ಶರಣ ಸಾಹಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ

ಕಂಪ್ಲಿ, ಡಿ.28- ಶರಣ ಸಾಹಿತ್ಯ ಕೇವಲ ಭಾಷಣದ ಸರಕಾಗದೆ ನಿತ್ಯ ಜೀವನದಲ್ಲಿ ಅಳವಡಿಕೆಯಾಗಬೇಕು ಎಂದು ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆ ಆವರಣದಲ್ಲಿ ಭಾನುವಾರ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ 125ನೇ ಮಹಾಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಂಗತ್ರಯ ಸಂಸ್ಕೃತ ಪಾಠಶಾಲೆ ಗೌರವ ಪ್ರಾಚಾರ್ಯ ಎಂ.ಎಸ್.ಶಶಿಧರ ಶಾಸ್ತ್ರಿ ಮಾತನಾಡಿ, ನಿತ್ಯ ಜೀವನದಲ್ಲಿ ಶರಣ ಸಂಸ್ಕೃತಿಯನ್ನು ಅಳವಡಿಸಿಕೊಂಡಲ್ಲಿ ನೆಮ್ಮದಿಯ ಸಾರ್ಥಕ ಜೀವನ ಸಾಗಿಸಲು ಸಾಧ್ಯ ಎಂದು ಹೇಳಿದರು.
ಬಳ್ಳಾರಿಯ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ಅವರು ‘ನಿತ್ಯ ಜೀವನದಲ್ಲಿ ಶರಣಧರ್ಮ’ ಕುರಿತು ಉಪನ್ಯಾಸ ನೀಡಿ, ಕೊರೋನಾ ಬದುಕಿನ ಮೌಲ್ಯಗಳನ್ನು ತಿಳಿಸಿಕೊಟ್ಟಿದೆ. ಕೊರೋನಾ ದಿನಗಳಲ್ಲಿ ಬದುಕನ್ನು ಕಟ್ಟಿಕೊಂಡ ರೀತಿಯನ್ನು ಮರೆಯಬಾರದು. ಸಮಾಜ ಒಪ್ಪುವಂತೆ ಸೌಜನ್ಯಯುತ ಬದುಕನ್ನು ಸಾಗಿಸಬೇಕು ಎಂದು ಹೇಳಿದರು.
ಶರಣ ತತ್ವ ಪ್ರಸಾರದಲ್ಲಿ ತೊಡಗಿಸಿಕೊಂಡ ಕುಡುತಿನಿಯ ಸತ್ಸಂಗ ಆಶ್ರಮದ ಅಧ್ಯಕ್ಷ ಪಲ್ಲೇದ ಪಂಪಾಪತೆಪ್ಪ, ಕಂಪ್ಲಿಯ ಭಕ್ತಿ ಭಂಡಾರಿ ಬಸವೇಶ್ವರ ಆಶ್ರಮದ ಪೀಠಾಧಿಪತಿ ಪಿ.ಪಾಮಣ್ಣ ಶರಣರು, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎಸ್.ವಿ.ಪಾಟೀಲ್ ಗುಂಡೂರು, ಗಂಗಾವತಿಯ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಾ.ಶಿವಕುಮಾರ್ ಮಾಲಿಪಾಟೀಲ್, ಗಂಗಾವತಿಯ ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಕೆ.ಪಂಪಣ್ಣ ಹಡಗಲಿ ಇವರಿಗೆ ಶರಣಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಪ್ರಕಾಶ್, ಗುತ್ತಿಗೆದಾರ ಭೀಮಲಿಂಗೇಶ್ವರ, ಪಾಠಶಾಲೆ ಅಧ್ಯಕ್ಷ ಎಸ್.ಎಸ್.ಎಂ.ಚನ್ನಬಸವರಾಜ್, ಬಲಿಜ ಸಂಘದ ಕಾರ್ಯದರ್ಶಿ ನಾರಾಯಣ ಇಂಗಳಗಿ, ಪ್ರಮುಖರಾದ ಡಾ.ಎ.ಸಿ.ದಾನಪ್ಪ, ಎಸ್.ಡಿ.ಬಸವರಾಜ್, ಕವಿತಾಳ್ ಬಸವರಾಜ್, ಡಿ.ಶಿವನಾಗಪ್ಪ, ಕೆ.ಸಣ್ಣ ಗವಿಸಿದ್ದಪ್ಪ, ಕೆ.ಯಂಕಾರೆಡ್ಡಿ, ಬುರೆಡ್ಡಿ ವಿರುಪಾಕ್ಷಿ, ಬಿ.ಡಿ.ಮಂಜುನಾಥ್, ಬಿ.ಅಂಬಣ್ಣ, ಸೋಗಿ ಕೊಟ್ರಪ್ಪ, ಮಾ.ಶ್ರೀನಿವಾಸ್, ವಸ್ತ್ರದ ಜಡೆಯ್ಯಸ್ವಾಮಿ, ಸಜ್ಜನರ ಮಂಜುನಾಥ ಸೇರಿ ಅನೇಕರಿದ್ದರು.