ಭಾಲ್ಕಿ: ಮಾ.27:ಶರಣರ ತತ್ವದ ದರ್ಶನವಾಗಬೇಕಾದರೆ ಶರಣರು ಬರೆದ ವಚನಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೀರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ಇಲ್ಲಿನ ಮಹಾದೇವಿ ಪ್ರಕಾಶ ಅಷ್ಟೂರೆ ಅವರ ನೂತನ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಹಿರೇಮಠ ಸಂಸ್ಥಾನ ವತಿಯಿಂದ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಹಾಗೂ ವಚನ ಜಾತ್ರೆ-2023 ಮತ್ತು ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ 24ನೆಯ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡ 70ನೇ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, 12ನೆಯ ಶತಮಾನದ ಶಿವಶರಣರು ನೈಜ ಜನತಂತ್ರದ ಮೌಲ್ಯಗಳನ್ನು ಎತ್ತಿಹಿಡಿದು ಸಮಾನತೆಯ ಬೀಜ ಬಿತ್ತಿದರು. ಜಾತಿ, ಲಿಂಗ, ಸಂಪತ್ತಿನ ಅಸಮಾನತೆಯನ್ನು ತೊಡೆದು ಹಾಕಲು ಶೈಕ್ಷಣಿಕ, ಆಧ್ಯಾತ್ಮಿಕ, ಸಾಮಾಜಿಕ ಕ್ರಾಂತಿ ಮಾಡಿದರು. ಯುವಪಿಳೀಗೆ ಬಸವಾದಿ ಶರಣರ ತತ್ವಗಳನ್ನು ಅನುಸರಿಸಿ ಮೌಲ್ಯಯುತ ಜೀವನ ನಡೆಸಬೇಕು ಎಂದು ನುಡಿದರು.
ರಾಷ್ಟ್ರೀಯ ಬಸವದಳದ ರಾಷ್ಟ್ರಾಧ್ಯಕ್ಷರೂ ಆದ ಜಾಗತಿಕ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ವಿಶ್ವಗುರು ಬಸವಣ್ಣನವರ ವಚನಗಳು ಮೌಲ್ಯಗಳ ಪ್ರಜ್ಞೆ ಹಾಗೂ ಮಾನವೀಯ ಕಾಳಜಿ ಬೆಳೆಸುವ ಜೊತೆಗೆ ಪರೋಪಕಾರಿ ಜೀವನ ನಡೆಸುವುದರ ಪ್ರಾಮುಖ್ಯತೆ ತಿಳಿಸಿಕೊಡುತ್ತವೆ ಎಂದು ಹೇಳಿದರು.
ಬೀದರ್ ಜಿಪಂ ವಿಶ್ರಾಂತ ಲೆಕ್ಕಾಧಿಕಾರಿ ರಾಜೇಂದ್ರ ಜೊನ್ನಿಕೆರೆ,ವಚನಗಳ ಸಾರ ಅರಿತು ನಮ್ಮ ಬದುಕು ರೂಪಿಸಿಕೊಳ್ಳಬೇಕು ಎಂದು ನುಡಿದರು.
ಶಿವಶರಣಪ್ಪ ಹುಗ್ಗಿ ಪಾಟೀಲ ಮಾತನಾಡಿ, ನುಡಿದಂತೆ ನಡೆಯಬೇಕು. ನಡೆಯಲ್ಲಿಯೇ ನುಡಿ ಕೂಡಿರಬೇಕು. ನಮ್ಮ ಎಲ್ಲ ಸಮಸ್ಯೆಗಳಿಗೆ ಬಸವಣ್ಣನವರ ವಚನಗಳಲ್ಲಿ ಪರಿಹಾರ ದೊರಕುತ್ತದೆ ಎಂದು ತಿಳಿಸಿದರು.
ಸನ್ಮಾನ: ಶುಭಾಂಗಿ ಚನ್ನಬಸವ ಬಳತೆ ಮತ್ತು ಶಾಂತಯ್ಯ ಸ್ವಾಮಿ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ರಾಜಶೇಖರ ಅಷ್ಟೂರೆ ಮತ್ತು ಪ್ರಕಾಶ ಅಷ್ಟೂರೆ ಬಸವಗುರು ಪೂಜೆ ನೆರವೇರಿಸಿದರು. ಮಹಾದೇವಿ ಪ್ರಕಾಶ ಅಷ್ಟೂರೆ ಪ್ರಾರ್ಥನೆಗೀತೆ ಹಾಡಿದರು. ರೇಖಾಬಾಯಿ ಅಷ್ಟೂರೆ, ವಿದ್ಯಾವತಿ ಸೋಮನಾಥಪ್ಪ ಅಷ್ಟೂರೆ ಬಸವ ಪ್ರಾರ್ಥನೆ ನಡೆಸಿಕೊಟ್ಟರು.ಪ್ರಮುಖರಾದ ಶಂಭುಲಿಂಗ ಕಾಮಣ್ಣ,ನಾಗಶೆಟ್ಟೆಪ್ಪ ಲಂಜವಾಡೆ,ಜೈಕಿಶನ ಬಿಯಾಣಿ,ವಸಂತರಾವ ಹುನಸನಾಳೆ,ವೀರಣ್ಣ ಕುಂಬಾರ,ಡಾ.ಅನೀಲ ಸುಕಾಳೆ,ಡಾ.ನಿತೀನ ಪಾಟೀಲ್,ಡಾ.ಯುವರಾಜ ಜಾಧವ,ಡಾ.ಧನರಾಜ ಹುಲಸೂರೆ,ಡಾ.ವಿಲಾಸ ಕನಸೆ,ಡಾ.ಪ್ರಭು ಕೋಟೆ,ಡಾ.ಗುಂಡೆರಾವ ಶೆಡೋಳೆ,ಆಕಾಶ ರಿಕ್ಕೆ,ಡಾ.ಟೋಪಾರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಮಾಜಿ ಎಜಿ ಡಾ.ಅಮೀತ ಅಷ್ಟೂರೆ ಸ್ವಾಗತಿಸಿದರು. ಪ್ರಾಚಾರ್ಯ ಅಶೋಕ ರಾಜೋಳೆ ನಿರೂಪಿಸಿದರು.ಜಾಗತಿಕ ಲಿಂಗಾಯತ ಮಹಾಸಭೆ ತಾಲೂಕು ಅಧ್ಯಕ್ಷ ಬಸವರಾಜ ಮರೆ ವಂದಿಸಿದರು.