ಶರಣರ ಸಂಗದಿಂದ ಹಣೆಬರಹ ಬದಲಾಯಿಸಿಕೊಳ್ಳಬಹುದು

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರು,ಡಿ 23: ಐತಿಹಾಸಿಕ ಚನ್ನಮ್ಮನ ಕಿತ್ತೂರಿನ ಶ್ರೀ ಬಸವನಗರದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಬಸವ ಮಂಟಪ ಸಹಾಯಾರ್ಥವಾಗಿ ಶ್ರೀ ಗುರು ಬಸವೇಶ್ವರ ಅಭಿವೃದ್ಧಿ ಸೇವಾ ಸಂಘ ಹಾಗೂ ನಾಡಿನ ಬಸವ ಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಸಕಲ ಜೀವಾತ್ಮರಿಗೆ ಲೇಸನೆ ಬಯಸಿದ ಶ್ರೀಬಸವಾದಿ ಪ್ರಮಥರ ಹಾಗೂ ಸಮಕಾಲಿನ ಶರಣರ ಕುರಿತು “ಶರಣ ಜೀವನ ದರ್ಶನ” ಎರಡನೇಯ ದಿನದ ಪ್ರವಚನ ಜರುಗಿತು.
ಹುಕ್ಕೆರಿ ಬಸವ ಬೆಳವಿ ಚರಮೂರ್ತಿ ಚರಂತೇಶ್ವರ ವಿರಕ್ತಮಠದ ಶ್ರೀ ಶರಣ ಬಸವ ಮಹಾಸ್ವಾಮಿಗಳು “ಶರಣ ಜೀವನ ದರ್ಶನ” ಪ್ರವಚನದ ದಿವ್ಯ ಸಾನಿಧ್ಯ ವಹಿಸಿ 12 ನೇ ಶತಮಾನದಲ್ಲಿ ಗುರು ಬಸವಣ್ಣನವರ ಮುಂದಾಳತ್ವದಲ್ಲಿ ನಡೆದ ಆಧ್ಯಾತ್ಮಿಕ, ದಾರ್ಮಿಕ, ಸಾಹಿತ್ಯಿಕ ಸೇರಿದಂತೆ ಇನ್ನೂ ಅನೇಕ ವಿಚಾರಗಳ ಕುರಿತು ಕ್ರಾಂತಿಯೆ ನಡೆಯಿತು. ಇದರಿಂದ ಅನೇಕರಲ್ಲಿ ಜಾಗೃತಿ ಮೂಡಿತು. ಪರಂಪರಾಗತವಾಗಿ ಬಂದ ವರ್ಣಾಶ್ರಮ ಧರ್ಮದಲ್ಲಿ ದಲಿತರು, ಅಸ್ಪೃಶ್ಯರು, ಸ್ತ್ರಿಯರಿಗೂ ಸೇರಿದಂತೆ ಅನೇಕರಿಗೆ ಮನ್ನಣೆ ಇಲ್ಲದಿರುವದರಿಂದ ಜನರು ಕಂಗಾಲಗಿರುವದನ್ನು ತಿಳಿದು ಬಸವಣ್ಣ ಸೇರಿದಂತೆ ಅನೇಕ ಶರಣರು ಅಸಮಾನತೆ ಅಳಿಸಿ ಎಲ್ಲರಿಗೂ ಸ್ವತಂತ್ರವನ್ನು ನೀಡಿ ಸಮನತೆಯನ್ನು ತರಬೇಕು ಎಂದು ಹೋರಾಡಿದರು. ಯಾವುದೆ ವ್ಯಕ್ತಿ ಹುಟ್ಟಿನಿಂದ ಕುಲಜನಾಗಿರುವುದಿಲ್ಲ ಅವನು ಆಚಾರ ವಿಚಾರಗಳಿಂದ ಕುಲಜನಾಗುತ್ತಾನೆ. ಕಾಲಚಕ್ರ ಎಲ್ಲರನ್ನು, ಎಲ್ಲವನ್ನು ಬಂದಿಸಿದೆ. ಕಾಲಕ್ಕೆ ತಕ್ಕಂತೆ ನಾವೆಲ್ಲರು ಬದಲಾಗಬೇಕು ನಿಜ ಆದರೆ 12 ನೇಯ ಶತಮಾನದಲ್ಲಿ ಇದ್ದ ಶರಣರಂತೆ ಬದಲಾಗಬೇಕು. ಕಾಯಕ, ದಾಶೋಹ ಮಾಡುವ ಮೂಲಕ ಸಮಾಜದಲ್ಲಿ ಸಮಾನತೆ ತರುವಲ್ಲಿ ಹಗಲಿರಳು ಶ್ರಮಿಸಿದರು. ಇಂದು ನಾವು ಪಾಶ್ಚಿಮಾತ್ಯ ಹಾಡುಗಳನ್ನು ಹಾಡಿ ನಮ್ಮ ಸಂಸ್ಕೃತಿಗಳನ್ನು ಮರೆಯುತ್ತಿದ್ದೇವೆ. ನಾವು ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ಮರೆಯಬಾರದು ಎಂದರು.
ಈ ವೇಳೆ ಖ್ಯಾತ ಸಂಗೀತ ಕಲಾವಿದರಾದ ವಿರೇಶ ಕಟ್ಟಿಸಂಗಾವಿ ಅವರ ತಬಲಾನಾದ ಹಾಗೂ ರವಿಕುಮಾರ ಆಳಂದ ಅವರ ಶರಣರ ವಚನಗಳನ್ನು ಸುಶ್ರಾವ್ಯವಾಗಿ ಹಾಡಿ ಸೇರಿದ ಪ್ರೇಕ್ಷಕರನ್ನು ತಲೆದೂಗಿಸುವಂತೆ ಮಾಡಿದರು.
ಪ್ರವಚನ ಕೇಳಲು ಆಗಮಿಸಿದ ಸರ್ವರಿಗೂ ಶ್ರೀಗಂಧದ ಸಸಿ ವಿತರಣೆ ಮಾಡಿ ಅವುಗಳನ್ನು ನೆಟ್ಟು ಪೆÇೀಷಿಸಲು ಸಲಹೆ ನೀಡಲಾಯಿತು.
ಈ ವೇಳೆ ಕಲ್ಲಪ್ಪ ಕುಗಟಿ, ಕಸಾಪ ಅಧ್ಯಕ್ಷ ಎಸ್ ಬಿ ದಳವಾಯಿ, ಅಶೋಕ ಅಳ್ನಾವರ, ಚಂದ್ರಗೌಡ ಪಾಟೀಲ, ನಿಂಗನಗೌಡ ಪಾಟೀಲ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮಸ್ತ ಬಸವ ಪರ ಸಂಘಟನೆಗಳ ಸರ್ವ ಸದಸ್ಯರು, ಮಹಿಳಾ ಸಂಘದ ಪದಾಧಿಕಾರಿಗಳು, ರಾಷ್ಟ್ರೀಯ ಬಸವ ದಳ, ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ಸೇನೆಯ ಸರ್ವ ಸದಸ್ಯರು ಸೇರಿದಂತೆ ಇತರರು ಇದ್ದರು.