ಶರಣರ ಸಂದೇಶ ಸರ್ವಕಾಲಿಕ

ವಿಜಯಪುರ:ಜು.14: ಶರಣರ ತತ್ವ, ಸಿದ್ಧಾಂತ, ಸಂದೇಶ ಸವ9ಕಾಲಿಕ ಎಂದು ವಿಶ್ರಾಂತ ಸೈನಿಕ ಅಧಿಕಾರಿ ವಿದ್ಯಾಧರ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು
ಜಿಲ್ಲಾ ಕಸಾಪ ತಾಲೂಕ ಕಸಾಪ ಹಾಗು ನಗರ ಘಟಕ ಕಸಾಪ ಆಶ್ರಯದಲ್ಲಿ ಲಿಂ: ಶಂಕರಗೌಡ ಭೀಮನಗೌಡ ಪಾಟೀಲ ಲಿಂ; ಗಂಗಾಬಾಯಿ ಶಂಕರಗೌಡ ಪಾಟೀಲ ದತ್ತಿ ವಿಷಯ: ಶರಣರ ಚಿಂತನೆಗಳು, ಹಾಗು ಸಗರನಾಡಿನ ಗೌಡಕಿ ಹಾಗು ದಿ: ಅನ್ನಪೂರ್ಣ ಮಹಾದೇವಪ್ಪ ಕಾಗಲಕರ ದಿ: ಭೀಮಕ್ಕಾ ರಾಮಚಂದ್ರ ಕಾಗಲಕರ ದತ್ತಿ. ವಿಷಯ ಶರಣರ ವಚನ ಸಾಹಿತ್ಯ ಕುರಿತು. ದತ್ತಿ ನಿಧಿ ಮೆಟ್ರೀಕ ನಂತರದ ಬಾಲಕಿಯರ ವಸತಿ ನಿಲಯ ಟೆಕಡೆ ಗಲ್ಲಿ ವಿಜಯಪುರ ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮನಸ್ಸು ನಿರ್ಮಲವಾಗಿರಲು ಶರಣ ತತ್ವ ಸಿದ್ಧಾಂತ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಶರಣರ ಚಿಂತನೆಗಳಿಂದ ಮಾನವೀಯ ಮೌಲ್ಯಗಳನ್ನು ಉಳಿಸಲು ಸಾಧ್ಯ ಎಂದರು.
ಸರಕಾರಿ ಪ ಪೂ ಕಾಲೇಜಿನ ಉಪನ್ಯಾಸಕ ಸಿದ್ದು ಸವಳಸಂಗ ಶರಣರ ಚಿಂತನೆಗಳು ಹಾಗು ಸಗರನಾಡಿನ ಗೌಡಕಿ ವಿಷಯ ಕುರಿತು ಮಾತನಾಡಿ ಶರಣರು ತಮ್ಮ ಜೀವನವನ್ನು ಸಮಾಜ ಒಳಿತಿಗಾಗಿ ಮುಡಿಪಾಗಿಟ್ಟ ಮಾನವ ಕುಲದ ಶ್ರೇಯಸ್ಸನ್ನು ಬಯಸಿದ್ದರು ಎಂದರು.
ಅನುಭವಿ ಚಿಂತಕಿ ಅನ್ನಪೂರ್ಣ ಬೆಳೆನ್ನವರ ಮಾತನಾಡಿ ಶರಣರ ವಚನಗಳು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತವನ್ನಾಗಿಸಿವೆ. ಹನ್ನೇರಡನೆಯ ಶತಮಾನದ ವಚನ ಸಾಹಿತ್ಯ ವಿಶ್ವದ ಗಮನ ಸೆಳೆದಿದೆ. ಶರಣರ ವಚನ ಸಾಹಿತ್ಯ ವಿಶ್ವದ ಅನೇಕ ದೇಶಗಳು ಅನುಕರಣೆ ಮಾಡುತ್ತಿವೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಚಾರ್ಯ ಬಸೀರಪಟೇಲ ಬುದ್ನೂರ ದತ್ತಿ ನಿಧಿ ಕಾರ್ಯಕ್ರಮಗಳು ವಿಷಯವನ್ನು ಅರ್ಥಪೂರ್ಣವಾಗಿ ಅರಿಯಲು ಸಾಧ್ಯ ಎಂದರು.
ದತ್ತಿ ಜಿಲ್ಲಾ ಸಂಚಾಲಕ ರಾಜೇಸಾಬ ಶಿವನಗುತ್ತಿ ನಿಲಯ ಮೇಲ್ವಿಚಾರಕರಾದ ಗಂಗಮ್ಮಾ ಗೋಕಾವಿ ಉಪಸ್ಥಿತರಿದ್ದರು