ಶರಣು ಸಲಗಾರ್ ಅವರಿಗೆ ಬಿ ಫಾರಂ ವಿತರಣೆ

ಬಸವಕಲ್ಯಾಣ:ಮಾ.27: ವಿಧಾನ ಸಭೆ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರು ಶರಣ ಸಲಗರ ಅವರಿಗೆ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಶುಕ್ರವಾರ ಪಕ್ಷದ ರಾಜ್ಯ ಕಾರ್ಯಾಲಯ ಕಾರ್ಯಾದರ್ಶಿ ಲೋಕೇಶ್ ಅಂಬೆಕಲ್ಲು ಮತ್ತು ಸಂಸದ ಭಗವಂತ್ ಖೂಬಾ ಅವರು, ಬಿ ಫಾರಂ ವಿತರಿಸಿ ಶುಭ ಕೋರಿದರು. ಪಕ್ಷದ ಕಾರ್ಯಾಲಯಕ್ಕೆ ಆಗಮಿಸಿದ ಶರಣು ಸಲಗಾರ್ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ನಾರಂಜೆ ಸಹಕಾರಿ ಸಕ್ಕರೆ ಕಾರ್ಖಾನೆಯ ಚಯರ್ಮ್ಯಾನ್ ಡಿ.ಕೆ. ಸಿದ್ರಾಮ್, ಮಂಡಲ ಅಧ್ಯಕ್ಷರಾದ ಅಶೋಕ್ ವಕಾರೆ, ಇತರ ಗಣ್ಯರು ಇದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀಮತಿ ಮಂಗಳಾ ಸುರೇಶ್ ಅಂಗಡಿ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪ್ರತಾಪ ಗೌಡ ಪಾಟೀಲ್ ಅವರಿಗೆ ಅವರ ಆಪ್ತರ ಮುಖಾಂತರ ಬಿ ಫಾರಂ ಕಳುಹಿಸಿಕೊಡಲಾಯಿತು.