ಶರಣರ ವಚನ ಗ್ರಂಥಗಳಿಗೆ ಪೂಜಿಸಿ ವಿಶಿಷ್ಟ ಬಸವ ಜಯಂತಿ

ವಿಜಯಪುರ ;ಮೇ.15: ಹಿಂದಿನ ಶಿವಶರಣರ, ಶಿವಯೋಗಿಗಳ ಆದರ್ಶಗಳನ್ನು ಪಾಲಿಸದೇ ಯಾವುದೋ ಅಡ್ಡ ದಾರಿಗೆ ಹೋಗುತ್ತಿರುವ ಸಮಾಜ ಸರಿದಾರಿಗೆ ಬರಬೇಕಾದರೆ ಶಿವಯೋಗಿ ಶಿವಶರಣರು ರಚಿಸಿದ ವಚನ ಹಾಗೂ ಇತರ ಅಧ್ಯಾತ್ಮಿಕ ಗ್ರಂಥಗಳಲ್ಲಿನ ಸಾರ ಮತ್ತು ನಡೆ ನುಡಿಯಂತೆ ಮಾನವರು ನಡೆದರೆ ಭಯಾನಕ ಸ್ಥಿತಿ ಸೃಷ್ಠಿಸಿದ ಕೊರೋನಾ ವೈರಣುವಿಗೆ ಕಡಿವಾಣ ಹಾಕಲು ಸಹಕಾರಿಯಾಗುತ್ತದೆ ಎಂದು ಕಪ್ಪುಕೋಟಿನ ಸಾಹಿತಿ ಮಲ್ಲಿಕಾರ್ಜುನ ಭೃಂಗಿಮಠ ವಕೀಲರು ಹೇಳಿದ್ದಾರೆ.

ಅವರು ಜಲನಗರದಲ್ಲಿ ಭೃಂಗಿಮಠ ಕಾನೂನು ಕ್ರಿಯಾತ್ಮಕ ವೇದಿಕೆಯ ಪರವಾಗಿ ವಿಶ್ವಋಷಿ ಗ್ರಹದಲ್ಲಿ ನಡೆದ 888ನೇ ಬಸವ ಜಯಂತಿಯನ್ನು ಹನ್ನೆರಡನೇ ಶತಮಾನದ ಶಿವಯೋಗಿ ಶಿವಶರಣರ ವಚನ ಗ್ರಂಥಗಳಿಗೆ ಪೂಜೆ ಸಲ್ಲಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿ ಮಾತನಾಡುತ್ತಿದ್ದರು.

ಹಿಂದೆ ಬೇರೆ ವೈರಾಣುವಿನ ಅಟ್ಟಹಾಸ ವಿದ್ದಾಗ ಭಾರತೀಯ ಅಧ್ಯಾತ್ಮಕತೆಯ ಬದುಕಿನ ಶೈಲಿಯಿಂದ ಅದು ಒಬ್ಬರಿಂದ ಒಬ್ಬರಿಗೆ ಹರೆಡದಂತೆ ತಡೆದದ್ದು ನಮಗೆ ಇತಿಹಾಸದಿಂದ ತಿಳಿದು ಬರುತ್ತದೆ. ಜಪ, ತಪ, ಯೋಗ, ಧ್ಯಾನ ಇವು ಭಾರತೀಯ ಸಂಸ್ಕಾರವಾಗಿವೆ ಇವು ಮಾಡುವುದರಿಂದ ಮೈಯಲ್ಲಿ ಚೈತನ್ಯ ಶಕ್ತಿ ಉಗಮವಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದ ಅವರು ಓಂ ನಮ ಶಿವಾಯ ಮಂತ್ರ ಜಪಿಸುತ್ತಿದ್ದ ವಿಶ್ವಚೇತನಾ ಬಸವಣ್ಣನವರು ಶಿವನ ಆರಾಧಕರಾಗಿದ್ದರು, ಯನಗಿಂತ ಕಿರಿಯರಿಲ್ಲ ಶಿವಭಕ್ತಂಗಿಂತ ಹಿರಿಯರಿಲ್ಲ ಎನ್ನುವ ಮೂಲಕ ಸಮಾಜಕ್ಕೆ ಉತ್ತಮ ಆಧರ್ಶ ಕೊಟ್ಟಿದ್ದಾರೆ ಎಂದು ಭೃಂಗಿಮಠ ತಿಳಿಸಿದರು,

ಬಸವಣ್ಣನವರು ಮತ್ತು ಅವರಿಗೂ ಮೊದಲೂ ಹಾಗೂ ನಂತರದ ಶಿವಶರಣ ಶಿವಯೋಗಿಗಳ ಆಚರಣೆ ,ಅರಿವು, ಧ್ಯಾನ ಇವೆಲ್ಲಾ ಸಮಾಜಕ್ಕೆ ಇಂದಿಗೂ ಪೂಕವಾಗಿವೆ ಅದ್ದರಿಂದ ಕೊರೋನಾದಂತಹ ವೈರಾಣುಗೆ ಹೆದರದೇ ಧೈರ್ಯದಿಂದ ಇರಬೇಕು. ಶರಣರು ಮರಣಕ್ಕೆ ಎಂದು ಹೆದರಿಲ್ಲ. ಎಂದರು ಹೇಳಿದರು.

ರಾಜಕುಮಾರ ಮಣ್ಣೂರ ಅವರು ಮಾತನಾಡಿ ಬಸವಣ್ಣನವರು ವಿಶ್ವಗುರುವಾಗಿ ಕಾಯಕ ಸೂತ್ರ ನೀಡಿದ ಮಹಾನ್ ಚೇತನರಾಗಿದ್ದಾರೆ. ಪ್ರತಿ ವರ್ಷ ಬೃಂಗಿಮಠ ವೇದಿಕೆಯು ಬಸವ ಜಯಂತಿಯಂದು ನಿಜವಾಗಿ ಶ್ರಮಿಸುವ ಸೇವ ಜೀವಿಗಳಾದ ಚಮ್ಮಾರ, ಕಮ್ಮಾರ, ಬಡಿಗ , ಸವಿತಾ ಸೇವಕ, ಸಫಾಯಿ ಮುಂತಾದವರಿಗೆ ಸನ್ಮಾನಿಸುವ ಮೂಲಕ ವಿಭಿನ್ನ ಕಾರ್ಯಕ್ರಮ ಮಾಡುತ್ತಿದ್ದರು ಅಧರೆ ಈ ಬಾರಿ ಕೋವಿಡ್ ಲಾಕ್ ಡೌನನಿಂದಾಗಿ ಸರಳವಾಗಿ ಬಸವ ಜಯಂತಿ ಆಚರಿಸುತ್ತಿದ್ದು ಕ್ರಿಯಾತ್ಮಕ ವೇದಿಕೆಯು ವಚನ ಗ್ರಂಥಗಳಿಗೆ ಪೂಜಿಸಿ ಬಸವ ಜಯಂತಿ ಆಚರಿಸಿದ್ದು ವಿಶಿಷ್ಟವಾಗಿದೆ ಮತ್ತು ಶರಣರ ತತ್ವ ಪಾಲನೆಯಾಗಲಿ ಎಂಬುವ ಅವರ ಉದ್ದೇಶ ನಿಜವಾಗಿಯೂ ಅರ್ಥಪೂರ್ಣವಾಗಿದೆ ಎಂದರು ಎಸ್ .ಬಿ ಮಠ. ಪ್ರಜ್ವಲಕುಮಾರ ಬಿ. ಋಷೀಲ ಬೃಂಗಿಮಠ ಮುಂತಾದವರು ಪುಸ್ತಕ ಪೂಜೆ ಸಲ್ಲಿಸಿದರು.