ಶರಣರ ವಚನ ಸಾಹಿತ್ಯವನ್ನು ಓದುವ ಹವ್ಯಾಸ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು

ಹುಮನಾಬಾದ:ನ.13: ಪಟ್ಟಣದ ಸರ್ವೋದಯ ಪದವಿ ಕಾಲೇಜಿನಲ್ಲಿ 43ನೇ ಶರಣ ಕಮ್ಮಟ ಅನುಭವ ಮಂಟಪ ಉತ್ಸವ ಅಂಗವಾಗಿ ಅನುಭವ ಮಂಟಪದ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದೇವರ ಹಾಗೂ ಪೂಜ್ಯ ಶ್ರೀ ಗುರುಬಸವ ಪಟ್ಟದೇವರ ದಿವ್ಯ ಮಾರ್ಗದರ್ಶನದಲ್ಲಿ ತಾಲೂಕಾ ಮಟ್ಟದ ವಚನ ಭಾಷಣ ಸ್ಪರ್ಧೆ ಏರ್ಪಡಿಸಲಾಯಿತು. ತಾಲೂಕಿನ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು. ಡಾ.ಸೋಮೋನಾಥ ಯಾಳವಾರ ಹಿರಿಯ ಸಾಹಿತಿಗಳು ಉದ್ಘಾಟಿಸಿ ಇಂದಿನ ಯುವ ಜನಾಂಗಕ್ಕೆ ಬಸವಣ್ಣನವರು ಹಾಗೂ ಸಮಕಾಲಿನ ಶರಣರ ವಚನ ಸಾಹಿತ್ಯವನ್ನು ತಲುಪಿಸುವ ಸದುದ್ದೇಶ ಮತ್ತು ಓದುವ ಹವ್ಯಾಸ ಪ್ರತಿಯೊಬ್ಬರಲ್ಲಿ ಬೆಳೆಸಿಕೊಳ್ಳಬೇಕೆಂದು ಮತನಾಡುತ್ತ ನುಡಿದರು. ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಶಾಂತವೀರ ಯಲಾಲ್, ಮಲ್ಲಿಕಾರ್ಜುನ ಸಂಗಮಕರ್ ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್ ಹುಮನಾಬಾದ, ಬಾಬುರಾವ ಪಾಟೀಲ್ ಚಿತ್ತಕೋಟಾ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಶಿನಾಥ ಕೋಡ್ಲಿರವರ ವಹಿಸಿದರು. ತಿರ್ಪುಗಾರರಾಗಿ ಶ್ರೀ ಗುರು ಬಸವೇಶ್ವರ ಸೇವಾ ಸಂಸ್ಥೆ ಅಧ್ಯಕ್ಷರಾದ ಚೆನ್ನಬಸಪ್ಪಾ ವಡ್ಡನಕೇರಾ, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಈಶ್ವರ ತಡೋಳಾ, ಬಸವರಾಜ ಮಾಡಗಿ ಶಿಕ್ಷಕರು ಭಾಗವಹಿಸಿದರು. ತಾಲೂಕಾ ಮಟ್ಟದ ವಚನ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಧ್ಯಾರ್ಥಿಗಳಲ್ಲಿ ಪ್ರಥಮ ಬಹುಮಾನ ಮಹೇಶ ರಾಮ ಮತ್ತು ರಾಜ ಪದವಿ ಪೂರ್ವ ಕಾಲೇಜು, ದ್ವೀತಿಯ ಬಹುಮಾನ ಭಾಗ್ಯಶ್ರೀ ರಾಮ ಮತ್ತು ರಾಜ ಪದವಿ ಪೂರ್ವ ಕಾಲೇಜು, ತೃತೀಯ ಬಹುಮಾನ ಸುಷ್ಮಾ ಹೆಚ್.ಕೆ.ಡಿ.ಇ.ಟಿ ಬಿ.ಇಡ್ ಕಾಲೇಜು ವಿದ್ಯಾರ್ಥಿಗಳು ಪಡೆದುಕೊಂಡರು. ಸಿದ್ಧಾರ್ಥ ಹಳ್ಳಿಖೇಡಕರ್, ಮಾಣಿಕರಾವ ಪಾಟೀಲ, ಆನಂದ , ಉಪಸ್ಥಿತರಿದ್ದರು