
ಇಲಕಲ:ಸೆ.12: ನಗರದ ಎಪಿಎಂಸಿ ವ್ಯಾಪಾರಸರ ಸಂಘದ ವತಿಯಿಂದ ವಿಜಯ ಮಹಾಂತೇಶ ರಥೋತ್ಸವ ಅಂಗವಾಗಿ ಶರಣ ಪದ್ಧತಿಯಂತೆ ಸೋಮವಾರದಂದು 23 ಜೋಡಿಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಗದ್ದುಗೆಯ ಆವರಣದಲ್ಲಿ ನಡೆದವು.
ಶಾಸಕ ವಿಜಯಾನಂದ ಕಾಶಪ್ಪನವರ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿ ಕೊಳ್ಳುವದರಿಂದ ಬಡಜನರಿಗೆ ಸಾಕಷ್ಟು ಅನುಕೂಲ ಆಗುತ್ತದೆ ಗಂಡಿನ ಕಡೆಯವರು ಮುಂದೆ ಯಾವುದೇ ಕಾರಣದಿಂದಲೂ ಹೆಣ್ಣಿನ ಕಡೆಯವರನ್ನು ವರದಕ್ಷಿಣೆಗಾಗಿ ಸತಾಯಿಸಬಾರದು ಪರಸ್ಪರ ಅನ್ನೋನ್ಯವಾಗಿ ಸುಖ ಸಂಸಾರ ನಡೆಸುವ ಜೊತೆಗೆ ತ ಸಂತಾನ ಹೊಂದಬೇಕು ಎಂದು ಹೇಳಿದರು.
23 ಜೋಡಿಗಳನ್ನು ಅತ್ಯಂತ ಸರಳವಾಗಿ ಗುರುಮಹಾಂತಶ್ರೀಗಳು ಡಾ. ಬಸವಲಿಂಗ ಸ್ವಾಮಿಗಳು, ಮುರ್ತುಜಾ ಖಾದ್ರಿ ದರ್ಗಾ ಗುರು ಪೈಸಲ್ ಪಾಷಾ ಮುಂತಾದ ಶ್ರೀಗಳ ಸಾನಿಧ್ಯದಲ್ಲಿ ಮದುವೆ ಮಾಡಲಾಯಿತು. ಆಡತ ವ್ಯಾಪಾರಸ್ಥರಾದ ಬಸವರಾಜ ಕಬ್ಬಿಣದ ಸಂಗಣ್ಣ ಕಂಪ್ಲಿ ಮಹಾಂತಗೌಡ ಪಾಟೀಲ ತೊಂಡಿಹಾಳ, ಶಿವರುದ್ರಪ್ಪ ಗೊಂಗಡಪಟ್ಟಿ, ಮತ್ತು ಹಲವಾಡದ ನಗರಸಭೆ ಸದಸ್ಯರಾದ ಸುರೇಶ ಜಂಗ್ಲಿ, ಮೌಲೇಶ ಬಂಡಿವಡ್ಡರ, ಅಮೃತ ಬಿಜ್ಜಳ ಮತ್ತಿತರರು ಉಪಸ್ಥಿತರಿದ್ದರು. ಮಲ್ಲಯ್ಯ ಗಣಾಚಾರಿ ಪ್ರಮೀಣ ಮುದಗಲ್ಲಿ ವಿವಾಹಗಳನ್ನು ನಡೆಸಿಕೊಟ್ಟರು.