ಶರಣ ಸಂದೇಶಗಳು ಸರ್ವಕಾಲಿಕ: ಶಿವಾನಂದ ಲಾಳಸಂಗಿ

ಸಂಜೆವಾಣಿ ವಾರ್ತೆ,
ವಿಜಯಪುರ,ಜ.22:ಶರಣರು ಸಂತರು, ಮಹಾಪುರುಷರು ಮನು ಕುಲದ ಉದ್ದಾರಕ್ಕಾಗಿ ಅನೇಕ ಮೌಲಿಕವಾದ ಸಂದೇಶಗಳನ್ನು ನೀಡಿದ್ದಾರೆ. ಅವರ ಸಂದೇಶಗಳು ಸರ್ವಕಾಲಿಕವಾಗಿವೆ ಎಂದು ಯುವ ಮುಖಂಡ ಶಿವಾನಂದ ಲಾಳಸಂಗಿ ಹೇಳಿದರು.
ನಗರದ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬಸವಣ್ಣನವರ ಸಮಕಾಲಿನ ವಚನಕಾರರಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರು ಕೂಡ ಒಬ್ಬರು. ಅವರ ತತ್ವಾದರ್ಶಗಳನ್ನು ಇಂದಿನ ಯುವಕರು ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಿವಶರಣ ಲಾಳಸಂಗಿ, ಅನೀಲ ಒಂಟಿ, ನಿಲೇಶ ಹಿರೊಳ್ಳಿ, ಅನಿಲ ಬಳಗಲಿ, ಕಾರ್ತಿಕ ಬಣ್ಣದ, ಮುದಕಣ್ಣ ಅವಟಿ, ಗಂಗಾಧರ ಮಠಪತಿ, ಶಿವಶಂಕರ ಶಿರಮಗೊಂಡ, ಮುಖೇಶ ಚೌಧರಿ, ಶಿವರಾಜ ಬಿರಾದಾರ, ಶಂಕರ ಮಂಗ್ಯಾಳ, ಸುನೀಲ ಮೋದಿ, ಶಸಿ ರೊಕಡೆ, ವಿಶ್ವನಾಥ ರೆವೂರ, ಅನಿಲ ಪಟ್ಟಣಶೆಟ್ಟಿ, ಶಿವಕುಮಾರ ಬಬಲೇಶ್ವರಮಠ, ಉಮೇಶ ಗಡೆಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.