ಜೇವರ್ಗಿ:ಮಾ.28 : ಶರಣರು, ಸಂತರು, ತತ್ವಪದಕಾರರು ಜನಿಸಿದ ಪುಣ್ಯಭೂಮಿಯೆ ನಮ್ಮ ಸಗರನಾಡು ಎಂದು ಗುಲಬರ್ಗ ವಿಶ್ವವಿದ್ಯಾಲಯ ಕಲಬುರಗಿ ಕನ್ನಡ ಅಧ್ಯಾಯನ ವಿಭಾಗದ ನಿರ್ದೇಶಕ ಡಾ. ಎಚ್. ಟಿ. ಪೋತೆ ಅಭಿಪ್ರಾಯಪಟ್ಟರು.
ಪಟ್ಟಣದ ಹಳೇ ತಹಸೀಲ್ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜೇವರ್ಗಿ ತಾಲೂಕ ಘಟಕದ ವತಿಯಿಂದ ಸಗರನಾಡು ಸಂಸ್ಕøತಿ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನುದ್ದೇಶಿಸಿ ಡಾ. ಎಚ್. ಟಿ. ಪೋತೆ ಮಾತನಾಡಿ ಮನುಷ್ಯ ಮನುಷನ್ನು ಗೌರವಿಸುವುದನ್ನು ಕಲಿಯಬೇಕು. ಗೌರವ ನೀಡುವುದನ್ನು ಕಲಿತಾಗ ಮಾತ್ರ ಶರಣರ ನಾಡಾದ ಸಗರನಾಡಿಗೆ ಒಂದು ಅರ್ಥ ಬರುತ್ತದೆ. ತನ್ನದೆಯಾದ ವೈಶಿಷ್ಠತಯನ್ನು ಹೊಂದಿದ ನಮ್ಮ ಸಗರ ನಾಡಿನ ಇತಿಹಾಸವನ್ನು ಅರಿತಿಕೊಳಬೇಕು. ಅರಿತುಕೊಳುವುದರ ಜೋತೆಗೆ ಸಾಮಾನ್ಯ ಜನರಿಗು ತಿಳಿಸಬೇಕು.
ರಾಜಕಾರಣಿಗಳು, ಯುವಕರು ಸಗರನಾಡಿನ ವೈಭವವನ್ನು ಹೆಚ್ಚಿಸಬೇಕು. ಸಾಹಿತ್ಯವನ್ನು ಉಳಿಸಿ ಬೇಳಸುವುದನ್ನು ನಾವು ಕಲಿಯಬೇಕು, ಇತರರಿಗು ಕಲಿಸಬೇಕು. ಅಂದಗಾ ಮಾತ್ರ ಈ ಕಾರ್ಯಕ್ರಮ ಮಾಡಿದಕ್ಕು ಸಾರ್ಥಕವಾಗುತ್ತದೆ ಎಂದರು.
ನಂತರ ಉತ್ಸವದ ಸರ್ವಾಧ್ಯಕ್ಷ ಡಾ. ಶ್ರೀಶೈಲ್ ನಾಗರಾಳ ಮಾತನಾಡಿ ಸಾಹಿತ್ಯ ಮತ್ತು ಸಂಸ್ಕøತಿ ಎರಡು ಮಾನವನಿಗಾಗಿಯೆ ಇದೆ, ಮಾನವನಿಂದಲ್ಲೆ ಹಿಟ್ಟಿದೆ. ಒಂದನು ತಿಳಿಯದೆ ಇನ್ನೊಂದರ ಅರ್ಥವಾಗಲಾರದು. ಒಂದನ್ನು ಬಿಟ್ಟು ಇನ್ನೊಂದು ಬದಕುಕಲಾರದು. ಸಾಹಿತ್ಯವನ್ನು ಉಳಿಸಿ ಬೆಳಸಬೇಕು, ಇದು ನಮ್ಮೆಲ್ಲರ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ವಿರಕ್ತ ಮಠ ಸೊನ್ನದ ಡಾ. ಶಿವಾನಂದ ಸ್ವಾಮಿಜಿ, ಅಣಜಿಗಿಯ ಶ್ರೀಸತ್ಯಾನಂದ ಮುತ್ಯಾ, ಸುರಪುರ ಸಂಸ್ಥಾನದ ಡಾ. ರಾಜಾ ಕೃಷ್ಣಪ್ಪನಾಯಕ, ಶಾಸಕ ಡಾ. ಅಜಯಸಿಂಗ್, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣ ಕಮಕನೂರ, ಮಲ್ಲಿನಾಥಗೌಡ ಯಲಗೋಡ, ಬಿಜೆಪಿ ಎಸ್ ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮರೆಪ್ಪ ಬಡಿಗೇರ, ಜಿ ಪಂ ಮಾಜಿ ಸದಸ್ಯ ರೇವಣಸಿದ್ದಪ್ಪ ಸಂಕಾಲಿ, ರಾಜಶೇಖರ ಸೀರಿ, ಹಳ್ಯಪ್ಪಾಚಾರ್ಯ ಜೋಶಿ, ಚನ್ನಮಲ್ಲಯ್ಯ ಹಿರೇಮಠ, ಎಸ್ ಕೆ ಬಿರಾದಾರ, ಚಂದ್ರಶೇಖರ ತುಂಬಗಿ, ಶ್ರೀಹರಿ ಕರಕಳ್ಳಿ, ಕಲ್ಯಾಣಕುಮಾರ ಸಂಗಾವಿ, ಡಾ. ಹಣಮಂತ್ರಾಯ ರಾಂಪೂರ, ಶರಣು ಧಾರವಾಡಕರ್, ಎಸ್ ಎ ಪಡಶಟ್ಟಿ, ಶರಣಗೌಡ ಬಿರಾದಾರ, ಮಲ್ಲಿನಾಥ ಪಾಟೀಲ್ ಸೇರದಂತೆ ಅನೇಕರಿದ್ದರು.