ಶರಣ- ದಾಸ ಸಾಹಿತ್ಯಕ್ಕೆ ಅವಿನಾಭಾವ ಸಂಬಂಧವಿದೆ   

ದಾವಣಗೆರೆ ಮಾ.9;   ಸತ್ಯ ಶುದ್ಧವಾದ ಕಾಯಕದಿಂದ ಸಮಾಜಕ್ಕೆ ಅನುಕೂಲ ಮಾಡಿಕೊಡುವುದೇ ಶಿವಾನುಭವಸಂಪದ  ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ  ಪಿ ನಾಗಭೂಷಣ ಗೌಡ್ರು ನುಡಿದರುಅವರು ಇಲ್ಲಿನ ದೇವರಾಜ ಅರಸು ಬಡಾವಣೆಯಲ್ಲಿರುವ ಹಾಲಕೆರೆ ಶ್ರೀ ಅನ್ನದಾನೇಶ್ವರ ಮಠದಲ್ಲಿ ಏರ್ಪಡಿಸಿದ್ದ 255 ನೇ ಶಿವಾನುಭವ ಸಂಪದದಲ್ಲಿ ಉಪನ್ಯಾಸ ನೀಡುತ್ತಾ 12 ನೇ ಶತಮಾನದಿಂದಿಚೆಗೆ ಬಂದ ಶರಣರ ಕ್ರಾಂತಿ ನಮ್ಮ ಜೀವನಕ್ಕೆ ಸುಲಭವಾದ ಮಾರ್ಗ ತೋರಿಸಿದ್ದಾರೆ ಎಂದರು.ಸಮಾಜದಲ್ಲಿ ನಾವುಗಳು ಏನು ಬಿತ್ತುತ್ತೇವೆವೋ ಅದನ್ನು ಬೆಳೆಯುತ್ತೇವೆ. ಮಕ್ಕಳಿಗೆ ವಿದ್ಯಾಭ್ಯಾಸದ ಹಂತದಲ್ಲಿಯೇ ಸಂಸ್ಕಾರ. ಸಂಸ್ಕೃತಿ.ವಿಭೂತಿ. ದೊಡ್ಡವರು. ಎಂಬ ಭಾವನೆಯನ್ನು ತಿಳಿಸಿದ್ದರಿಂದ ಸಮಾಜದಲ್ಲಿ ಇಂದು ಮಠಮಾನ್ಯಗಳಿಗೆ ಉನ್ನತವಾದ ಬೆಲೆ ಇದೆ ಎಂದು ನುಡಿದು.ಆರ್ಥಿಕವಾಗಿ, ಸಾಮಾಜಿಕವಾಗಿ ನಮಗಿಂತಲೂ ಕೆಳಮಟ್ಟದಲ್ಲಿರುವವರನ್ನು ಮೇಲೆತ್ತಲು ಶರಣರು ಜಾತ್ಯಾತೀತವಾಗಿ ಶ್ರಮಿಸಿದರು ಆದರೆ ಇಂದು ಅದರ ಉದ್ದೇಶಗಳು ಪ್ರತ್ಯೇಕಗೊಂಡು  ಕವಲು ದಾರಿಯಲ್ಲಿದ್ದರೂ ಸಹ ಅವರವರ ಸಮಾಜದಿಂದ ಒಂದುಗೂಡುತ್ತಿವೆ.12 ನೇ ಶತಮಾನದಲ್ಲಿ ಒಂದು ರೀತಿ ಕ್ರಾಂತಿಯಾಗಿದ್ದರೆ.21 ನೇ ಶತಮಾನದಲ್ಲಿ ಮತ್ತೊಂದು ಕ್ರಾಂತಿಯಾಗುತ್ತಿದೆ ಎಂದರು.