ಶರಣರ ತತ್ವಗಳ ಅಳವಡಿಕೆಗೆ ಕರೆ


ಲಕ್ಷ್ಮೇಶ್ವರ,ಸೆ.16: ಪಟ್ಟಣದ ಸ್ಕೂಲ್ ಚಂದನದಲ್ಲಿ 12ನೇ ಶತಮಾನದ ಶರಣೆ ಶರಣೀಯರ ವಚನ ವಿಸ್ಕೃತ ಕಾರ್ಯಕ್ರಮ ಗುರುವಾರ ಜರುಗಿತು.
ಕಾರ್ಯಕ್ರಮದ ಉದ್ಘಾಟನಾ ನೆರವೇರಿಸಿ ಮಾತನಾಡಿದ ಬೀದರ್ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಹಾಗೂ ವಿಕಾಸ ಅಕಾಡೆಮಿ ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಡಾಕ್ಟರ್ ಬಸವರಾಜ ಪಾಟೀಲ್ ಸೇಡಂ ಅವರು 12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಶರಣ ಶರಣೆ ಯರು ಬದುಕು ಮತ್ತು ಬದುಕಿನ ಮೌಲ್ಯಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಹೀಗೆ ಜೀವನ ಸಾಗಿಸಬೇಕು ಮತ್ತು ಜೀವನದಲ್ಲಿ ಶರಣರ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಬೇಕು ಎಂದರು.
ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಕಾರ್ಯ ಚಟುವಟಿಕೆಗಳನ್ನು ಗಮನಿಸಿದರೆ ಇವರು ಶರಣ ಸಂಸ್ಕೃತಿಯ ಬಗ್ಗೆ ಅಗಾಧವಾದ ಜ್ಞಾನವನ್ನು ಹೊಂದಿದ್ದು, ಈ ವಿದ್ಯಾರ್ಥಿಗಳಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು. ಮಾಜಿ ಸಚಿವ ಎಸ್ ಎಸ್ ಪಾಟೀಲ್ ಅವರು ಮಾತನಾಡಿ 12ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಯ ಕಾರಣದಿಂದಾಗಿ ದೇಶದಲ್ಲಿಯೇ ಮೊಟ್ಟಮೊದಲು ಅನುಭವ ಮಂಟಪದ ಮೂಲಕ ಸಂಸತ್ತನ್ನು ಅನಾವರಣಗೊಳಿಸಿದ ಶರಣರಿಗೆ ಸಲ್ಲುತ್ತದೆ ಎಂದರು.
ಯಶಸ್ವಿ ಗ್ರೂಪಿನ ಎಂ ಡಿ ಎ ಎಸ್ ಪಾಟೀಲ್ ಅವರು ಮಾತನಾಡಿ ಸ್ಕೂಲ್ ಚಂದನ ವಿದ್ಯೆ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಬೋಧನೆ ಮಾಡುತ್ತಿರುವುದು ಇಂದಿನ ದಿನಮಾನಗಳಲ್ಲಿ ಶ್ರೇಷ್ಠವಾದದ್ದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಟಿ ಈಶ್ವರವರು ಅಲ್ಲಮಪ್ರಭು ಸತ್ಯ ಮತ್ತು ಅಸತ್ಯದ ಮಧ್ಯ ಇರುವ ವ್ಯತ್ಯಾಸವನ್ನು ಅನಾವರಣಗೊಳಿಸಿದರು ಎಂದು ಹೇಳಿದ ಅವರು ವಿದ್ಯಾರ್ಥಿಗಳು ಜೀವನದಲ್ಲಿ ಶರಣರ ತತ್ವಗಳನ್ನು ಅಳವಡಿಸಿಕೊಂಡು ಉತ್ತಮ ಮೌಲ್ಯಗಳೊಂದಿಗೆ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.
ವಿದ್ಯಾರ್ಥಿಗಳಾದ ಪ್ರಿಯಾಂಕ ಪ್ರವೀಣ್ ವಂಚನ ವರ್ಷ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಅಕ್ಕಮಹಾದೇವಿ ಕದಳಿವನ ಕಾರ್ಯಕರ್ತರು ಸೇರಿದಂತೆ ಸಂಸ್ಥೆಯ ಗೌರವಾಧ್ಯಕ್ಷರಾದ ಎಚ್ ಸಿ ರಟ್ಟಿಗೇರಿ ಮುಖ್ಯೋಪಾಧ್ಯಾಯರು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.