ಶರಣಸಂಸ್ಕೃತಿ ಉತ್ಸವಗೌರವಾಧ್ಯಕ್ಷರಾಗಿ ಬಸವಕುಮಾರ ಶ್ರೀ


ಚಿತ್ರದುರ್ಗ.ಅ.20;  ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಇಂದು ಡಾ. ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2022ನೇ ಸಾಲಿನ ಶರಣಸಂಸ್ಕೃತಿ ಉತ್ಸವದ ಗೌರವಾಧ್ಯಕ್ಷರನ್ನಾಗಿ ಡಾ. ಶ್ರೀ ಬಸವಕುಮಾರ ಸ್ವಾಮಿಗಳು, ವನಶ್ರೀ ಮಠ, ವಿಜಯಪುರ ಮತ್ತು ಕಾರ್ಯಾಧ್ಯಕ್ಷರನ್ನಾಗಿ ಎಸ್. ಲಿಂಗಮೂರ್ತಿ, ಅಧ್ಯಕ್ಷರು, ರಾಜ್ಯ ಖನಿಜ ನಿಗಮ ಇವರನ್ನು ಆಯ್ಕೆ ಮಾಡಲಾಯಿತು.