ಶರಣ,ಹರಿದಾಸ ಸಾಹಿತ್ಯದಿಂದ ಕನ್ನಡಸಾಹಿತ್ಯ ಪರಿಪೂರ್ಣ

ಬೀದರ,ಮಾ.23: ಕನ್ನಡ ಸಾಹಿತ್ಯದ ಶರಣ ಮತ್ತು ಹರಿದಾಸ ಸಾಹಿತ್ಯಗಳು ಅಪೂರ್ವ ಭಾಗಗಳಾಗಿವೆ. ಇವುಗಳು ಕನ್ನಡ ಸಾಹಿತ್ಯವನ್ನು ಪರಿಪೂರ್ಣ ಮಾಡಿವೆ. ಅಲ್ಲದೆ ಜನಜೀವನ ಸಮೃದ್ಧಿಗೊಳಿಸಿವೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ ನುಡಿದರು.ಅವರು ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು ಹಾಗೂ ಋಷಿಕೇಶ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಅರುಣೋದಯ ಪ್ರೌಢ ಶಾಲೆಯಲ್ಲಿ ಜರುಗಿದ ದಾಸ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಗರ ಬಿ.ವಿ.ಭೂಮರೆಡ್ಡಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮಾರುತಿ ಬಿ ಜಾನಕನೋರ ದಾಸ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ ವಿಷಯ ಕುರಿತು ಉಪನ್ಯಾಸ ನೀಡುತ್ತಾ, ಭಾರತೀಯ ಸಂಸ್ಕøತಿಯು ವಿಶಿಷ್ಟವಾದದ್ದು, ಇಲ್ಲಿ ನಾನಾ ಧರ್ಮಗಳು, ಭಾಷೆಗಳು ಮತ್ತು ಆಚರಣೆಗಳು. ಶ್ರೇಷ್ಠ-ಕನಿಷ್ಠ, ಮೇಲು-ಕೀಳುಗಳ ಸಾಮಾಜಿಕ ತಾರತಮ್ಯ, ಭೇಧಗಳು, ಅನಿಷ್ಠಗಳ ವಿರುದ್ಧ ಭಕ್ತಿ ಮಾರ್ಗವಾಗಿ ಜನಾಂದೋಲನವನ್ನು ಹರಿದಾಸರು ನಡೆಸಿ, ಕನ್ನಡದ ಕಿರ್ತನೆ ಮೂಲಕ ಜಗತ್ತಿನ ಕಲ್ಯಾಣವನ್ನು ಮಾಡಿದ್ದಾರೆ. ಸಮಾಜದಲ್ಲಿನ ಕಲ್ಮಶವನ್ನು ತೊಳೆದು ಆರೋಗ್ಯ ವಾತಾವರಣವನ್ನು ನಿರ್ಮಿಸಲು ತಮ್ಮ ಆಯುಷ್ಯವನ್ನೇ ಧಾರೆಯೆರೆದಿದ್ದಾರೆ ಎಂದರು.
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಡಾ. ರವೀಂದ್ರ ಲಂಜವಾಡಕರ ಅವರು ಅಧ್ಯಕ್ಷತೆಯನ್ನು ವಹಿಸಿದರು.ಬೀದರನ ಋಷಿಕೇಶ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಶೈಲಜಾ ಸ್ವಾಮಿ ಕೀರ್ತನೆ ಗಾಯನ ಮಾಡಿದರು. ನಿರೂಪಣೆಯನ್ನುಅಲ್ಕಾವಾಣಿ ಎಚ್, ಸ್ವಾಗತವನ್ನು ಜ್ಯೋತಿ ಸಂಗೋಳಗಿ, ವಂದನಾರ್ಪಣೆಯನ್ನು ನೀಲಮ್ಮ ಗಜಲೆ ಮಾಡಿದರು.