ಉಪನ್ಯಾಸಕ ಮುನಿಯಪ್ಪ ನಾಗೋಲಿ ಅಭಿಮತ | ದೇವದುರ್ಗ ಕಸಾಪ ದತ್ತಿ ನಿಧಿ ಕಾರ್ಯಕ್ರಮ
ದೇವದುರ್ಗ,ಜು.೧೫-
ವಚನ ಸಾಹಿತ್ಯ ಮತ್ತು ಶರಣ ಸಾಹಿತ್ಯ ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ. ಎರಡೂ ಸಾಹಿತ್ಯಗಳು ನಮ್ಮ ಬದುಕಿಗೆ ಕಾಯಕ ನಿಷ್ಠೆ ಹಾಗೂ ಜೀವನ ಪರಿಶುದ್ಧತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತುತ್ತವೆ ಎಂದು ಉಪನ್ಯಾಸಕ ಮುನಿಯಪ್ಪ ಗಾಲೋಲಿ ಹೇಳಿದರು.
ಪಟ್ಟಣದ ಬಸವ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲೂಕು ಘಟಕದಿಂದ ಆಯೋಜಿಸಿದ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ವಿಷಯ ಕುರಿತು ಶುಕ್ರವಾರ ಮಾತನಾಡಿದರು. ಕಾಯಕ ನಿಷ್ಠೆ, ಕ್ರಿಯಾಶೀಲತೆ ಶರಣ, ವಚನ ಸಾಹಿತ್ಯದಲ್ಲಿ ಅಡಕವಾಗಿವೆ. ನಮ್ಮ ಒಳ್ಳೆಯ ನಡತೆಗೆ ವಚನಗಳು ಮೌಲ್ಯಯುತವಾದ ಆದರ್ಶಪ್ರಾಯವಾಗಿವೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಎ.ರಂಗಣ್ಣ ಪಾಟೀಲ್ ಅಳ್ಳುಂಡಿ ಮಾತನಾಡಿ, ಕನ್ನಡ ನಾಡು ನುಡಿ ಉಳಿಸಿ ಬೆಳೆಸುವುದು ಸಮಸ್ತ ನಾಡಿನ ಜನರ ಕರ್ತವ್ಯ ಆಗಬೇಕಿದೆ. ಕನ್ನಡ ಉಳಿವಿಗೆ ಸಾಹಿತ್ಯ ಹಾಗೂ ಕನ್ನಡ ಶಾಲೆ ಬೆಳೆಸಬೇಕಿದೆ. ಮಾತೃಭಾಷೆ ಪ್ರತಿಯೊಬ್ಬರ ಹೃದಯ ಭಾಷೆವಾಗಿದೆ. ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಂಡು ಕನ್ನಡ ನಾಡು ನುಡಿ ಸೇವೆ ಸಲ್ಲಿಸುವುದನ್ನು ಕರ್ತವ್ಯ ಮಾಡಿಕೊಳ್ಳಬೇಕು. ದೇಶದಲ್ಲೆ ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತ ಸಾಹಿತ್ಯವಾಗಿದೆ.
ಕಸಾಪ ಮಾಜಿ ಅಧ್ಯಕ್ಷ ಎಚ್.ದಂಡಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಕನ್ನಡ ವಿಷಯದಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು ಹಾಗೂ ಭೂಮಾಪನ ಇಲಾಖೆಯಲ್ಲಿ ಕನ್ನಡ ಅಂಕೆಗಳನ್ನು ಕಡ್ಡಾಯವಾಗಿ ಬಳಸುತ್ತಿದ್ದ ಭೂಮಾಪನ ಇಲಾಖೆ ಅಧಿಕಾರಿ ನಂದಕುಮಾರ್ ಅವರಿಗೆ ಸನ್ಮಾನಿಸಿಗೌರವಿಸಲಾಯಿತು.
ಕಸಾಪ ಕೋಶ ಅಧ್ಯಕ್ಷ ತಿರುಪತಿ ಸೂಗೂರು, ದತ್ತಿಧಾನಿಗಳಾದ ಆದಿ ಕಮಲಮ್ಮ, ಅಂಬಿಕಾ ಎಸ್.ಗುಡದಿನ್ನಿ, ನಾಗರತ್ನ ಬಳೆ, ಗಂಗಮ್ಮ ಟೀಚರ್, ಆದಿ ವಿಜಯಲಕ್ಷ್ಮಿ, ಯಲ್ಲಪ್ಪ ಗೌಡೂರು, ಶಿಕ್ಷಣ ಇಲಾಖೆ ಸಂಯೋಜಕ ಕೆ.ಮಹಾದೇವ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಶಿವರಾಜ್ ರುದ್ರಾಕ್ಷಿ, ಶ್ರೀನಿವಾಸ್ ದಾಸರ, ಹನುಮಂತಪ್ಪ ಮನ್ನಾಪುರ, ಆಕಾಶ್ ಇತರರಿದ್ದರು.