ವಿಜಯಪುರ:ಜೂ.26: ಶರಣರ ವಚನಗಳು ಮೌಲ್ಯಯುತ ನುಡಿ ಮುತ್ತುಗಳಾಗಿವೆ . ಶರಣರ ಚಿಂತನೆಗಳಿಂದ ಜನಸಾಮಾನ್ಯರ ಬದುಕಿನ ನಡೆ ಕುರಿತು ಸುಂದರ ಬದುಕಿಗೆ ದಾರಿದೀಪವಾಗಿವೆ ಎಂದು ಡೈಯಟ ಕಾಲೇಜಿನ ಉಪನ್ಯಾಸಕಿ ಪೆÇ್ರ ಸುಜಾತ ಪೂಜಾರಿ ಕಾಯ9ಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಲಿಂ.ಬಸವರಾಜ ಪರಪ್ಪ ಆಲೂರ ಹಾಗು ದಿ: ವಾಯ್ ಎಸ್ ವಿಜಯಲಕ್ಷ್ಮೀ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ
ಕನ್ನಡ ಸಾಹಿತ್ಯ ಶ್ರೀಮಂತಗೋಳಿಸುವಲ್ಲಿ ವಚನ ಸಾಹಿತ್ಯ ಮತ್ತು ಜಾನಪದ ಸಾಹಿತ್ಯ ಬಹು ದೊಡ್ಡದು ಎಂದು ಸುಜಾತಾ ಪೂಜಾರಿ ಹೇಳಿದರು.
ಲಿಂ.ಬಸವರಾಜ ಪರಪ್ಪ ಆಲೂರ ದತ್ತಿ 1 ವಿಷಯ: ಶರಣರ ಚಿಂತನೆಗಳು ಕುರಿತು ಚಿಂತಕ ಎಮ್ ಬಿ ಕಟ್ಟಿಮನಿ ಮಾತನಾಡಿ ಶರಣ ಮಲಗಿದರೆ ಚಿಂತನೆ ಎದ್ದು ಕುಳಿತರೆ ಜಪ. ಅಂದಿನ ವಚನಗಳೆ ಇಂದಿನ ಸಮಾಜಿಕ ಕಾಯ್ದೆ . ವಚನಗಳು ಹಳೆಯದಾಗುವದಿಲ್ಲಿ ತಾಯಿಗೆ ವಯಸ್ಸಾಗುವದಿಲ್ಲ. ಭೂಮಿ ನನ್ನದಲ್ಲ, ಸಂಪತ್ತು ನನ್ನದಲ್ಲ ಹೆಂಡತಿ ಮಕ್ಕಳು ನನ್ನವರಲ್ಲ. ಪಡೆದ ಪುಣ್ಯ ಮಾತ್ರ ನನ್ನದು.
ಎಂದರು
ದತ್ತಿ 2 ದಿ: ವಾಯ್ ಎಸ್ ವಿಜಯಲಕ್ಷೀ ದತ್ತಿ ವಿಷಯ ಲಟಜಾನಪದ ಸಾಹಿತ್ಯ ಕುರಿತು ಉಪನ್ಯಾಸ ನೀಡಿದ ಜಾನಪದ ವಿದ್ವಾಂಸ ಬಸವರಾಜ ಸಾರವಾಡ ಮಾತನಾಡಿ ಗರತಿಯ ಹಾಡುಗಳನ್ನು ಹಾಡಿ ಅದರ ಮಹತ್ವ ಹೇಳಿದ ಅವರು ಮಂದಿ ಮಂದಿ ಎಂದು ಮಂದಿ ನಂಬಲು ಬೇಡ ಮಂದಿ ಬಿಟ್ಟಾರ ನಡುನೀರ ಮಲ್ಲಯ್ಯ ನೀ ನನ್ನ ಕೈ ಬಿಡಬೇಡ.
ಎಂದು ಅಥ9ಪೂಣ9ವಾಗಿ ಹೇಳಿದರು. ಕುಸಿದ್ದ ಮನೆಗೆ ಬಿಸನಿಕೆ ಯಾತಕ ಕೂಸು ಕಂದಯ್ಯ ಒಳಹೊರಗ ಆಡಿದರ ಬಿಸನಕೆ ಗಾಳಿ ಸುಳಿದಾವ. ಎಂದ ಅವರು ಗಂಜಿಯ ಕುಡಿದರು ಗಂಡನ ಮನಿ ಲೇಸು ಎಂದು ಹಾಡಿನ ಮೂಲಕ ಉಪನ್ಯಾಸ ನೀಡಿದರು.
ವಿಶ್ರಾಂತ ಅಧಿಕಾರಿ ಸಲೀಮ ಜಹಾಗೀರದಾರ ಮಾತನಾಡುತ್ತಾ ಉದು9 ನನ್ನ ಮಾತೃಭಾಷಯಾದರೆ ಕನ್ನಡ ನನ್ನ ಅಂತರಂಗದ ಭಾಷೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ವಹಿಸಿದ್ದರು.
ತಾಲ್ಲೂಕ ಕಸಾಪ ಅಧ್ಯಕ್ಷ ಡಾ: ಆನಂದ ಕುಲಕರ್ಣಿ ಭೀಮನಗೌಡ ಬಿರಾದಾರ ರಾಜೇಸಾಬ ಶಿವನಗುತ್ತಿ ವೇದಿಕೆಯಮೇಲಿದ್ದರು
ಕೆ ಸುನಂದ ಪ್ರಾಥಿ9ಸಿದರು. ಸುರೇಶ ಜತ್ತಿ ಸ್ವಾಗತಿಸಿ ,ನಿರೂಪಿಸಿದರು. ಶಿಲ್ಪಾ ಹಂಜಿ ವಂದಿಸಿದರು.
ಇದೇ ಸಂದರ್ಭದಲ್ಲಿ ಇತ್ತಿಚಿಗೆ ನಮ್ಮನ್ನಗಲಿದ ಯುವ ಸಾಹಿತಿ ರಾಜೇಂದ್ರ ಬಿರಾದಾರ ಇವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಅಭಿಷೇಕ ಚಕ್ರವರ್ತಿ ವಿದ್ಯಾವಂತಿ ಅಂಕಲಗಿ ಎಸ್ ಎಲ್ ಇಂಗಳೇಶ್ವರ ಶಂಕರ ಬೈಚಬಾಳ ಡಾ:ವಿ ಎಮ್ ಬಾಗಾಯತ ಪೆÇ್ರ ಶರಣಗೌಡ ಪಾಟೀಲ ಭೀಮರಾಯ ನಾಯಕರ ಡಿ ಜೊಸೆಪ್ ಡತ್ತಾತ್ರಯ ಪೂಜಾರಿ ಸುಖದೇವಿ ಅಲಬಾಳಮಠ ಅಜು9ನ ಶಿರೂರ ಶ್ರೀದೇವಿ ದೊಡಮನಿ ಮಜರ ವಾಲಿಕಾರ ಅಶೋಕ ಹೂಗಾರ ಪ್ರದೀಪ ನಾಯಕೋಡಿ ಉಪಸ್ಥಿತರಿದ್ದರು.