ಶರಣಸಂಸ್ಕೃತಿ ಉತ್ಸವದಲ್ಲಿಸ್ವಾತಂತ್ರ್ಯ ಅಮೃತ ಮಹೋತ್ಸವ

ಚಿತ್ರದುರ್ಗ. ಅ.೧೩:  ಇತಿಹಾಸವನ್ನು ಅರಿತಾಗ ಮಾತ್ರ ಇತಿಹಾಸ ನಿರ್ಮಾಣ ಮಾಡಲು ಸಾಧ್ಯ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು. ಶ್ರೀಗಳು ಹೇಳಿದರು.  ಶೀಬಾರದ ‘ಪುಣ್ಯಭೂಮಿ’ ಎಸ್ಸೆನ್ ಸ್ಮಾರಕದಲ್ಲಿ ಸ್ವಾತಂತ್ರö್ಯ ಅಮೃತ ಮಹೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಈ ಕಾರ್ಯಕ್ರಮ ನಿಜಲಿಂಗಪ್ಪನವರ ಪುಣ್ಯಭೂಮಿಯಲ್ಲಿ ನಡೆಯುತ್ತಿರುವುದು ಅರ್ಥಪೂರ್ಣವಾಗಿದೆ. ನಿಜಲಿಂಗಪ್ಪನವರು ಗಾಂಧಿವಾದಿಗಳು, ಗಾಂಧಿಯವರ ಒಡನಾಡಿಗಳು ಆಗಿದ್ದವರು. ಪರತಂತ್ರವಾಗಿದ್ದ ದೇಶಕ್ಕೆ ಸ್ವಾತಂತ್ರö್ಯ್ರವನ್ನು ತಂದುಕೊಟ್ಟ ಕೀರ್ತಿ ಹೋರಾಟದ ಮುಂಚೂಣಿಯಲ್ಲಿದ್ದ ಮಹಾತ್ಮಾ ಗಾಂಧೀಜಿಯವರಿಗೆ ಸಲ್ಲುತ್ತದೆ. ಭಾರತ ನಿರ್ಮಾಣದ ಬಹುದೊಡ್ಡ ಪ್ರೇರಕ ಶಕ್ತಿ ಮಹಾತ್ಮಾ ಗಾಂಧೀಜಿಯವರು. ಹೊರದೇಶದಲ್ಲಿ ಪರಕೀಯರು ಗಾಂಧೀಜಿಯವರಿಗೆ ಮಾಡಿದ ಅವಮಾನ ನಮ್ಮ ದೇಶಕ್ಕೆ ಸ್ವಾತಂತ್ರö್ಯ ತಂದುಕೊಡಲು ವರವಾಯಿತು. ಗಾಂಧೀಜಿಯವರ ಶಕ್ತಿ, ಗಾಂಧೀಜಿಯವರ ಮಹತ್ವ ಹೊರದೇಶಕ್ಕೆ ಹೋದಾಗ ಮಾತ್ರ ಗೊತ್ತಾಗುತ್ತದೆ. ಇಂದಿನ ವಿದ್ಯಾರ್ಥಿಗಳು ಅಬ್ದುಲ್ ಕಲಾಂರವರ ಬಗ್ಗೆ ಹೇಳುತ್ತಾರೆ. ವಿಶ್ವೇಶ್ವರಯ್ಯನವರ ಬಗ್ಗೆ ಹೇಳುತ್ತಾರೆ. ಜೊತೆಗೆ ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಮಹಾತ್ಮಾ ಗಾಂಧೀಜಿಯವರನ್ನು ಸಹ ಮರೆಯದೆ ಸ್ಮರಣೆ ಮಾಡಬೇಕೆಂಬುದು ಇಂದಿನ ಅಗತ್ಯತೆಯಾಗಿದೆ. ನಮ್ಮ ದೃಷ್ಟಿಯಲ್ಲಿ ಮಹಾತ್ಮಾ ಗಾಂಧೀಜಿಯವರನ್ನು ಸೇರಿ ಮೂರು ಜನ ಗಾಂಧಿಯವರನ್ನು ಕಂಡಿದ್ದೇವೆ. ಕರ್ನಾಟಕ ಗಾಂಧಿ ಹರ್ಡೇಕರ್ ಮಂಜಪ್ಪನವರು, ಇವರು ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಜವಾಬ್ದಾರಿಯ ಅಚ್ಚುಕಟ್ಟುತನದಿಂದ ಗಾಂಧೀಜಿಯವರ ಪ್ರಶಂಸೆಗೆ ಪಾತ್ರರಾಗಿದ್ದರು. ಮತ್ತೊಬ್ಬ ಗಾಂಧಿಯೆAದರೆ ಆಫ್ರಿಕಾದ ಗಾಂಧಿ ಎನಿಸಿದ ನೆಲ್ಸನ್ ಮಂಡೇಲಾರವರು 25 ವರ್ಷಗಳ ಕಾಲ ಕಾರಾಗೃಹ ವಾಸವನ್ನು ಅನುಭವಿಸಿದವರು. ಗಾಂಧೀಜಿಯವರಿಗೆ ಸಂಬAಧಿಸಿದ, ಗಾಂಧೀಜಿಯವರು ಬಳಸಿದ ಚರಕವನ್ನು ಹೊಂದಿದ ದೊಡ್ಡ ವಸ್ತು ಸಂಗ್ರಾಹಾಲಯವನ್ನು ಬ್ರೆಜಿಲ್‌ನಲ್ಲಿ 60 ವರ್ಷದ ಒಬ್ಬ ಮಹಿಳೆ ನೆಡೆಸುತ್ತಿರುವುದು ಗಾಂಧೀಜಿಯವರ ಮಹತ್ವವನ್ನು ತಿಳಿಸುತ್ತದೆ. ಶ್ರೀಮಠದ ಜಯದೇವ ಗುರುಗಳ ದರ್ಶನಕ್ಕೆ ಗಾಂಧೀಜಿಯವರು ಬಂದಾಗ, ಆಗ ಸಮಾಜದ ಪೆಡಂಭೂತವಾಗಿದ್ದ ಅಸ್ಪೃಶ್ಯತೆ ನಿವಾರಣೆ ಬಗ್ಗೆ ಜಯದೇವ ಸ್ವಾಮೀಜಿಯವರು ಗಾಂಧೀಜಿಯವರನ್ನು ಕೇಳಿದಾಗ ಗಾಂಧೀಜಿಯವರು ಅಸ್ಪೃಶ್ಯರನ್ನು ನಾನು ಹರಿಜನರೆಂದು ಕರೆದು ಅವರನ್ನು ಇತರರಂತೆ ಸಮಾನ ಸ್ಥಾನದಲ್ಲಿ ಕಾಣುತ್ತೇನೆ ಎಂದು ತಿಳಿಸಿದ್ದರು. ಹೀಗೆ ಗಾಂಧೀಜಿಯವರು ಹಾಗೂ ಸ್ವಾಮೀಜಿಗಳ ನಡುವೆ ಆಪ್ತವಾದ ತಾತ್ವಿಕ ಚಿಂತನೆಗಳ ಬಗ್ಗೆ ಆರೋಗ್ಯಕರವಾದ ಚರ್ಚೆಗಳು ನಡೆಯುತ್ತಿದ್ದವು ಎಂದು ನುಡಿದರು.ತಿಪಟೂರು ಶ್ರೀ ಷಡಕ್ಷರಮಠದ ಶ್ರೀ ರುದ್ರಮುನಿ ಸ್ವಾಮಿಗಳು ಮಾತನಾಡಿ, ಗಾಂಧೀಜಿಯವರು ತಮ್ಮ ಅಂತರಂಗವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಂಡಿದ್ದರು. ಆ ಕಾರಣದಿಂದಲೇ ಅವರು ಸ್ವಾತಂತ್ರö್ಯ ಹೋರಾಟದಲ್ಲಿ ನಿಂತು ಮಾರ್ಗದರ್ಶನ ನೀಡಲು ಸಾಧ್ಯವಾಯಿತು. ನಾವು ಸ್ವಾತಂತ್ರö್ಯ ಪಡೆಯಲು ಸಾಧ್ಯವಾಯಿತು. ಗಾಂಧೀಜಿಯವರ ಅಂರ್ತಮುಖದ ಚಿಂತನೆ ಹಾಗೂ ಸಮಾಜಮುಖಿ ನಡೆ ವಿಶ್ವಕ್ಕೆ ಮಾದರಿಯಾಗಿದೆ. ಬದುಕು ಎನ್ನುವುದು ಸಾಧನೆ ಮಾಡಲಿಕ್ಕೆ, ಗುರಿ ತಲುಪಲಿಕ್ಕೆ ಎನ್ನುವುದನ್ನು ನಾವು ಮಾರೆಯಬಾರದು ಎಂದು ತಿಳಿಸಿದರು. ಹಿರಿಯ ಗಾಂಧಿವಾದಿ ಶ್ರೀ ವೇಮಗಲ್ ಸೋಮಶೇಖರ್ ಮಾತನಾಡಿ, ಆಫ್ರಿಕಾದಿಂದ ಭಾರತಕ್ಕೆ ಬಂದ ಗಾಂಧೀಜಿಯವರು 5 ತಿಂಗಳಲ್ಲೇ ಕರ್ನಾಟಕಕ್ಕೇ ಆಗಮಿಸಿದ್ದರು. ಇದು ಕರ್ನಾಟಕದ ಮೇಲೆ ಗಾಂಧೀಜಿಯವರಿಗೆ ಇರುವ ಪ್ರೀತಿಯನ್ನು ತೋರಿಸುತ್ತದೆ. ಇದಕ್ಕೆ ಕಾರಣ ಕನ್ನಡ ಕವಿ ಡಿವಿಜಿಯವರು. ಒಮ್ಮೆ ಮೈಸೂರಿನಲ್ಲಿ ಗೋಪಾಲ ಕೃಷ್ಣ ಗೋಖಲೆಯವರ ಚಿತ್ರ ಅನಾವರಣಕ್ಕಾಗಿ ನಂತರ 2ನೇ ಬಾರಿ ಬೆಳಗಾವಿಗೆ ಬರುತ್ತಾರೆ. ಗಾಂಧೀಜಿಯವರು ಬರುತ್ತಾರೆಂದರೆ ಸಾಕು ಜನಸಾಗರ ಸೇರುತ್ತಿತ್ತು. ಗಾಂಧೀಜಿಯವರ ಮಾತುಗಳಿಂದ ಪ್ರೇರಣೆಗೊಂಡ ಎಷ್ಟೋ ಜನ ವಿದೇಶಿ ಬಟ್ಟೆಗಳನ್ನು ಸುಟ್ಟು ಹಾಕಿದರು. 1922 ರಲ್ಲಿ ತಮ್ಮ ಆರೋಗ್ಯ ಸುಧಾರಣೆಗಾಗಿ ನಂದಿ ಬೆಟ್ಟಕ್ಕೆ ಬಂದು ಬಹು ದಿನ ಇದ್ದರು. 1921 ರಲ್ಲಿ ಗಾಂಧೀಜಿಯವರು ತುಂಡು ಬಟ್ಟೆ ಧರಿಸಿದ್ದು ತಮ್ಮ ಕೊನೆಗಾಲದವರೆಗೂ ಇದೇ ಪದ್ಧತಿಯನ್ನು ಮುಂದುವರೆಸಿದರು. ಆ ಕಾಲದಲ್ಲಿ ಅದೆಷ್ಟೋ ಸರಳ ವಿವಾಹಗಳನ್ನು ಗಾಂಧೀಜಿಯವರು ಮಾಡಿಸಿದ್ದರು. ಅವರ ಮೌಲ್ಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ರಾಜ್ಯಸಭೆ ಮಾಜಿ ಸದಸ್ಯರಾದ ಶ್ರೀ ಹೆಚ್.ಹನುಮಂತಪ್ಪನವರು ಮಾತನಾಡಿ, ಸ್ವಾತಂತ್ರö್ಯ ಎನ್ನುವುದು ನಮಗೆ ಪುಕ್ಕಟೆಯಾಗಿ ಸಿಕ್ಕಿಲ್ಲ. ತಕ್ಕಡಿ ಹಿಡಿದು ವ್ಯಾಪಾರಕ್ಕೆ ಬಂದ ಬ್ರಿಟೀಷರು 200 ವರ್ಷಗಳ ಕಾಲ ಈ ದೇಶವನ್ನು ಆಳಿದರು. ಪರಕೀಯರಿಂದ ಬಿಡಿಸಿಕೊಳ್ಳಲಿಕ್ಕಾಗಿ ಹಲವಾರು ಹೋರಾಟಗಳು ನಡೆದವು. ಗಾಂಧೀಜಿಯವರ ಹೋರಾಟದ ಫಲವಾಗಿ ದೇಶ ಸ್ವಾತಂತ್ರö್ಯ ಕಂಡಿತು. ಗಾಂಧೀಜಿಯವರು ಭಿನ್ನ ಹೋರಾಟದಿಂದ ಸ್ವಾತಂತ್ರö್ಯ ತಂದು ಕೊಟ್ಟರು. ಖಾದಿ, ಗ್ರಾಮೋದ್ಯೋಗ, ಚರಕ, ಸತ್ಯ, ಅಹಿಂಸೆ ಇವೇ ಅವರ ಪ್ರಮುಖ ಅಸ್ತçಗಳು. ಸ್ವಾತಂತ್ರö್ಯ ಪೂರ್ವದಲ್ಲಿ ಹುಟ್ಟಿದ ನಮ್ಮಂತವರಿಗೆ ಬ್ರಿಟೀಷರ ಗುಲಾಮಗಿರಿತನದ ಕ್ರೂರ ಪರಿಚಯವಿದೆ. ಆಗಿನ ಸ್ವಾತಂತ್ರö್ಯ ಹೋರಾಟಕ್ಕೆ ಜಾತಿಯತೆ, ಧರ್ಮದ ಸ್ಪರ್ಶವಿರಲಿಲ್ಲ. ದೇಶಕ್ಕೆ ಸ್ವಾತಂತ್ರö್ಯ ಬೇಕೆನ್ನುವುದೇ ಮುಖ್ಯವಾಗಿತ್ತು. ನಿಜಲಿಂಗಪ್ಪನವರು ನಾಲ್ಕು ಅವಧಿಗೆ 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರೂ ಸಹ ಆಸ್ತಿ ಮಾಡಲಿಲ್ಲ. ನಿಷ್ಕಪಟ ರಾಜಕಾರಣಿಯಾಗಿದ್ದರು ಎಂದು ನುಡಿದರು.ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾದ ಶ್ರೀ.ಮಾನಪ್ಪ ವಜ್ಜಲ್ ಮಾತನಾಡಿ, ಮೈಸೂರಿನ ದಸರಾ ನೆನಪಿಸುವಂತೆ ಶ್ರೀಗಳು ಚಿತ್ರದುರ್ಗದಲ್ಲಿ ಶರಣಸಂಸ್ಕೃತಿ ಉತ್ಸವವನ್ನು ಪ್ರತಿವರ್ಷ ಆಯೋಜಿಸುತ್ತಾರೆ. ವಿಶ್ವಗುರು ಬಸವಣ್ಣನವರನ್ನು ನೆನಪಿಸಿಕೊಂಡಾಗ, ಅವರ ಚರಿತ್ರೆಯನ್ನು ನೋಡಿದಾಗ ಬಸವಣ್ಣನವರು ತಳ ಸಮಾಜದವರನ್ನು ಮುಖ್ಯವಾಹಿನಿಗೆ ಬರುವಂತೆ ಮಾಡಿದರು. ಹಾಗೆಯೇ ಮುರುಘಾ ಶರಣರು ಎಲ್ಲಾ ಸಮಾಜದವರನ್ನು ಮುಖ್ಯವಾಹಿನಿಗೆ ತರಲು ಗುರುಗಳನ್ನು ನೀಡಿ ಅವರಿಗೆ ಭೂಮಿಯನ್ನು ಧಾನವಾಗಿ ನೀಡಿದರು. ಬಸವಣ್ಣನವರ ಆದರ್ಶಗಳು ಪ್ರಸ್ತುತ ಜಗತ್ತಿಗೆ ಬೇಕಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶರಣ ಸಂಸ್ಕೃತಿ ಉತ್ಸವ-2021ರ ಗೌರವಾಧ್ಯಕ್ಷರಾದ ಶ್ರೀ ಮಾದಾರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ರೀ ಎಂ.ಕೆ.ತಾಜ್‌ಪೀರ್, ಶರಣ ಸಂಸ್ಕೃತಿ ಉತ್ಸವ-2021ರ ಕಾರ್ಯಾಧ್ಯಕ್ಷರಾದ  ಕೆ ಎಸ್ ನವೀನ್, ಎಸ್.ಎನ್.ಟ್ರಸ್ಟ್ನ ಧರ್ಮದರ್ಶಿಗಳಾದ ಶ್ರೀ ಎಸ್.ಷಣ್ಮುಖಪ್ಪ, ಮಠದಕುರುಬರ ಹಟ್ಟಿ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಗೀತಮ್ಮ, ಹರಗುರು ಚರಮೂರ್ತಿಗಳು, ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯದರ್ಶಿಗಳಾದ ಶ್ರೀ ಎ.ಜೆ.ಪರಮಶಿವಯ್ಯ ಮುಂತಾದವರು ಉಪಸ್ಥಿತರಿದ್ದರು.