ಶರಣ ಸಾಹಿತ್ಯ ಸಮಾಜಕ್ಕೆ ದಾರಿ ದೀಪ

ಆಳಂದ:ಜ.9: ಬಸವಾದಿ ಶರಣರ ವಚನ ಸಾಹಿತ್ಯ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಕೇಂದ್ರೀಯ ವಿವಿ ಸಹ ಪ್ರಾಧ್ಯಾಪಕ ಡಾ. ಕಿರಣ ಗಾಜನೂರ್ ಅವರು ಹೇಳಿದರು.

ಪಟ್ಟಣದ ಸಂಬುದ್ಧ ಪದವಿ ಮಹಾವಿದ್ಯಾಲಯದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಸರಸಂಬಾದ ಲಿಂ. ಗಂಗಾಬಾಯಿ ರಾಮಚಂದ್ರಪ್ಪ ಪಾಟೀಲ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿದರು.

ಶರಣರು ನಡೆ, ನುಡಿಯ ಮೂಲಕ ಸಮ ಸಮಾಜವನ್ನು ಕಟ್ಟಿಕೊಟ್ಟಿದ್ದಾರೆ. ಅವರ ಮಾರ್ಗದಲ್ಲಿ ಅನೇಕರು ಕೊಡುಗೆ ನೀಡಿದ್ದಾರೆ. ದೇಶದಲ್ಲಿನ ಸಾಮಾಜಿಕ, ಧಾರ್ಮಿಕ ಕಟ್ಟುಪಾಡುಗಳ ನಿರ್ಬಂಧ ಇದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಕೈಗೊಂಡ ಶೈಕ್ಷಣಿಕ ಮತ್ತು ಸಾಮಾಜಿಕ ಹೋರಾಟವು ಇಂದಿಗೂ ಪ್ರಸ್ತುತ ಎಂದು ಅವರು ಹೇಳಿದರು

ಪ್ರಗತಿಪರ ರೈತ ಕಲ್ಯಾಣರಾವ ಪಾಟೀಲ, ಸಂಸ್ಥೆಯ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ, ಬಾಬುರಾವ್ ಮಡ್ಡೆ, ಪ್ರಕಾರ ಸಲಗರೆ, ಸಂಗೀತ ಶಿಕ್ಷಕ ಶಂಕರ ಹೂಗಾರ, ಮುಖ್ಯ ಶಿಕ್ಷಕ ಎಲ್.ಎಸ್. ಬೀದಿ, ಕಲ್ಲಪ್ಪ ಮಂಠಾಳೆ, ಡಿ.ಎಂ. ಪಾಟೀಲ, ಬಾಬುರಾವ್ ಚಿಚಕೋಟಿ, ಶರಣಬಸಪ್ಪ ಪರೆಣಿ ಇದ್ದರು.

ಪರಿಷತ್ತು ಅಧ್ಯಕ್ಷ ಸಂಜಯ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಮೊದ ಪಾಂಚಾಳ ನಿರೂಪಿಸಿದರು. ರಾಮಣ್ಣಾ ಸುತ್ತಾರ ಸ್ವಾಗತಿಸಿದರು. ಸಿದ್ಧಾರ್ಥ ಹಸೂರೆ ವಂದಿಸಿದರು. ಸಂಗೀತ ಶಿಕ್ಷಕ ಶಂಕರ ಹೂಗಾರ ಮೇಘಾ ಚಿಚಕೋಟಿ ಅವರ ವಚನ ಗಾಯನ ನಡೆಸಿಕೊಟ್ಟರು.