ಶರಣರ ವಚನಗಳ ಅಳವಡಿಕೆಯಿಂದ ಬದುಕು ಸುಂದರ

ಕಲಬುರಗಿ: ಸೆ.5:ವಿಶ್ವದ ಪ್ರಥಮ ಸಂಸತ್ತೆಂದು ಕರೆಯಲ್ಪಡುವ ಅನುಭವ ಮಂಟಪವನ್ನು ಸ್ಥಾಪಿಸಿ, ಸರ್ವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ತಮ್ಮ ಅದ್ಭುತವಾದ ಕಾಯಕ-ದಾಸೋಹ, ಕಲ್ಯಾಣ ರಾಷ್ಟ್ರ ನಿರ್ಮಾಣದ, ಸರ್ವ ಸಮಸ್ಯೆಗಳಿಗೂ ಪರಿಹಾರವಾದ ವಚನಗಳನ್ನು ಅಳವಡಿಸಿಕೊಂಡರೆ ಜೀವನ ಸುಂದರವಾಗಿ ಸಾಗಲು ಸಾಧ್ಯವಾಗುತ್ತದೆ ಎಂದು ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ್ ಅಭಿಮತಪಟ್ಟರು.

    ನಗರದ ಶಹಾಬಜಾರ ಸುಲಫಲಮಠದಲ್ಲಿ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ, ಲಿಂ.ಚನ್ನವೀರ ಶಿವಯೋಗಿಗಗಳ ಪುಣ್ಯಸ್ಮರಣೋತ್ಸವ, ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿಗಳ ಜನ್ಮದಿನಾಚರಣೆ, ಶರಣ ದರ್ಶನ ಪ್ರವಚನ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸತ್ಕಾರ ಕಾರ್ಯಕ್ರಮಗಳಿಗೆ ಭಾನುವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
    ನಿಜಗುಣಾನಂದ ಶ್ರೀಗಳ ಪ್ರವಚನ ಆಲಿಸುವ ಸದಾವಕಾಶ ಕಲಬುರಗಿ ಜಿಲ್ಲೆಯ ಜನತೆಗೆ ದೊರೆತ್ತಿದ್ದು ಸುದೈವ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಸದುಪಯೋಗವನ್ನು ಮಾಡಿಕೊಳ್ಳಬೇಕು. ಡಾ.ಸಾರಂಗಧರ ದೇಶಿಕೇಂದ್ರ ಶ್ರೀಗಳಿಗೆ ಮಠದ ಭಕ್ತರೇ ಆಸ್ತಿಯಾಗಿದ್ದಾರೆ. ನಮ್ಮ ಭಾಗದ ಸಮಾಜಮುಖಿ ಕಾರ್ಯಗಳಲ್ಲಿ ಪೂಜ್ಯರು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಅವರ ಸಮಾಜಮುಖಿ ಕಾರ್ಯಕ್ಕೆ ನಮ್ಮ ಸಹಕಾರ ಇರುತ್ತದೆ ಎಂದರು.
 ಶರಣ ದರ್ಶನ ಪ್ರವಚನ ನೀಡಿದ ಪೂಜ್ಯ ನಿಜಗುಣಾನಂದ ಶ್ರೀಗಳು, ಪ್ರವಚನ ವಥ್ನೆಯಲ್ಲಿ ಪರಿವರ್ತನೆಯನ್ನು ತರುತ್ತದೆ. ಇದು ಅಪರೂಪದ ಮಾಧ್ಯವಾಗಿದ್ದು, ಇದು ಋಷಿ-ಮುನಿಗಳಿಂದ ಹರಡುತ್ತಾ ಬಂದಿದೆ. ಆದರೆ ಹನ್ನೆರನೇ ಶತಮಾನದಲ್ಲಿ ಹೇಳುವುದು-ಕೇಳುವುದರ ಜೊತೆಗೆ ಕಾರ್ಯರೂಪಕ್ಕೆ ತರುವ ಕೆಲಸ ಜರುಗಿತು. ವಿಧಾನಸಭೆಯ ಮುಂಬರುವ ಅಧಿವೇಶನದಲ್ಲಿ 'ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕøತಿಕ ನಾಯಕ' ಎಂದು ಘೋಷಿಸುವ, ಕ.ಕ ಭಾಗದ ಪ್ರಮುಖ ಸ್ಥಳಗಳಲ್ಲಿ ವಚನಗಳ ಪ್ಲೆಕ್ಸ್ ಅಳವಡಿಸುವುದು, ಈ ಭಾಗದ ಗುಡಿ ಅಥವಾ ಗ್ರಹ ಕೈಗಾರಿಕೆಗಳ ಪುನಶ್ಚೇತನಕ್ಕೆ ಶ್ರಮವಹಿಸುವಂತೆ ದತ್ತಾತ್ರೇಯ ಪಾಟೀಲ್ ರೇವೂರ್ ಅವರಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಡಾ.ರಾಜಶೇಖರ ಶ್ರೀಗಳು, ಶಿವಾನಂದ ಶ್ರೀಗಳು, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ, ಬಿಜೆಪಿ ಮುಖಂಡ ಶಿವಕಾಂತ ಮಹಾಜನ್, ಮಾಜಿ ಎಮ್ಮೆಲ್ಸಿ ತಿಪ್ಪಣ್ಣಪ್ಪ ಕಮಕನೂರ್, ಶರಣ ಚಿಂತಕ ವಿಶ್ವರಾಧ್ಯ ಸತ್ಯಂಪೇಟ್, ಪ್ರಮುಖರಾದ ಗೌಸ್ ಬಾಬಾ, ಮಲ್ಲಿಕಾರ್ಜುನ ಖೇಮಜಿ, ದೇವೀಂದ್ರಪ್ಪಗೌಡ್ ಗೌಡಗೇರಿ, ಈರಣ್ಣ ಗೋಳೆದ್, ಮಹಾಂತೇಶ ಕುಂಬಾರ, ಸುರೇಶ ಬಡಿಗೇರ, ಎಚ್.ಬಿ.ಪಾಟೀಲ, ಶಿವಾನಂದ ಬಂಡಕ, ಶಿವಲಿಂಗ ಬಂಡಕ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. ಶಿವರುದ್ರಯ್ಯಸ್ವಾಮಿ ಗೌಡಗಾಂವ, ಸಿದ್ದಣ್ಣದೇಸಾಯಿ ಕಲ್ಲೂರ್ ಅವರಿಂದ ಸಂಗೀತ ಸೇವೆ ಜರುಗಿತು.