ಶರಣರ ತತ್ವಗಳಿಂದ ಪರಿಹಾರ ಃ ಡಾ. ಹಿರೇಮಠ


ಬಾಗಲಕೋಟೆ, ಜ 14ಃ ಜೀವನ, ಮೌಲ್ಯಗಳು, ಅಪಮೌಲ್ಯಗಳು ಎಂದರೇನು ? ಎಂಬ ಬಗ್ಗೆ ಜೀವನದ ಮೌಲ್ಯಗಳು, ಜೀವನದ ಅಪಮೌಲ್ಯಗಳ ಬಗ್ಗೆ ಗೊಂದಲಗಳಿಗೆ ಬಸವಾದಿ ಶರಣರ ತತ್ವಗಳು ಪರಿಹಾರ ನೀಡಬಲ್ಲವು ಎಂದು ಬಾದಾಮಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಜಿ. ಹಿರೇಮಠ ಹೇಳಿದರು.
ನವನಗರದ ಸೆಕ್ಟರ್ ನಂ. 52 ರ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ತಾಲೂಕಾ ಸಮಿತಿ ಹಾಗೂ ಜತ್ತಿ ಕುಟುಂಬವು ಲಿಂ. ಸಂಗಪ್ಪ ದಾನಪ್ಪ ಜತ್ತಿ ಸ್ಮರಣಾರ್ಥ ಆಯೋಜಿಸಿದ್ದ ದತ್ತಿ ಉಪನ್ಯಾಸ ಹಾಗೂ ಸಾಹಿತ್ಯ ಸಿಂಚನ ವೇದಿಕೆಯ ಸರಣಿ ಉಪನ್ಯಾಸ ಮಾಲಿಕೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಜೀವನದ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದ ಅವರು ಜಗತ್ತಿನಲ್ಲಿ ಇಂದು ಇದೆ ಎಂದರೆ ಎಲ್ಲವೂ ಇದೆ, ಇಲ್ಲ ಎಂದರೇ ಎಲ್ಲವೂ ಇಲ್ಲ, ಅಂತಹ ಸಮಾಜ, ಜಗತ್ತಿನಲ್ಲಿ ಬದುಕುತ್ತಿರುವ ನಮ್ಮಗಳಿಗೆ ಜೀವನದ ಮೌಲ್ಯಗಳು ಯಾವವು, ಅಪಮೌಲ್ಯಗಳು ಯಾವವು ಎಂಬ ಜಿe್ಞÁಸೆ ಕಾಡುತ್ತಿದೆ, ಕೊನೆಗೆ ಈ ಜಗತ್ತಿನ ಜೀವನ ಒಂದು ನಶ್ವರ ಎಂಬ ಪರಿಸ್ಥಿತಿಯಲ್ಲಿ ಬದುಕುತ್ತಿದೆÂ್ದೀವೆ ಎಂದರು.
ನಂತರ ಮಾತನಾಡಿದ ಜಿಲ್ಲಾ ಕಸಾಪ ನೂತನ ಅಧ್ಯP್ಷÀ ಶಿವಾನಂದ ಶೆಲ್ಲಿಕೇರಿ ಅವರು ಶರಣರ ತತ್ವಾದರ್ಶನಗಳು ಹಾಗೂ ಸಾಹಿತ್ಯದ ಮೂಲಕ ಸಮಾಜದಲ್ಲಿ ಪರಿಣಾಮಕಾರಿ ಬದಲಾವಣೆ ತರಬಹುದಾಗಿದೆ ಎಂದು ಹೇಳಿ ಕಸಾಪದಿಂದ ಕೈಗೊಳ್ಳಬೇಕಾಗಿರುವ ಕಾರ್ಯ ಚಟುವಟಿಕೆಗಳ ಕುರಿತು ವಿವರಿಸಿದರು.
ಅಧ್ಯP್ಷÀತೆ ವಹಿಸಿದ್ದ ಅಖಿಲ ಭಾರತೀಯ ವೀರಶೈವ ಮಹಾಸಭೆಯ ಜಿಲ್ಲಾ ಧ್ಯP್ಷÀ ಜಿ.ಎನ್. ಪಾಟೀಲ ಅವರು ಮಾತನಾಡಿ ಹಿರಿಯರ ಮಾರ್ಗದರ್ಶನದಲ್ಲಿ ಶರಣರ ತತ್ವಗಳನ್ನು ಮೈಗೂಡಿಸಿಕೊಂಡು ಆದರ್ಶಮಯ ಸಂಸ್ಕಾರಗಳನ್ನು ಬೆಳೆಸಿಕೊಂಡು ಜೀವನ ಸಾಗಬೇಕಾಗಿದೆ, ಅವಿಭಕ್ತ ಕುಟುಂಬಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಹಾಗೂ ಸಂಬಂಧಗಳಿಗೆ ಬೆಲೆ ನೀಡ ಬದುಕುತ್ತಿರುವ ಜತ್ತಿ ಕುಟುಂಬ ಮಾದರಿಯಾಗಿದೆ ಎಂದರು.
ವಿಶ್ರಾಂತ ಸಹಾಯಕ ಕೃಷಿ ನಿರ್ದೇಶಕ ಪಿ.ಡಿ. ಜತ್ತಿ ಅವರು ಮಾತನಾಡಿ ಕುಟುಂಬ ವ್ಯವಸ್ಥೆಯಲ್ಲಿಯೇ ನೆಮ್ಮದಿ ಇದೆ, ಹಿರಿಯರ ಮಾರ್ಗದರ್ಶನ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದರೆ ಜೀವನದಲ್ಲಿ ನೆಮ್ಮದಿ ಕಾಣಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಪಸಾ ನೂತನ ಅಧ್ಯP್ಷÀ ಶಿವಾನಂದ ಶೆಲ್ಲಿಕೇರಿ ಹಾಗೂ ಪತ್ರಕರ್ತ ಶಂಕರ ಎಸ್. ಕಲ್ಯಾಣಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ತಾಲೂಕಾ ಸಮಿತಿಗೆ ಮಾರ್ಗದರ್ಶನ ನೀಡಿ ನೆರವಾದ ಗಣ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯP್ಷÀ ಎಸ್.ಜಿ. ಕೋಟಿ, ಶ್ರೀಶೈಲಪ್ಪ ದಾನಪ್ಪ ಜತ್ತಿ, ಶೇಖರಪ್ಪ ಜತ್ತಿ, ಅಶೋಕ ಜತ್ತಿ, ವಿರುಪಾಕ್ಷಿ ಜತ್ತಿ, ಸೋಮಶೇಖರ ಜತ್ತಿ, ವೀರಭದ್ರಪ್ಪ ವಾಲ, ವಿಜಯಲಕ್ಷ್ಮಿ ನರೇಗಲ್ಲ, ಶಿವಲೀಲಾ ಸಂಬಣ್ಣವರ, ಬಸವರಾಜ ಬಿದರಿ ಮತ್ತಿತರ ಗಣ್ಯರು, ಸಾಹಿತಿಗಳು ಉಪಸ್ಥಿತರಿದ್ದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷೆ ಗೀತಾ ದಾನಶೆಟ್ಟಿ ಜತ್ತಿ ಕುಟುಂಬ ಹಾಗೂ ಪರಿಷತ್ತಿನ ಸಾಧನೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮಾ ಜತ್ತಿ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪಿ.ಡಿ. ಜತ್ತಿ ಸ್ವಾಗತಿಸಿದರು. ಮಂಜುಳಾ ಅಂಗಡಿ, ನಿರ್ಮಲಾ ಲೂತಿಮಠ ಪರಿಚಯಿಸಿದರು.