ಶರಣ ನೂಲಿ ಚಂದಯ್ಯಾ ಕಾಯಕದಿಂದ ಗುರುಜಂಗಮರ ಸೇವೆ: ಗಂಗಾಬಾಯಿ ಗಲಗಲಿ

ಇಂಡಿ: ಆ.7: ಪಟ್ಟಣದ ಬಸವರಾಜೇಂದ್ರ ದೇವಸ್ಥಾನದ ಸಭಾ ಭವನದಲ್ಲಿ ಹುಣ್ಣಿಮೆ ದಿವಸ ಆಯೋಜಿಸಿದ 73ನೇ ಹುಣ್ಣಿಮೆ ಬೆಳಕು ಕಾರ್ಯಕ್ರಮ ಕದಳಿ ವೇದಿಕೆ ಅಧ್ಯಕ್ಷೆ ಶ್ರೀಮತಿ ಗಂಗಾಬಾಯಿ ಗಲಗಲಿ ಇವರು ಶರಣ ನೂಲಿ ಚಂದಯ್ಯಾ ಕುರಿತು ಉಪನ್ಯಾಸ ನೀಡಿದರು.

ಪ್ರತಿಯೋಬ್ಬ ಮಾನವನು ಕಾಯಕವಿಲ್ಲದೆ ಜೀವನದ ನಡೇಸುವುದು ಕಷ್ಟ ,ಅಸಾಧ್ಯ. 12ನೇ ಶತಮಾನದ ಅಣ್ಣ ಬಸವಣ್ಣನವರು ಕಾಯಕಕ್ಕೆ ಮಹತ್ವ ಸ್ಥಾನ ನೀಡಿದ್ದಾರೆ ಕಾಯಕವೇ ಕೈಲಾಸ ಎಂದಿದ್ದಾರೆ. ಕಾಯಕದಲ್ಲಿ ಕೀಳಿಲ್ಲ ಮೇಲಿಲ್ಲ ದುಡಿದು ತಿನ್ನಬೇಕು ಎಂದು ಶಿವಶರಣರು ಹೇಳಿದ್ದಾರೆ. ಕಾಯಕದಿಂದ ಬಂದ ಆದಾಯ ಜಂಗಮರ ಸೇವೆ ,ಮಾಡುತ್ತಿದ್ದರು.ಬಡವರ ಅನಾಥರ ದುರ್ಬಲರ ಸೇವೆಯಲ್ಲಿ ನೂಲಿ ಚಂದಯ್ಯನವರು ದೇವರನ್ನು ಕಾಣುತ್ತಿದ್ದರು.ನೂಲಿಯ ಚಂದಯ್ಯ ಹಗ್ಗವನ್ನು ನೈಯ್ದು ಅದರಿಂದ ಬಂದ ಹಣದಿಂದ ದಾಸೋಹ.ಜಂಗಮರ ಸೇವೆ ಮಾಡುತ್ತಿದ್ದರು ಎಂದರು.

ಶ್ರೀಸಿದ್ದಾರೋಢ ಶ್ರೀಮಠದ ಸ್ವರೂಪಾನಂದ ಮಹಾಸ್ವಾಮಿಗಳು ದಿವ್ಯಸಾನಿಧ್ಯವಹಿಸಿ ಗುರುಲಿಂಗ ಜಂಗಮರ ಕುರಿತು ಆರ್ಶಿವಚನ ನೀಡಿದರು.

ಶಿಕ್ಷಕ ಅಂಬಣ್ಣಾ ಸುಣಗಾರ, ಪ್ರೋ. ಐ.ಬಿ ಸುರಪೂರ, ಆರ್.ವ್ಹಿ ಪಾಟೀಲ, ಬಿ.ಎಸ್ ಪಾಟೀಲ ಉಪಸ್ಥಿತರಿದ್ದರು.