಿಕ ವಿಷಯಗಳಲ್ಲದೇ ಪಾರಮಾರ್ಥಿಕ ಚಿಂತನೆಗಳಲ್ಲೂ ಒಡನಾಡಿಯಾಗಿದ್ದ ಶರಣ ಹಡಪದ ಅಪ್ಪಣನವರು ಸೇರಿದಂತೆ ಅಸಂಖ್ಯಾತ ಶರಣ ಚೇತನಗಳು ಅನುಭವ ಮಂಟಪದಲ್ಲಿ ಸೇರಿ ಸಮಾನತೆಯ ಸಮಾಜವನ್ನು ನಿರ್ಮಿಸಲು ಶ್ರಮಿಸಿದ್ದಾರೆ. ಅವರ ವಚನಗಳ ಸಾರಗಳು ಇಂದಿಗೂ ಪ್ರಸ್ತುತವಾಗಿವೆ. ಅಪ್ಪನ ಸಪ್ತಶೀಲಗಳನ್ನು ಚಾಚೂ ತಪ್ಪದೆ ಪಾಲಿಸಿದ ಹಡಪದ ಅಪ್ಪಣ್ಣ ಹಾಗೂ ಶರಣೆ ಲಿಂಗಮ್ಮನವರು ಅರಿವನ್ನು ಅರಿತು ಸಮಾಜಕ್ಕೆ ಬೆಳಕಾದವರು ಎಂದರು.
ಶ್ರೀ ಶರಣ ಹಡಪದ ಅಪ್ಪಣ್ಣ ಅಧ್ಯಯನ ಪೀಠದ ನಿರ್ದೇಶಕ ಡಾ. ಸುರೇಶ ಜಂಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸಮ ಸಮಾಜದ ಕನಸು ಕಂಡ ಶರಣ ದಂಪತಿಗಳಾದ ಶರಣ ಅಡಪದ ಅಪ್ಪಣ್ಣ ಹಾಗೂ ಲಿಂಗಮ್ಮನವರ ಮೌಲಿಕ ಚಿಂತನೆಗಳ ಸತ್ವಗಳು ಇಡೀ ಸಮಾಜದ ಜನರ ಕಣನ್ನು ತೆರೆಸಿದ್ದವು. ಅವರ ವೈಚಾರಿಕ ವಚನಗಳು ಆದರ್ಶ ಸಮಾಜವನ್ನು ನಿರ್ಮಿಸಿವೆ. ಜನರ ಬದುಕನ್ನು ಅಸನುಗೊಳಿಸಿವೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಕೆ. ಎಂ. ಕುಮಾರಸ್ವಾಮಿ, ಶರಣು ನಾವಿ, ಶ್ರೀ. ಹಡಪದ ಅಪ್ಪಣ್ಣ ಅಧ್ಯಯನ ಪೀಠದ ಸಿಬ್ಬಂದಿ ಮಲ್ಲಿಕಾರ್ಜುನ ಹೊಸಮನಿ, ಜಗದೀಶ್ ಹೊಸಮನಿ, ಶಂತಗೌಡ ಪಾಟಿಲ್, ದಿಗಂಬರ್ ಪಡ್ನಿಶ್ ಇನ್ನಿತರರಿದ್ದರು.