ಶರಣ ಕಿನ್ನರಿ ಬೊಮ್ಮಯ್ಯನವರ ಆದರ್ಶ ಪಾಲಿಸಿ : ಶಾಸಕ ಡಾ ಸಿದ್ದು ಪಾಟೀಲ್

ಹುಮನಾಬಾದ : ಸೆ.5:ಭಕ್ತಿ ಭಂಡಾರಿ ಬಸವಣ್ಣನವರು ತತ್ವದಂತೆವ ನಡೆದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಬೆಂಗಳೂರು ಬಸವ ಕೇಂದ್ರ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ ತಾಲೂಕಿನ ಹಳ್ಳಿಖೇಡ (ಕೆ) ಶರಣ ಕಿನ್ನರಿ ಬಮ್ಮೊಯನವರ 54ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಿಳಿಸಿದರು. ಬೀದರ್ ಜಿಲ್ಲೆ ಬಸವಣ್ಣನವರು ನಲೆದಾಡಿದ ಪವಿತ್ರ ಭೂಮಿಯಾಗಿದೆ ಬಸವಣ್ಣನವರ ವಚನಗಳು ಸಮಾಜಕ್ಕೆ ದಾರಿ ದೀಪವಾಗಿದೆ ಬಸವಣ್ಣನವರ ವಚನಗಳು 50 ಭಾಷಗಳಲ್ಲಿ ಅನುವಾದ ಮಾಡಿ ಪ್ರಕಟಿಸುವ ಗುರಿ ಇದೆ ಸಧ್ಯ 28 ಭಾಷೆಗಳಲ್ಲಿ ಅನುವಾಧಮಾಡಿ ಪ್ರಕಟಿಸಲಾಗಿದೆ. ಕಿನ್ನರಿ ಬೊಮ್ಮಯನವರ ಆದರ್ಶ ತತ್ವದಂತೆ ನಡೆಯಬೇಕೆಂದು ಜತ್ತಿ ಕರೆ ನೀಡಿದರು. ಶರಣರ ನಾಡಿನಲ್ಲಿ ಶರಣ ಸಂಸ್ಕøತಿಯ ವಿರುದ್ಧ ನಡೆಯುತ್ತಿರುವುದು ವಿಷಾದ ಸಂಗತಿ ಎಂದರು ಹಳ್ಳಿಖೇಡ (ಕೆ) ಗ್ರಾಮವನ್ನು ಹಳ್ಳಿಖೇಡ ಕಲ್ಯಾಣ ಎಂದು ನಾಮಕರಣ ಮಾಡಲು ಸರ್ಕಾರಕ್ಕೆ ಒತ್ತಾಯಿಸಿದರು. ಶಾಸಕ ಡಾ. ಸಿದ್ದು ಪಾಟೀಲ್ ಜಾತ್ರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿ ಹಳ್ಳಿಖೇಡ (ಕೆ) ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಹಾಗೆ ತಿಳಿಸಿದರು. ಚುನಾವಣೆ ಸಂದರ್ಭದಲ್ಲಿ ಕೊಟ್ಟ ಆಶ್ವಾಸನೆಯಂತೆ ಆರೋಗ್ಯಕ್ಕೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುತ್ತೇನೆ ಎಂದು ತಿಳಿಸಿದರು.
ಬಿಎ???ಸ್ಕೆ ಅಧ್ಯಕ್ಷ ಸುಭಾಷ್ ಕಲ್ಲೂರು, ಕಲಬುರಗಿಯ ಗದ್ದುಗೆ ಮಠದ ಚರಲಿಂಗ ಮಹಾಸ್ವಾಮಿಗಳು ಹಳ್ಳಿಖೇಡ ಮಠದ ಸಿದ್ಧರಾಮ ಮಹಾಸ್ವಾಮಿಗಳು, ಖೇಳಗಿ ಮಠದ ಶಿವಲಿಂಗ ಮಹಸ್ವಾಮಿಗಳು ಮಾತನಾಡಿದರು, ಸುಭಾಷ ವಾರದ, ನಾಗೇಶ ಕಲ್ಲೂರ ಗ್ರಾಮ ಪಂಚಾಯತ ಅಧ್ಯಕ್ಷ ಶಿವಕುಮಾರ ಪಾಟೀಲ ,ಉಪಸ್ಥಿತರಿದ್ದರು. ಚಿದಾನಂದ ಚಿಕ್ಕಮಠ ಕಾರ್ಯಕ್ರಮ ನಿರೂಪಿಸಿದರು. ಭಕ್ತರಾಜ ಚಿತ್ತಾಪೂರೆ ಸ್ವಾಗತಿಸಿದರು. ಸಿದ್ರಾಮ ಇಂಡಿ ಕೊನೆಯಲ್ಲಿ ವಂದಿಸಿದರು.