ಶರಣ ಸಾಹಿತ್ಯ ಪರಿಷತ್ತ ಸದಸ್ಯತ್ವ ಹಾಗೂ ದತ್ತಿನಿಧಿ ಹೆಚ್ಚಿಸಿ ಬಸವ ತತ್ವ ಬೆಳೆಯಿಸಿ

ಬಸವಕಲ್ಯಾಣ: ಡಿ.23:ನಗರದ ಹೊರವಲಯದಲ್ಲಿರುವ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಅತಿಥಿ ಗೃಹದಲ್ಲಿ ಬೀದರ ಜಿಲ್ಲಾ ಅಖಿಲ ಭಾರತ ಶರಣ ಸಾಹತ್ಯ ಪರಿಷತ್ತಿನ ಕಾರ್ಯಾಕಾರಣಿ ಸಭೆಯನ್ನು ರಾಜ್ಯಾಧ್ಯಕ್ಷ ಸಿ.ಸೋಮಶೇಖರ ನಡೆಸಿದರು.
ಈ ವೇಳೆ ರಾಜ್ಯಾಧ್ಯಕ್ಷ ಸಿ.ಸೋಮಶೇಖರ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಹಾಗೂ ದತ್ತಿನಿಧಿ ಹೆಚ್ಚಿಸುವುದರಿಂದ ಬಸವ ತತ್ವ ಬೆಳೆಯಿಸಲು ಸಹಕಾರಿಯಾಗುತ್ತದೆ ಎಂದರು. ಅಲ್ಲದೆ ಬಸವಾದಿ ಶಿವಶರಣರು ಮಾಡಿದ ಕ್ರಾಂತಿ ಹಾಗೂ ವಚನ ಸಾಹಿತ್ಯದ ಮೌಲ್ಯಗಳು ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಇದರಿಂದ ಶರಣ ತತ್ವ ವ್ಯಾಪಕವಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಈ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ತಾಲೂಕಿನ ಅಧ್ಯಕ್ಷರು ಹಾಗೂ ಜಿಲ್ಲಾ ಅಧ್ಯಕ್ಷರನ್ನು ಪ್ರತ್ಯೇಕವಾಗಿ ಪ್ರಗತಿಗಳನ್ನು ಕೇಳಿಕೊಂಡು ನಂತರ ಶರಣರ ನಾಡ ಬೀದರ ಜಿಲ್ಲೆಯಲ್ಲಿ ಹೆಚ್ಚಿನ ಸದಸ್ಯರನ್ನು ಹೊಂದಬೇಕು ಈ ನಿಟ್ಟಿನಲ್ಲಿ ಎಲ್ಲಾ ತಾಲೂಕು ಅಧ್ಯಕ್ಷರುಗಳು ಕಾರ್ಯ ಪ್ರವರ್ತರಾಗಿ ಕನಿಷ್ಠ ಜಿಲ್ಲೆಯಿಂದ 5 ಸಾವಿರ ಸದಸ್ಯರನ್ನು ಮಾಡಬೇಕೆಂದು ಎಂದು ಸಲಹೆ ನೀಡಿದರು.
ಈ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಪ್ರೊ.ಶಂಭುಲಿಂಗ ಕಾಮಾಣ್ಣ, ಭಾಲ್ಕಿ ತಾಲೂಕು ಅಧ್ಯಕ್ಷ ಪ್ರೊ. ಮಲ್ಲಮ್ಮಾ ಪಾಟೀಲ, ಬೀದರ ತಾಲೂಕು ಅಧ್ಯಕ್ಷ ಸಂಗಪ್ಪಾ ಹಿಪ್ಪಳಗಾಂವ ಪ್ರಮುಖರಾದ ನಾಗಪ್ಪ ನಿಣ್ಣೆ, ಶಾಮರಾವ ಸಿಂಗ, ಇಂದುಮತಿ, ಮಲ್ಲಿಕಾರ್ಜುನ, ಸಂತೋಷ ಹಡಪದ, ಕಾಶಿನಾಥ ಭುರೆ, ಬಸವಕಲ್ಯಾಣ, ಹುಮನಾಬಾದ, ಚಿಟಗುಪ್ಪಾ ತಾಲೂಕು ಅಧ್ಯಕ್ಷರುಗಳು ಜಿಲ್ಲಾ ಕಾರ್ಯಕಾರಣಿ ಮಂಡಳಿ ಸದಸ್ಯರು ಭಾಗವಹಿಸಿದರು.
ಸನ್ಮಾನ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದಕ್ಕಾಗಿ ಡಾ.ಸಿ.ಸೋಮಶೇಖರ ಅವರನ್ನು ಎಲ್ಲಾ ತಾಲೂಕು ಅಧ್ಯಕ್ಷರುಗಳು ಜಿಲ್ಲಾ ಅಧ್ಯಕ್ಷ ಪ್ರೊ. ಶಂಭುಲಿಂಗ ಕಾಮಣ್ಣ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.