ಶರಣಲಿಂಗೇಶ್ವರ ಜಾತ್ರೆ ಜೂ. 1 ರಿಂದ

ಬೀದರ್: ಮೇ.26:ಕಲಬುರಗಿ ಜಿಲ್ಲೆಯ ಖಾಜಾ ಕೋಟನೂರಿನ ಶರಣಲಿಂಗೇಶ್ವರ ಪುಣ್ಯಾಶ್ರಮದಲ್ಲಿ ಜೂನ್ 1 ಮತ್ತು 2 ರಂದು ಶರಣಲಿಂಗೇಶ್ವರ ಮಹಾರಾಜರ ಜಾತ್ರಾ ಮಹೋತ್ಸವ ಜರುಗಲಿದೆ.

ಜೂ. 1 ರಂದು ಜಗನ್ನಾಥೇಶ್ವರ ಮಹಾರಾಜರ ಸಾನಿಧ್ಯದಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ರುದ್ರ ಹೋಮ, ಜೂನ್ 2 ರಂದು ಬೆಳಿಗ್ಗೆ 9ಕ್ಕೆ ಮಂದಿರದ ಶಿಖರ ಧ್ವಜಕ್ಕೆ ಪುಷ್ಪಾರ್ಚನೆ, ಪಲ್ಲಕ್ಕಿ ಮೆರವಣಿಗೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.