ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಸಂಸ್ಥಾಪನಾ ದಿನ

ಯಾದಗಿರಿ:ಆ.30: ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ಕಸಾಪ ಭವನದಲ್ಲಿ ಮಂಗಳವಾರ (ಆ.29) ಪರಿಷತ್ತಿನ ಸಂಸ್ಥಾಪನಾ ದಿನ ಹಾಗೂ ಸಂಸ್ಥಾಪಕರಾದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಜನ್ಮ ದಿನದ ಕಾರ್ಯಕ್ರಮ ನಡೆಯಿತು.
ಗುರುಮಠಕಲ್ ಖಾಸಾ ಮಠದ ಪೀಠಾಧಿಪತಿ ಶ್ರೀ ಮನ್ ನಿರಂಜನ ಪ್ರಣವ ಸ್ವರುಪಿ ಶಾಂತಿವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಬೆಳಗಾವಿಯ ಮಹಾಲಿಂಗಮಠದ
ಬಸವ ಮಹಾಂತ ಸ್ವಾಮೀಜಿ
ಸಿರಸಂಗಿ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಶಹಾಪುರ ಕಸಾಪ ಅಧ್ಯಕ್ಷ ರವೀಂದ್ರ ಹೊಸಮನಿ, ವಡಗೇರಾ ಅಧ್ಯಕ್ಷ ಮಲ್ಲಿಕಾರ್ಜುನ ಕರಕಳ್ಳಿ, ಡಾಕ್ಟರ್ ಸುಭಾಷ್ ಚಂದ್ರ ಕೌಜಲಗಿ. .ಉಪನ್ಯಾಸಕ ನರಸಪ್ಪ ಚಿತ್ತಾಪುರ ಅವರು ವೇದಿಕೆ ಮೇಲಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ಆರ್.ಮಹಾದೇವಪ್ಪ ಅಬ್ಬೆತುಮಕೂರು,
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಖಂಡಪ್ಪ ದಾಸನ್ ಸೇರಿದಂತೆ ಹಲವರು ಇದ್ದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷ ಎಸ್.ಎಸ್.ನಾಯಕ ನಿರೂಪಿಸಿದರು.
ಯಡಿಯೂರು ಸಿರಿ ಸಂಗೀತ ಪಾಠಶಾಲೆಯಿಂದ ಸಂಗೀತ ಕಾರ್ಯಕ್ರಮ ನಡೆಯಿತು.