ಶರಣರ ವಚನ ಅವರ ಆದರ್ಶದ ಜೀವನ ನಮ್ಮೆಲ್ಲರಿಗೂ ಸ್ಪೂರ್ತಿ: ಚೇತನ್.ಆರ್ ಐಪಿಎಸ್

ಸೇಡಂ,ಜೂ,06: ಸಮಾನತೆಯ ಸಮಾಜವನ್ನು ನಿರ್ಮಿಸಲು ಸುಮಾರು 800 ವರ್ಷಗಳ ಹಿಂದೆ ಬಸವಣ್ಣನವರು ಸುಮಾರು ಶರಣ ಶರಣೆಯರು (12ನೇ ಶತಮಾನದಲ್ಲಿಯೇ) ಪ್ರಯತ್ನಪಟ್ಟರು, ವಚನಗಳು ಅವರ ಆದರ್ಶದ ಜೀವನ ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಕಲಬುರ್ಗಿ ನಗರದ ಕಮಿಷನರ್ ಆಫ್ ಪೆÇಲೀಸ್
ಚೇತನ್ .ಆರ್ ಐಪಿಎಸ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಸುಕ್ಷೇತ್ರ ಬಿಜನಳ್ಳಿ ಗ್ರಾಮಕ್ಕೆ ನಿನ್ನೆ ಸಂಜೆ ಕಲ್ಬುರ್ಗಿ ಕಮಿಷನರ್ ಚೇತನ್.ಆರ್ ಐಪಿಎಸ್ ರವರು ಶರಣ ಹರಳಯ್ಯ ಕಲ್ಯಾಣಮ್ಮನವರು ತಮ್ಮ ಎಡ ಮತ್ತು ಬಲ ತೊಡೆಯ ಚರ್ಮದಿಂದ ಮಾಡಿರುವ ಪಾದರಕ್ಷೆಯು ವಿಶ್ವಗುರು ಬಸವಣ್ಣನವರಿಗೆ ಅರ್ಪಿಸಿರುವ ಚಮ್ಮಾವಿಗೆಗಳ ಸ್ಮಾರಕ ಭವನಕ್ಕೆ ಬಂದು ದರ್ಶನ ಪಡೆದು ಮಾತನಾಡಿದ ಅವರು ಸುಮಾರು 800 ವರ್ಷಗಳಿಂದ ಚಮ್ಮಾವಿಗೆಗಳು ಸೊಲಬ ಕುಟುಂಬಸ್ಥರು ಕಾಪಾಡಿಕೊಂಡು ಬಂದಿದು ಸಂತಸದ ವಿಷಯ, ದೇವಸ್ಥಾನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದರು. ಅರ್ಚಕರೊಂದಿಗೆ ಹಾಗೂ ಗ್ರಾಮಸ್ಥರೊಂದಿಗೆ ಶಾಲಾ ಕಾಲೇಜು ರಸ್ತೆ, ಹಲವಾರು ವಿಷಯಗಳ ಕುರಿತು ಅಭಿಪ್ರಾಯಗಳನ್ನು ಪಡೆದುಕೊಂಡರು. ಗ್ರಾಮಸ್ಥರಿಂದ ಕಮಿಷನರ್ ಅವರಿಗೆ ಸತ್ಕರಿಸಲಾಯಿತು, ಈ ವೇಳೆಯಲ್ಲಿ ಡಿವೈಎಸ್ಪಿ ಸಂಗಮನಾಥ್ ಹಿರೇಮಠ, ಸಿಪಿಐ ಮಂಜುನಾಥ್ ಸಿಲ್ವರಿ, ಮಳಖೇಡ ಪಿಎಸ್‍ಐ ಮಹೀಂದ್ರಕುಮಾರ್ ಜಗಾತಿ, ಪತ್ರಕರ್ತ ಸುರೇಶ್ ಬಿಜನಳ್ಳಿ ಪೆÇಲೀಸ್ ಸಿಬ್ಬಂದಿ ಜಗದೀಶ್ ಹಾಗೂ ಗ್ರಾಮದ ಮಾಜಿ ಗ್ರಾಪಂ ಸದಸ್ಯರಾದ ಚೆನ್ನಪ್ಪ ಹೊಸಮನಿ, ಬಾಬುರಾವ್ ಮೂಲಿಮನಿ, ಕಾಳೇಶ್ವರ್ ಪೆÇೀಲಿಸ್ ಪಾಟೀಲ್, ಶ್ರೀನಾಥ್ ಪೆÇೀಲಿಸ್ ಪಾಟೀಲ್, ರಾಕೇಶ್, ಅಂಬರೀಶ್ ವಾಲಿಕರ್ ಶರಣಪ್ಪ, ಬಾಬುರಾವ್ ಹರಳಕಟ್ಟಿ, ಸೇರಿದಂತೆ ಅನೇಕರು ಇದ್ದರು.

ಈ ಕಾಲಘಟ್ಟದಲ್ಲಿ ಬಸವಣ್ಣನವರ ಹಾಗೂ ಶರಣ ಹರಳಯ್ಯ ಕಲ್ಯಾಣಮ್ಮ ದಂಪತಿಗಳ ಆದರ್ಶ ನಾವೆಲ್ಲರೂ ಸ್ಮರಿಸೋಣ.
ಚೇತನ್.ಆರ್ ಐಪಿಎಸ್
ಕಮಿಷನರ್ ಆಫ್ ಪೆÇಲೀಸ್ ಕಲಬುರ್ಗಿ ನಗರ