ಶರಣ ಸಾಹಿತ್ಯ ಪರಿಷತ್ತಿನ ಚನ್ನಗಿರಿ ಘಟಕಕ್ಕೆ ಚಾಲನೆ

ದಾವಣಗೆರೆ.ಜ.18; ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆಯ ವತಿಯಿಂದ ನೂತನವಾಗಿ ಚನ್ನಗಿರಿ ತಾಲ್ಲೂಕು ಕದಳಿ ಮಹಿಳಾ ಘಟಕವನ್ನು  ಪಾಂಡೋಮಟ್ಟಿವಿರಕ್ತಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಈ ವೇದಿಕೆಯ ಸ್ಥಾಪನೆ ಉದ್ದೇಶ, ಘಟಕದ ಆಶಯ, ಮಾಡಬೇಕಾದ ಕರ್ತವ್ಯಗಳ ಬಗ್ಗೆ ಎಲ್ಲಾ ಪದಾಧಿಕಾರಿಗಳಿಗೆ ತಿಳಿಸಿಕೊಟ್ಟರು. ಶರಣರ ವಚನಗಳ ಸಾರವನ್ನು ಜನಸಾಮಾನ್ಯರಿಗೆ ತಿಳಿಸುವುದು ಈ ಘಟಕದ ಮುಖ್ಯ ಉದ್ದೇಶವಾಗಿದೆ. ಇಂದಿನಿಂದ ಎಲ್ಲರೂ ಈ ತತ್ವಕ್ಕೆ ಬದ್ಧರಾಗಿರಬೇಕು ಎಂದು ಹೇಳಿ ಆಶೀರ್ವಾದ ಮಾಡಿದರು.ಈ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ. ಬಿ. ಪರಮೇಶ್ವರಪ್ಪ, ಎಂ. ಎಸ್. ಮಲ್ಲೇಶಪ್ಪ,  ಕುಸುಮ ಲೋಕೇಶ್, ಯುಗಧರ್ಮ ರಾಮಣ್ಣ,  ಪ್ರೇಮ ಸೋಮಶೇಖರ್, ಹೆಚ್. ಎಸ್ ಮಲ್ಲಿಕಾರ್ಜುನಪ್ಪ, ಕದಳಿ ವೇದಿಕೆಯ ದಾವಣಗೆರೆ ಜಿಲ್ಲಾ ಮತ್ತು ಚನ್ನಗಿರಿ ತಾಲ್ಲೂಕು ಘಟಕದ ಮಹಿಳಾ ಸದಸ್ಯರುಗಳು ಭಾಗಾವಹಿಸಿದ್ದರು.