ಶರಣಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ

ಚಿತ್ರದುರ್ಗ, ನ. 3- ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಅಕ್ಟೋಬರ್ 8ರಿಂದ 18ರವರೆಗೆ ಜರುಗಿದ ಡಾ. ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣ ತೃತೀಯ ದಶಮಾನೋತ್ಸವ ಮತ್ತು ಶರಣಸಂಸ್ಕೃತಿ ಉತ್ಸವದ ಯಶಸ್ಸಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು.ಉತ್ಸವದ ಸರ್ವಾಧ್ಯಕ್ಷರಾದ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಈ ಬಾರಿಯ ಉತ್ಸವದಲ್ಲಿ ಕೃಷಿಮೇಳವು ಯಶಸ್ವಿಯಾಗಿ ಜರುಗಿ ರೈತರ ಅಹವಾಲುಗಳನ್ನು ಸರ್ಕಾರಕ್ಕೆ ತಲುಪಿಸುವ ಕಾರ್ಯ ಆಯಿತು. ಅದೇರೀತಿ ಸಹಜ ಶಿವಯೋಗ, ಜಾನಪದ ಕಲೆಗಳ ಸ್ಪರ್ಧೆ, ಮುರುಘಾಶ್ರೀ, ಭರಮಣ್ಣನಾಯಕ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ ಪ್ರದಾನ, ಯುವಮೇಳ, ಮಕ್ಕಳ ಮೇಳ, ವಿಚಾರಗೋಷ್ಠಿ ಕರ‍್ಯಕ್ರಮಗಳು ಜನಾಕರ್ಷಣೀಯವಾಗಿ ಜರುಗಿದವು. ಬಸವಭೂಷಣ ಪ್ರಶಸ್ತಿ ಮತ್ತು ಶರಣಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳು ಚಿತ್ರದುರ್ಗ ಜಿಲ್ಲೆಗೆ ಶಾಶ್ವತವಾದ ಕೈಗಾರಿಕಾ ಕಾರಿಡಾರ್ ನಿರ್ಮಿಸಲು ಹಿರಿಯೂರು – ಚಿತ್ರದುರ್ಗ ಮಧ್ಯದಲ್ಲಿ ಸುಮಾರು 2 ಸಾವಿರ ಎಕರೆ ಜಾಗವನ್ನು ಗುರುತಿಸುವ ಸಂಬAಧ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದು, ಜಿಲ್ಲೆಯ ಜನತೆಗೆ ಆಶಾಕಿರಣವನ್ನುಂಟು ಮಾಡಿತು. ಮುಂದಿನ ದಿನಗಳಲ್ಲಿ ಇಡೀ ಚಿತ್ರದುರ್ಗ ನಗರಕ್ಕೆ ದೀಪಾಲಂಕಾರ ಮಾಡುವ ಯೋಜನೆ ಇದೆ. ಎಲ್ಲ ಮಠಗಳಿಗು ದೀಪಾಲಂಕಾರ ಆಗಬೇಕು. ಕೋಟೆಗೂ ಸಹ ಅಲಂಕಾರ ಮಾಡಲಾಗುವುದು. ನವನವೀನ, ಅರ್ಥಪೂರ್ಣ ಕಾರ್ಯಕ್ರಮಗಳ ಆಯೋಜನೆಗಾಗಿ ಶರಣಸಂಸ್ಕೃತಿ ಉತ್ಸವಕ್ಕೆ ಶಾಶ್ವತವಾದ ವಿಶ್ವಸ್ತ ಸಮಿತಿಯನ್ನು ಮಾಡಲು ಯೋಚಿಸಲಾಗಿದೆ ಎಂದು ಹೇಳಿದರು.ಉತ್ಸವದ ಗೌರವಾಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು ಮಾತನಾಡಿ, ಈ ಬಾರಿ ಕೆಲವು ಕಾರ್ಯಕ್ರಮಗಳು ಮಳೆ ಕಾರಣದಿಂದ ಬಿಟ್ಟುಹೋಗಿವೆ. ಅದರಲ್ಲಿ ಮುಖ್ಯವಾಗಿ ರಾಷ್ಟಿçÃಯ ವಾಲಿಬಾಲ್ ಪಂದ್ಯಾವಳಿ. ಉಳಿದ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ಈ ಬಾರಿಯ ಉತ್ಸವದ ಗೌರವಾಧ್ಯಕ್ಷ ಸ್ಥಾನ ಸಿಕ್ಕಿದ್ದು ನನಗೆ ಪುಣ್ಯದ ಸಂಗತಿ ಎಂದು ತಿಳಿದಿz್ದೆÃನೆ. ನಮ್ಮಂತಹ ಅನೇಕ ಜನರನ್ನು ಮುರುಘಾ ಶರಣರು ಬೆಳೆಸಿದ್ದಾರೆ. ಚಿತ್ರದುರ್ಗದ ಶರಣಸಂಸ್ಕೃತಿ ಉತ್ಸವ ಇನ್ನೂ ನಾಡಿನೆಲ್ಲೆಡೆ ಪಸರಿಸಬೇಕು. ಇದು ಭಾರತ ದೇಶದ ನಾಡಹಬ್ಬವಾಗಿ ಆಚರಿಸುವ ಪ್ರಯತ್ನ ಮಾಡಬೇಕಿದೆ ಎಂದು ನುಡಿದರು.ಉತ್ಸವದ ಕಾರ್ಯಾಧ್ಯಕ್ಷ ಕೆ.ಎಸ್. ನವೀನ್ ಮಾತನಾಡಿ, ಯಶಸ್ವಿ ಕಾರ್ಯಕ್ರಮದ ಹಿಂದೆ ಎಸ್.ಜೆ.ಎಂ. ವಿದ್ಯಾಪೀಠದ ಸಮಸ್ತ ನೌಕರರ ಶ್ರಮ ಇದೆ. ಅದರ ಜೊತೆ ಶ್ರೀಮಠದ ಭಕ್ತರ ಶ್ರಮವೂ ಇದೆ. ಇನ್ನು ಕೆಲವು ತಿಂಗಳೊಳಗೆ ಜಮುರಾ ಕಪ್ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗುವುದು. ಶರಣಸಂಸ್ಕೃತಿ ಉತ್ಸವದ ಭಾಗವಾಗಿ ಆಯೋಜಿಸಲಾಗಿದ್ದ ಸಿ.ಪಿ.ಆರ್. ತರಬೇತಿಯು ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಮಾಡಿದ್ದು ವಿಶೇಷ ಸಂದರ್ಭವಾಗಿದೆ. ಈ ಸಾಧನೆಗೆ ಶ್ರೀಗಳು, ಎಸ್.ಜೆ.ಎಂ. ಸಿಬ್ಬಂದಿವರ್ಗ ಮತ್ತು ಆರೋಗ್ಯ ಇಲಾಖೆಯವರು ನೀಡಿದ ಸಹಕಾರ ಸ್ಮರಣೀಯ ಎಂದರು.ರಾಜ್ಯ ಖನಿಜ ನಿಗಮದ ಅಧ್ಯಕ್ಷರೂ 2022ರ ಶರಣಸಂಸ್ಕೃತಿ ಉತ್ಸವದ ಕಾರ್ಯಾಧ್ಯಕ್ಷರೂ ಆದ ಎಸ್. ಲಿಂಗಮೂರ್ತಿ ಮಾತನಾಡಿ, ನನ್ನನ್ನು ಮುಂದಿನ ವರ್ಷದ ಶರಣಸಂಸ್ಕೃತಿ ಉತ್ಸವಕ್ಕೆ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಪೂಜ್ಯರಿಗೆ ಅಭಿನಂದನೆ ತಿಳಿಸುತ್ತೇನೆ. ಉತ್ಸವದ ಸಂದೇಶ ರಾಷ್ಟçದೆಲ್ಲೆಡೆ ತಲುಪುವಂತೆ ಆಚರಿಸಲು ಪ್ರಯತ್ನಿಸಲಾಗುವುದು ಎಂದರು.ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಎಷ್ಟೋ ಮಠಗಳು ಜಡವಾಗಿವೆ. ಆದರೆ ಮುರುಘಾಮಠ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ನಮ್ಮಂತವರಿಗೆ ಸಮಾಜಸೇವಾ ದೀಕ್ಷೆಯನ್ನು ನೀಡಿ ಒಂದಷ್ಟು ಅಸ್ತಿತ್ವವನ್ನು ಕೊಟ್ಟ ಏಕೈಕ ಮಠ ಎಂದರೆ ಅದು ಮುರುಘಾಮಠ, ಮುರುಘಾ ಶರಣರು. ನಮಗೆ ಕೊಟ್ಟ ಜವಾಬ್ದಾö್ಜರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುವುದಾಗಿ ಹೇಳಿದರು.ಎಸ್.ಜೆ.ಎಂ. ವಿದ್ಯಾಪೀಠದ ಕರ‍್ಯದರ್ಶಿ ಎ.ಜೆ. ಪರಮಶಿವಯ್ಯ ಉತ್ಸವದ ಜಮಾ ಖರ್ಚಿನ ವಿವರವನ್ನು ಮಂಡಿಸಿದರು. ರೆ.ಫಾದರ್ ರಾಜು, ನಾಗರಾಜ ಸಂಗಮ್ ಉತ್ಸವ ಕಾರ್ಯಕ್ರಮಗಳ ಕುರಿತು ಅಭಿಪ್ರಾಯ ಹಂಚಿಕೊAಡರು. ಶರಣಸಂಸ್ಕೃತಿ ಉತ್ಸವದಲ್ಲಿ ಈ ಹಿಂದೆ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಹನುಮಲಿ ಷಣ್ಮುಖಪ್ಪ, ಸಿ. ಶಂಕರಮೂರ್ತಿ, ಎಲ್.ಬಿ. ರಾಜಶೇಖರ್, ಹೆಚ್. ಆನಂದಪ್ಪ, ಹೆಚ್.ಸಿ. ನಿರಂಜನಮೂರ್ತಿ ವೇದಿಕೆಯಲ್ಲಿದ್ದರು.ಉತ್ಸವದ ಸಂದರ್ಭದಲ್ಲಿ ದಾಸೋಹದಲ್ಲಿ ಊಟ ಬಡಿಸುವ ಸೇವೆಯನ್ನು ಮಾಡಿದ ವಿವಿಧ ಸಮಾಜಗಳ ಮುಖಂಡರನ್ನು ಶ್ರೀಗಳು ಸನ್ಮಾನಿಸಿದರು.ಜಿತೇಂದ್ರ ಸ್ವಾಗತಿಸಿದರು. ಹಾಲಪ್ಪನಾಯಕ ಕರ‍್ಯಕ್ರಮ ನಿರೂಪಿಸಿದರು.Attachments area