ಶರಣ ಸಂಸ್ಕೃತಿ ಉತ್ಸವದಲ್ಲಿ ಬೈಕ್ ರ್ಯಾಲಿ

ಚಿತ್ರದುರ್ಗ. ಅ.೧೧: ಶರಣಸಂಸ್ಕೃತಿ ಉತ್ಸವ-2021ರ ಅಂಗವಾಗಿ ಆಯೋಜಿಸಿದ್ದಬೈಕ್ ರ‍್ಯಾಲಿಯನ್ನು ಡಾ.ಶ್ರೀ.ಶಿವಮೂರ್ತಿ ಮರುಘಾ ಶರಣರು  ಉದ್ಘಾಟಿಸಿದರು, ಬೈಕ್ ರ‍್ಯಾಲಿಯಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ನೂರಾರು ಬೈಕ್ ಸವಾರರು ತಮ್ಮ ನೆಚ್ಚಿನ ಬೈಕ್‌ಗಳೊಂದಿಗೆ ಶ್ರೀ ಮರುಘಾಮಠದ ಆವರಣದಲ್ಲಿ ಸೇರಿ ರ‍್ಯಾಲಿಯಲ್ಲಿ ಪಾಲ್ಗೊಂಡರು. ಬೈಕ್ ರ‍್ಯಾಲಿಯೂ ಮುರುಘಾ ಮಠದಿಂದ ಪ್ರಾರಂಭವಾಗಿ ಮಾಳಪ್ಪನಹಟ್ಟಿ, ಬಿವಿಕೆಎಸ್ ಲೇಔಟ್, ಕನಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬುರುಜನಹಟ್ಟಿ ವೃತ್ತ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನÀ, ಉಚ್ಚಂಗಿಯಲ್ಲಮ ದೇವಸ್ಥಾನ ರಂಗಯ್ಯನ ಬಾಗಿಲು, ಜೋಗಿಮಟ್ಟಿ ರೋಡ್‌ನ 5ನೇ ಕ್ರಾಸ್, ಸ್ಟೇಡಿಯಂ ರಸ್ತೆಯಿಂದ ಕೆಳಗೋಟೆ ಚನ್ನಕೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಿAದ ಕೋರ್ಟು, ಡಿಸಿ ಸರ್ಕಲ್, ಮದಕರಿ ವೃತ್ತ, ಗಾಂಧಿಸರ್ಕಲ್, ಹೆಡ್ ಪೋಸ್ಟ್ ಆಪೀಸ್ ರಸ್ತೆ ಮತ್ತು ಕೆಎಸ್‌ಆರ್‌ಟಿಸಿ ಬಸ್ಟಾö್ಯಂಡ್, ದಾವಣಗೆರೆ ರಸ್ತೆ ಮಾರ್ಗವಾಗಿ ಶ್ರೀ ಮುರುಘಾಮಠ ಪ್ರವೇಶಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಮಾದಾರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಅಥಣಿ ಮಠದ ಶಿವಬಸವ ಸ್ವಾಮೀಗಳು, ಶರಣ ಸಂಸ್ಕೃತಿ ಉತ್ಸವದ ಕಾರ್ಯಧ್ಯಕ್ಷರಾದ ಕೆ.ಎಸ್. ನವೀನ್, ಶಿವಸೇನೆ ಅಧ್ಯಕ್ಷರಾದ ಮರುಳಾರಾಧ್ಯ, ಎಸ್.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿಯಾದ ಎ.ಜೆ.ಪರಮಶಿವಯ್ಯನವರು ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ನೌಕರ ವರ್ಗದವರು, ಹರಗುರು ಚರಮೂರ್ತಿಗಳು ಹಾಗೂ ಮಠದ ಭಕ್ತಾಧಿಗಳು ಉಪಸ್ಥಿತರಿದ್ದರು.