ಶರಣ ಸಾಹಿತ್ಯ ಪ್ರಸಾರವೇ ಪರಿಷತ್ತಿನ ಜೀವಾಳ : ಮಲ್ಲಮ್ಮಾ ಆರ್ ಪಾಟೀಲ

ಭಾಲ್ಕಿ:ಸೆ.1: ಜನಮಾನಸದಲ್ಲಿ ಶರಣರ ಸಾಹಿತ್ಯವನ್ನು ಪ್ರಚಾರ ಮತ್ತು ಪ್ರಸಾರ ಮಾಡುವುದೆ ಅಖಿ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜೀವಾಳವಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷೆ ಮಲ್ಲಮ್ಮಾ ಆರ್ ಪಾಟೀಲ ಅಭಿಪ್ರಾಯವ್ಯಕ್ತಪಡಿಸಿದರು.

ಪಟ್ಟಣದ ಶ್ರೀ ಖಡಕೇಶ್ವರ ವಿದ್ಯಾಮಂದಿರದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೈಸೂರ ಜಿಲ್ಲೆಯ ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ರಾಜೇಂದ್ರ ದೇಶಿಕೇಂದ್ರ ಮಹಾಸ್ವಾಮಿಗಳ ಜನ್ಮದಿನವನ್ನೇ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರೊಂದಿಗೆ ಲಿಂ. ಚಂದ್ರಮ್ಮ ನಾಗಶೆಟ್ಟೆಪ್ಪ ಶಿವಣಕರ ರವರ ಸ್ಮರಣಾರ್ಥ ನಡೆಸಲಾಗುತ್ತಿರುವ ದತ್ತಿ ಉಪನ್ಯಾಸ ಕಾರ್ಯಕ್ರಮವೂ ನಡೆಸಲಾಗುತ್ತಿದೆ. ಶರಣ ಸಾಹತ್ಯ ಪ್ರಚಾರವನ್ನು ಪರಿಷತ್ತಿನ ವತಿಯಿಂದ ಸುಮಾರು 4 ದಶಕಗಳಿಂದ ವ್ಯವಸ್ಥಿತವಾಗಿ ನಡೆದು ಬರುತ್ತಲಿದೆ ಎಂದು ಹೇಳಿದರು.

ಖಡಕೇಶ್ವರ ವಿದ್ಯಾಮಂದಿರದ ಕೋಶಾಧ್ಯಕ್ಷ ಪ್ರಭುರಾವ ಧೂಪೆ ಅಧ್ಯಕ್ಷತೆ ವಹಸಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಅಶೋಕ ಲೋಖಂಡೆ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ವೀರಣ್ಣಾ ಕುಂಬಾರ ನಡೆ, ನುಡಿ ಶುದ್ಧ ಎನ್ನುವ ವಿಷಯದ ಮೇಲೆ ವಿಶೆಷ ಉಪನ್ಯಾಸ ಮಂಡಿಸಿದರು. ಮುಖ್ಯ ಶಿಕ್ಷಕ ಆನಂದ ಕಲ್ಯಾಣೆ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕ.ಸಾ.ಪ ಅಧ್ಯಕ್ಷ ನಾಗಭೂಷಣ ಮಾಮಡಿ, ಪಾರ್ವತಿ ಡೊಣಗಾಪೂರೆ, ಡಾ| ವೈಜಿನಾಥ ಭಂಡೆ ಉಪಸ್ಥಿತರಿದ್ದರು.

ಶಿವಕುಮಾರ ವಚನಗಾಯನ ನಡೆಸಿಕೊಟ್ಟರು. ಉದಯಕುಮಾರ ಜೋಷಿ ನಿರೂಪಿಸಿದರು. ಸುನಿತಾ ಮಮ್ಮಾ ವಂದಿಸಿದರು.