ಶರಣ ಬಸವ ವಿವಿ 3-4ನೇ ಘಟಿಕೋತ್ಸವಜ್ಞಾನ ಮೂಲದ ನವೀಕರಣ ಅನಿವಾರ್ಯ: ಇಸ್ರೋ ಮಾಜಿ ಅಧ್ಯಕ್ಷ ಕಿರಣಕುಮಾರ್

ಕಲಬುರಗಿ ಸೆ 7: ವೃತ್ತಿ ಜೀವನದ ಒಟ್ಟಾರೆ ಅಭಿವೃದ್ಧಿಗೆ ಜ್ಞಾನದ ಮೂಲವನ್ನು ನಿಯಮಿತವಾಗಿ ನವೀಕರಿಸುವ ಅನಿವಾರ್ಯತೆ ಇದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣಕುಮಾರ್ ಪ್ರತಿಪಾದಿಸಿದರು.
ಇಲ್ಲಿನ ಅಪ್ಪಾ ಪಬ್ಲಿಕ್ ಶಾಲೆ ಆವರಣದಲ್ಲಿರುವ ಪೂಜ್ಯ ಬಸವರಾಜಪ್ಪ ಅಪ್ಪ ಸ್ಮರಣಾರ್ಥ ಭವನದಲ್ಲಿ ಶರಣ ಬಸವ ವಿಶ್ವವಿದ್ಯಾಲಯದ ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಮತ್ತು ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಜ್ಞಾನಾರ್ಜನೆಗೆ ನಿರಂತರ ಕಲಿಕೆಯೇ ಏಕೈಕ ಪೂರಕ ಅಂಶ ಎಂಬುದನ್ನು ಮರೆಯುವಂತಿಲ್ಲ ಎಂದರು.
ಸದಾ ತಣಿಯದ ಕುತೂಹಲ, ಓದುವ ಹವ್ಯಾಸ, ಸೃಜನಾತ್ಮಕ ಚಿಂತನೆಯ ಸಾಮಥ್ರ್ಯವನ್ನು ವೃದ್ಧಿಸಿಕೊಳ್ಳುವುದರ ಮೇಲೆ ನಮ್ಮ ಗುಣಮಟ್ಟದ ಜ್ಞಾನಾರ್ಜನೆ ನಿಂತಿದೆ ಎಂಬುದನ್ನು ವಿದ್ಯಾರ್ಥಿಗಳು ನೆನಪಿಟ್ಟುಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ಅನ್ವಯತೆ ಇಂದಿನ ಪ್ರಮುಖ ವಿದ್ಯಮಾನ. ಅದರಲ್ಲೂ ಆರ್ಥಿಕತೆ ಮತ್ತು ಸಮಾಜವನ್ನು ಪರಿವರ್ತನೆಯ ಹಾದಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಹೆಚ್ಚು ಪ್ರಭಾವಶಾಲಿ ಪಾತ್ರ ನಿರ್ವಹಿಸುತ್ತಿದೆ . ಈ ದಿಕ್ಕಿನಲ್ಲಿ ವಿದ್ಯಾರ್ಥಿಗಳು ಜಾಗ್ರತೆ ವಹಿಸಬೇಕಿದೆ ಎಂದು ಕಿರಣ ಕುಮಾರ್ ಕಿವಿಮಾತು ಹೇಳಿದರು.
ಅದರಲ್ಲೂ, ಸುಧಾರಿತ ತಂತ್ರಜ್ಞಾನಗಳು ಸವಾಲುಗಳನ್ನು ಸಮರ್ಥವಾಗಿ ಎದುರಿಸಲು, ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ವೇದಿಕೆ ರೂಪಿಸಲು ವಾತಾವರಣ ರೂಪಿಸುತ್ತವೆ. ಸಾಮಾಜಿಕ ಸಮಸ್ಯೆಗಳನ್ನು ಸಮರ್ಪಕವಾಗಿ ನಿವಾರಿಸಲು ಹಾಗೂ ನಿರ್ವಹಿಸಲು ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಳ್ಳುವುದನ್ನು ಕಲಿಯಬೇಕಿದೆ ಎಂದು ಆಪ್ತ ಸಲಹೆ ನೀಡಿದರು.
ಇಂದು ಜಗತ್ತಿನಾದ್ಯಂತ ಮಾನವನ ಮೆದುಳಿನ ಕಾರ್ಯವೈಖರಿ ಕುರಿತಂತೆ ನಿರಂತರ ಸಂಶೋಧನೆಗಳು ನಡೆಯುತ್ತಿವೆ. ಕೆಲವು ಪ್ರಯೋಗಗಳು ಬುದ್ಧಿಮತ್ತೆ ಡಿಕೋಡ್ ಮಾಡುವ ವಿಧಾನಗಳನ್ನು ತೋರಿಸಿವೆ. ಜೊತೆಗೆ, ಕೃತಕ ಬುದ್ಧಿಮತ್ತೆ ಬಳಸಿಕೊಂಡು ಮಾನವ ಮೆದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ. ಇನ್ನು ದೃಶ್ಯ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ಮೆದುಳಿನ ಕಾರ್ಯನಿರ್ವಹಣೆಯನ್ನು ಅಧ್ಯಯನ ಮಾಡಲು ನ್ಯೂರಲ್ ನೆಟ್‍ವರ್ಕ್, ಇಮೇಜ್ ರಿಕಗ್ನಿಷನ್, ಸ್ವಿಚ್ ರಿಕಗ್ನಿಷನ್, ಸ್ವಯಂಚಾಲಿತ ಕಾರುಗಳು ಮತ್ತು ಸೆಲ್ಫ್ ಹೋಂ ಆಟೋಮೇಷನ್ ಸಾಧನಗಳು ಮೆದುಳಿನ ಕಾರ್ಯನಿರ್ವಹಣೆಯ ಅಧ್ಯಯನದಿಂದ ಸಾಧ್ಯವಾಗಿದೆ ಎಂದರು.
ಮಾನವ ಮೆದುಳಿನ ಮಾದರಿಯಲ್ಲಿ ನರಮಂಡಲದ ಜಾಲಗಳನ್ನು ಕಂಡುಕೊಳ್ಳಲು ಸಂಶೋಧಕರು ಈಗ ಯಶಸ್ವಿಯಾಗಿದ್ದಾರೆ ಎಂದು ಕಿರಣಕುಮಾರ್ ವಿವರಿಸಿದರು.
ಒಂದು ದಶಕದ ಹಿಂದಿನ ತಂತ್ರಜ್ಞಾನ ಈಗ ಹಳತೆನಿಸುತ್ತದೆ. ಆದರೆ ಅದೇ ತಂತ್ರಜ್ಞಾನದ ಸುಧಾರಿತ ಅಂಶಗಳನ್ನು ಅವಲಂಬಿಸಿಯೇ ಮುಂದೆ ಹೋಗಬೇಕಾಗುತ್ತದೆ. ಈ ಕಾರಣಕ್ಕೆ ನಮಗೆ ನುರಿತ ಮತ್ತು ಜ್ಞಾನದಾಹಿ ಪೀಳಿಗೆಯ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳು ಗಮನ ಹರಿಸಬೇಕಿದೆ ಎಂದು ಕಾಳಜಿಯಿಂದ ತಾಕೀತು ಮಾಡಿದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ದಾಖಲಿಸಿರುವ ಸಾಧನೆಗಳ ಕುರಿತು ಮಾತನಾಡಿದ ಕಿರಣ ಕುಮಾರ್, ಕೃಷಿ, ಮೀನುಗಾರಿಕೆ, ರಾಷ್ತ್ರೀಯ ಉದ್ಯೋಗ ಖಾತ್ರಿ ಯೋಜನೆ, ಸಂಚಾರಿ ವ್ಯವಸ್ಥೆ ಸೇರಿದಂತೆ ದೇಶದ ಬಹುತೇಕ ಆಯಾಮಗಳಲ್ಲಿ ಬಾಹ್ಯಾಕಾಶ ವಿಜ್ಞಾನ ಗಣನೀಯ ಕೊಡುಗೆ ನೀಡುತ್ತಿದೆ. ಈ ಹಿಂದೆ ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ದೇಶದ ಕಚ್ಚಾ ವಸ್ತುಗಳನ್ನು ಅನ್ಯ ಅಭಿವೃದ್ಧಿ ಹೊಂದಿದ ದೇಶಗಳಿಗೆ ರವಾನಿಸಿ ನಮಗೆ ಬೇಕಾದ ಅಗತ್ಯ ಸಿದ್ದ ವಸ್ತುಗಳನ್ನು ತರಿಸಿಕೊಳ್ಳಲಾಗುತ್ತಿತ್ತು. ಇಂದು ಪರಿಸ್ಥಿತಿ ಬದಲಾಗಿದೆ. ಈಗ ಎಲ್ಲವನ್ನೂ ಉತ್ಪಾದಿಸುವ ಶಕ್ತಿಯನ್ನು ಭಾರತ ತನ್ನದಾಗಿಸಿಕೊಂಡಿದೆ. ಮೇಲಾಗಿ, ಜಗತ್ತಿನ ಐದನೇ ಸದೃಢ ಆರ್ಥಿಕ ಶಕ್ತಿಯಾಗಿ ಭಾರತ ರೂಪುಗೊಂಡಿರುವುದರ ಹಿಂದೆಯೂ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಸಾಕಷ್ಟಿದೆ ಪ್ರಸ್ತಾಪಿಸಿದರು.
ಇದಕ್ಕೂ ಮುಂಚೆ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅವರು ಉಭಯ ಘಟಿಕೋತ್ಸವಗಳನ್ನು ಉದ್ಘಾಟಿಸಿದರು.
ಆರಂಭದಲ್ಲಿ ಶರಣ ಬಸವ ವಿವಿ ಉಪಕುಲಪತಿ ಡಾ.ನಿರಂಜನ ನಿಷ್ಠಿ ಎಲ್ಲರನ್ನೂ ಸ್ವಾಗತಿಸಿದರು.ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಅವರು ಘಟಿಕೋತ್ಸವದಲ್ಲಿ ಆಶೀರ್ವಚನ ನೀಡಿದರು.
2382 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಶರಣ ಬಸವ ವಿಶ್ವವಿದ್ಯಾಲಯದ ಉಭಯ ಘಟಿಕೋತ್ಸವಗಳಲ್ಲಿ ಒಟ್ಟು 2382 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.ಈ ಪೈಕಿ ಮೂರನೇ ಘಟಿಕೋತ್ಸವದ ಭಾಗವಾಗಿ 96 ಹಾಗೂ ನಾಲ್ಕನೇ ಘಟಿಕೋತ್ಸವದ ಭಾಗವಾಗಿ 170 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಮತ್ತು 71 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.ಶರಣಬಸವೇಶ್ವರ ವಿದ್ಯಾವರ್ಧಕ
ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲ್ ಕುಮಾರ್ ಬಿಡವೆ, ಸಮ ಕುಲಪತಿ ಡಾ.ವಿ.ಡಿ.ಮೈತ್ರಿ, ಡಾ.ಲಕ್ಷ್ಮಿ ಮಾಕಾ, ಹಣಕಾಸು ಅಧಿಕಾರಿ ಪೆÇ್ರ.ಕಿರಣ ಮಾಕಾ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವಿ.ಶಿವಾನಂದನ್ ಸೇರಿದಂತೆ ವಿವಿಧ ನಿಕಾಯಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಕಲ್ಯಾಣ ಭಾಗದ ಪ್ರಥಮ ಖಾಸಗಿ ವಿವಿ

18ನೇ ಶತಮಾನದಲ್ಲಿ ಸ್ಥಾಪಿಸಲ್ಪಟ್ಟ ಶ್ರೀ ಶರಣಬಸವೇಶ್ವರ ಸಂಸ್ಥಾನವು ದಯೆ ಮತ್ತು ಪ್ರೀತಿಯ ಪ್ರತೀಕವಾಗಿದೆ. ಇದೇ ನೆಲೆಗಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಪ್ರಥಮ ಶರಣ ಬಸವ ವಿಶ್ವವಿದ್ಯಾಲಯ ಆರಂಭಿಸಿ ಜ್ಞಾನ ದಾಸೋಹವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದು ಶರಣ ಬಸವ ವಿವಿ ಕುಲಾಧಿಪತಿಗಳು ಹಾಗೂ ಮಹಾದಾಸೋಹಿ ಶರಣ ಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ನುಡಿದರು

ಅವಳಿ ಘಟಿಕೋತ್ಸವ ವಿಶೇಷತೆಗಳು
ಆಫ್‍ಲೈನ್ ಮತ್ತು ಆನ್‍ಲೈನ್ ಮೋಡ್ ನಲ್ಲಿ ನಡೆದ ಘಟಿಕೋತ್ಸವ
ಯೂಟ್ಯೂಬ್ ಚಾನೆಲ್ hಣಣಠಿs://ಙouಣu.bಡಿ/ಜಿ6ಊಏeಠಿಟಿಘಿsW4 ಮೂಲಕ ಘಟಿಕೋತ್ಸವ ವೀಕ್ಷಣೆಗೆ ಅವಕಾಶ ಆನ್ ಲೈನ್ ಮೂಲಕ ಭಾಷಣ ಪ್ರಸ್ತುತಪಡಿಸಿದ ವಿಜ್ಞಾನಿ ಡಾ ಸತೀಶ್ ರೆಡ್ಡಿ.


ಐವರಿಗೆ ಗೌರವ ಡಾಕ್ಟರೇಟ್
ಶರಣ ಬಸವ ವಿಶ್ವವಿದ್ಯಾಲಯದ ಮೂರು ಮತ್ತು ನಾಲ್ಕನೇ ಘಟಿಕೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಐವರು ಮಹನೀಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಸಾಮಾಜಿಕ ಕಾರ್ಯಕರ್ತೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಡಾ.ಮಂಜಮ್ಮ ಜೋಗತಿ ಹಾಗೂ ಮಹಾರಾಷ್ಟ್ರದ ಸೋಲಾಪುರ ಹಾಗೂ ಕರ್ನಾಟಕದ ಹರಿಹರದ ಶಿವಯೋಗಾಶ್ರಮದ ಶ್ರೀ ಶರಣಬಸವಲಿಂಗ ಶಿವಯೋಗಿಗಳು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಇನ್ನು, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ದಿ. ಬಸವರಾಜಪ್ಪ ಅಪ್ಪ ಅವರಿಗೆ ಮರಣೋತ್ತರವಾಗಿ ಘೋಷಿಸಿದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ದಿ.ಬಸವರಾಜಪ್ಪ ಅಪ್ಪ ಅವರ ಪುತ್ರಿ ಸ್ವೀಕರಿಸಿದರು.
ಇದಲ್ಲದೆ ಭಾಷಾ ನಿಕಾಯದ ಮುಖ್ಯಸ್ಥರು ಹಾಗೂ ಹಿರಿಯ ಪ್ರಾಧ್ಯಾಪಕರಾದ ಡಾ.ಎಸ್.ಜಿ.ಡೊಳ್ಳೇಗೌಡರಿಗೆ ಘಟಿಕೋತ್ಸವದಲ್ಲಿ ಡಿ.ಲಿಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಭಾರತದ ಸಾಧನೆ ಕೊಂಡಾಡಿದ ಸತೀಶ್ ರೆಡ್ಡಿ
ಒಂದು ಕಾಲದಲ್ಲಿ ಕೇವಲ 400ರಷ್ಟಿದ್ದ ಸ್ಟಾಟ್9 ಅಪ್ ಪ್ರಮಾಣ ಇಂದು 76 ಸಾವಿರದ ಹಂತಕ್ಕೆ ತಲುಪಿರುವುದರ ಹಿಂದೆ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆಯೇ ಕಾರಣ ಎಂದು ಖ್ಯಾತ ವಿಜ್ಞಾನಿ ಹಾಗೂ ಕೇಂದ್ರ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಡಾ.ಸತೀಶ್ ರೆಡ್ಡಿ ನುಡಿದರು.ಶರಣ ಬಸವ ವಿವಿ ನಾಲ್ಕನೇ ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಆನ್ ಲೈನ್ ಮೂಲಕ ಮಾತನಾಡಿದ ಅವರು, ಭಾರತದ ಯುವ ಪೀಳಿಗೆಯ ಬದಲಾಗಿರುವ ಮನಸ್ಥಿತಿಯೇ ಇದಕ್ಕೆ ಕಾರಣ ಎಂದರು.