ದೇವರ ದಾಸಿಮಯ್ಯ ಜಯಂತಿ
ದೇವದುರ್ಗ,ಮಾ.೨೭- ಬಸವಾದಿ ಶರಣರು ಸಮಾಜದ ಅಂಕುಡೊಂಕು ತಿದ್ದುವ ಜತೆಗೆ ಸಮಾಜಕ್ಕೆ ವಚನ ಎನ್ನುವ ಅಮೃತವನ್ನು ನೀಡಿದ್ದಾರೆ. ಅವರ ಆದರ್ಶಗಳು, ತತ್ವಗಳು ಹಾಗೂ ವಚನಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ ಎಂದು ಕಸಾಪ ತಾಲೂಕು ಮಾಜಿ ಅಧ್ಯಕ್ಷ ಎಚ್.ಶಿವರಾಜ ಹೇಳಿದರು.
ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ದೇವರ ದಾಸಿಮಯ್ಯರ ಜಯಂತಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ದೇವರ ದಾಸಿಮಯ್ಯ ಆದ್ಯ ವಚನಕಾರರಾಗಿದ್ದು, ಬಸವಾದಿ ಶರಣರ ಸಮಕಾಲಿನ ಶರಣರಾಗಿದ್ದಾರೆ. ತಮ್ಮ ವಚನಗಳ ಮೂಲಕವೇ ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಭಕ್ತಿ ಮಾರ್ಗ ತೋರುವ ಜತೆಗೆ ಜೀವನದ ಆದರ್ಶಗಳನ್ನು ನಮಗೆ ಕಲಿಸಿದ್ದಾರೆ ಎಂದು ಹೇಳಿದರು.
ಕಂದಾಯ ನಿರೀಕ್ಷಕ ಭೀಮನಗೌಡ ಪಾಟೀಲ್ ದೇವರ ದಾಸಿಮಯ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ನೇಕಾರ ಸಮುದಾಯದ ತಾಲೂಕು ಅಧ್ಯಕ್ಷ ಕೆ.ಬಸವರಾಜ, ಪ್ರಕಾಶ್ ನೀಲಿ, ಭೋಜಪ್ಪ ಮಿಣಜಿಗಿ, ಮಲ್ಲೇಶ ಮಾಶೆಟ್ಟಿ, ಶಿವರಾಜ್ ಅಕ್ಕಿಕಲ್, ಶಿವರಾಜ್ ಆದಿ, ಕೆ.ಈರಣ್ಣ ಆದಿ, ಪ್ರವೀಣ್ ಕುಮಾರ್ ಮಲ್ಲಿಕಾರ್ಜುನ್ ತಗೂಲಿ, ಪ್ರಕಾಶ ಅಕ್ಕಿಕಲ್, ಚನ್ನವೀರ ಶೆಟ್ಟಿ ನೌಕರರಾದ ಶರಣಬಸವ ಸ್ವಾಮಿ, ರವಿಕುಮಾರ್ ಬಲ್ಲಿದವ್, ಶಾಂತಮಲ್ಲಯ್ಯ ಸ್ವಾಮಿ ಇತರರಿದ್ದರು.