ಶರಣರ ವಚನಗಳು ಹತಾಶರಾದವರಿಗೆ ಬದುಕಲು ಪ್ರೇರಣೆ ನೀಡುತ್ತವೆ: ಸಿದ್ದು

ಬೀದರ್:ಜು.19: ಜಗತ್ತಿನ ಎಲ್ಲ ತತ್ವ, ಸಿದ್ಧಾಂತಗಳು ಕರ್ಮದ ಬಗೆಗೆ ಹೇಳುತ್ತವೆ. ಆದರೆ, ಬಸವಾದಿ ಶರಣರ ವಚನಗಳು ಬದುಕಿನಲ್ಲಿ ಹತಾಶರಾದವರಿಗೆ ಬದುಕಲು ಪ್ರೇರಣೆ ನೀಡುತ್ತವೆ ಎಂದು ಚಿಂತಕ ಪೆÇ್ರ. ಸಿದ್ದು ಯಾಪಲಪರವಿ ಅಭಿಪ್ರಾಯಪಟ್ಟರು.

ನಗರದ ವಿಟಿಎಸ್ ಸಭಾಗಂಣದಲ್ಲಿ ಹತ್ತು ದಿನಗಳ ಕಾಲ ನಡೆಯಲಿರುವ ‘ನೆಮ್ಮದಿ ಬದುಕಿಗಾಗಿ ವಚನಾನುಸಂಧಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಬದುಕನ್ನು ಕಟ್ಟಿಕೊಟ್ಟವರು ಶರಣರು ಸಮಾಜದಲ್ಲಿ ಅಂತರಂಗ ಬಹಿರಂಗ ಶುದ್ಧವಾಗಿಟ್ಟು ಸುಂದರ ಬದುಕಿಗೆ ಬೇಕಾಗಿದ್ದೆಲ್ಲ ನೀಡಿ ಹೋಗಿದ್ದಾರೆ. ವಚನಗಳಲ್ಲಿ ಯಾವುದೇ ಕ್ಷೇತ್ರವಿರಲಿ ಸಮಸ್ಯೆ ಇರಲಿ ವಚನಗಳಲ್ಲಿ ಪರಿಹಾರವಿರುವುದು ಅತ್ಯಂತ ವಿಸ್ಮಯಕಾರಿ ಸಂಗತಿ ಎಂದರು.

ಬಸವಣ್ಣನವರ ಬದುಕಿನ ವಿಚಾರ, ಚಿಂತನೆಗಳು ವಚನ ಸಾಹಿತ್ಯವಾಗಿದೆ. 12ನೇ ಶತಮಾನದಲ್ಲೇ ಭವ್ಯ ಸಮಾಜ ನಿರ್ಮಾಣದ ಪರಿಕಲ್ಪನೆ ತೋರಿಸಿಕೊಡಲಾಗಿದೆ. ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲಾಗಿತ್ತು. ಕಾಯಕ ಮತ್ತು ದಾಸೋಹ ಪರಿಕಲ್ಪನೆ ಆರಂಭಗೊಂಡಿತು. ಕಾಯಕದ ಮಹತ್ವ ಅರಿತು ಪ್ರತಿಯೊಬ್ಬರು ಕಾಯಕದಿಂದಲೇ ಬದುಕು ಸಾಗಿಸಬೇಕೆಂಬ ಮನೋಭಾವ ರೂಪುಗೊಂಡಿತ್ತು ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಹುಲಸೂರನ ಶಿವಾನಂದ ಸ್ವಾಮೀಜಿ ಮಾತನಾಡಿ, 12ನೇ ಶತಮಾನದ ಎಂದಾಗ ಪ್ರತಿಯೊಬ್ಬರು ನೆನಪಿಸಿಕೊಳ್ಳುವುದು ಅಂದಿನ ವಚನ ಸಾಹಿತ್ಯ ಚಳವಳಿ, ಅನುಭವಮಂಟಪ ಎಂದು ಹೇಳಿದರು.

ವಚನ ಬರೆಯಲು ಪ್ರೇರೇಪಿಸಿದ ಬಸವಣ್ಣ ಸೇರಿದಂತೆ ಶರಣರ ಸಮೂಹವನ್ನು, ಇಷ್ಟಲಿಂಗ ಪೂಜಿಸಿ, ಭಗವಂತನನ್ನು ಕಾಣಬೇಕು ಎಂಬ ಶರಣರ ನಿಲುವು ಇಂದಿನ ಸಮಾಜಕ್ಕೆ ಅಗತ್ಯವಾಗಿದೆ, ದುರಂತ ಎಂದರೆ ಬದಲಾದ ಇಂದಿನ ವ್ಯವಸ್ಥೆಯಲ್ಲಿ ಶರಣರು ಕಂಡ ಸಮಸಮಾಜ ನಿರ್ಮಾಣದ ಕನಸು ಈಡೇರುವ ಲಕ್ಷ ಣಗಳು ಕಾಣುತ್ತಿಲ್ಲ ಎಂದು ಕಳವಳ ವಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ನೈತಿಕ ಮೌಲ್ಯಗಳು ಕುಸಿದು ಜಗತ್ತಿನ ನಡೆ ಹದಗೆಡುತ್ತಿದೆ ಎಂದು ನಿರಾಸೆ ವ್ಯಕ್ತಪಡಿಸುವ ಬದಲು ಪ್ರತಿಯೊಬ್ಬರು ಅಂತರಂಗದ ಸ್ವಚ್ಛತೆ ಕಾಪಾಡಿಕೊಂಡು ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು ಎಂದರು.

ಎಚ್.ಕೆ.ಎ.ಇ ಆಡಳಿತ ಮಂಡಳಿ ಸದಸ್ಯ ರಜನೀಶ ವಾಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೌಲ್ಯಾಧಾರಿತ ಜೀವನಕ್ಕೆ ವಚನ ಸಾಹಿತ್ಯ ಸಹಕಾರಿ. ನಮ್ಮ ಗುರು, ಹಿರಿಯರು, ತಂದೆ, ತಾಯಿಗಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿರಿಯ ಚಿತ್ರಕಲಾವಿದ ಚ.ಭೀ. ಸೋಮಶೇಟ್ಟಿ, ಪ್ರಕಾಶ ಗಂದಿಗುಡೆ, ಮಾತನಾಡಿದರು. ಸೊಸೈಟಿ ನಿದೇರ್ಶಕ ಅಲ್ಲಮಪ್ರಭು ನಾವದೆಗೆರೆ, ಶಿವಕುಮಾರ ಸಾಲಿ ಪೆÇ್ರ. ಸಿ.ಆರ್. ಕೊಂಡಾ, ಪೆÇ್ರ.ರವಿ ದೇಶಮುಖ, ರತ್ನ ಪಾಟೀಲ, ಜಗದೇವಿ ಯದಲಾಪುರೆ, ಶಿವಪ್ಪ ಪರಶಟ್ಟಿ, ಶಿವಕುಮಾರ ಕಟ್ಟೆ, ವಿದ್ಯಾವತಿ ಬಲ್ಲೂರ ಇದ್ದರು

ಪ್ರಾಚಾರ್ಯ ಬಸವರಾಜ ಬಲ್ಲೂರ ಸ್ವಾಗತಿಸಿದರು, ಕಲ್ಯಾಣರಾವ್ ಚಳಕಾಪೂರೆ ನಿರೂಪಿಸಿದರು. ವೈಜಿನಾಥ ಸಜ್ಜನಶೆಟ್ಟಿ, ರೇವಣಪ್ಪ ಮೂಲಗೆ ಸಂಗೀತ ಸೇವೆ ನೀಡಿದರು.