ಶರಣರ ವಚನಗಳು ಕನ್ನಡ ಸಾಹಿತ್ಯದ ಸಂಪನ್ಮೂಲ : ವಿದ್ಯಾವತಿ ಅಂಕಲಗಿ

ವಿಜಯಪುರ :ಜೂ.25: ಬಸವಾದಿ ಶರಣರ ವಚನಗಳು ಕನ್ನಡ ಸಾಹಿತ್ಯದ ಸಂಪನ್ಮೂಲವಗಿದೆ ಎಂದು ಹಿರಿಯ ಸಾಹಿತಿ, ನ್ಯಾಯವಾದಿ ವಿದ್ಯಾವತಿ ಅಂಕಲಗಿ ಅಭಿಪ್ರಾಯ ವ್ಯಕ್ತಪಡಿಸಿದರು

ದಿ:ಷಡಕ್ಷರಯ್ಯಾ ಶಿವಪೂಜಯ್ಯಾ ಹಿರೇಮಠ ದತ್ತಿ.ಹಾಗು ಹುಚ್ಚಪ್ಪ ಪಕೀರಪ್ಪಾ ಇಬ್ರಾಹಿಂಪೂರ ದತ್ತಿಯನ್ನು ಸರಕಾರಿ ಮೆಟ್ರೀಕ ನಂತರ ಬಾಲಕಿಯರ ವಸತಿ ನಿಲಯ 2 ,ಸ್ಟೇಶನ್ ರಸ್ತೆಯ ವಿಜಯಪುರ .ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಚನ ಸಾಹಿತ್ಯ ಅಪಾರ ಕೊಡುಗೆ ನೀಡಿದೆ .ಶರಣರ ತತ್ವ ಸವ9ಕಾಲಿಕವಾಗಿದ್ದು ಸಮಾಜವನ್ನು ತಿದ್ದಿ ಸನ್ಮಾಗ9ದ ಸಂದೇಶ ಸಾರಿವೆ ಎಂದರು. ಹಿರಿಯ ಸಾಹಿತಿ

ಪೆÇ್ರ: ಎ ಎಚ್ ಕೊಳಮಲಿ ಶರಣರ ಚಿಂತನೆ ಕುರಿತು ಉಪನ್ಯಾಸ ನೀಡಿ ದೇಶದ ಮತ್ತು ನಾಡಿನ ಶರಣರು ಮಾನವ ಕುಲ ಧಮ9ದ ತಳಹದಿಯ ಮೇಲೆ ನಡೆಯಬೇಕು. ನೀತಿ,ಮೌಲ್ಯ. ಮಾನವೀಯತೆಯ ದೃಷ್ಟಿಯಿಂದ ಸಮಾಜಿಕ ಸಮಾನತೆ ಪರಿಕಲ್ಪನೆ ಶರಣರ ಇಚ್ಚೆಯಾಗಿದೆ ಎಂದರು.

ಸಾಹಿತಿ ಮತ್ತು ಶಿಕ್ಷಕ ಆರ್ ಎಸ್ ಪಟ್ಟಣಶೆಟ್ಟಿ ಶರಣ ಸಾಹಿತ್ಯದ ಮಹತ್ವ ಕುರಿತು ಉಪನ್ಯಾಸ ನೀಡಿದ ಅವರು ಹನ್ನೇರಡನೆಯ ಶತಮಾನದ ಶರಣರು ಅನುಭವ ಮಂಟಪದಲ್ಲಿ ಸಾರಿದ ವಚನಗಳೆ ಇಂದು ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿವೆ. ನಮ್ಮ ನಾಡಿನ ಶರಣರ ವಚನಗಳು ವಿಶ್ವದಲ್ಲಿ ಪ್ರಸಿದ್ಧವಾಗಿವೆ ಎಂದರು .

ದತ್ತಿ ನಿಧಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಕೆ ಎಪ್ ಅಂಕಲಗಿ ಮಾತನಾಡಿ ಬಸವಾದಿ ಶರಣರ ವಚನ ಸಾಹಿತ್ಯ ಮೌಲ್ಯಯುತ ಸಂದೇಶ ಸಾರಿವೆ ಎಂದರು.

ನಿಲಯ ಮೇಲ್ವಿಚಾರಕಿ ಸಮಾಜ ಕಲ್ಯಾಣ ಇಲಾಖೆ ರೂಪಾ ಮೈತ್ರಿ ಕಸಾಪ ನಗರ ಘಟಕ ವಿಜಯಪುರ ಸಂಗೀತಾ ಮಠಪತಿ ಜಿಲ್ಲಾ ಕಸಾಪ ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ ಉಪಸ್ಥಿತರಿದ್ದರು.

ಸಾಹಿತಿ ಸುಖದೇವಿ ಅಲಬಾಳಮಠ ನಿರೂಪಿಸಿದರು. ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.