ಶರಣರ ಜನನ, ತುಂಬಿ ತುಳಿಕಿದ ತೊಟ್ಟಿಲೋತ್ಸವದ ಸಂಭ್ರಮ !ಕಡಣಿ ಕೃಷಿಕರ ಭಕ್ತಿ ಸೇವೆಯೂ ಮಹಾದಾಸೋಹ:ಲಿಂಗರಾಜಪ್ಪ ಅಪ್ಪ

ಕಲಬುರಗಿ,ಮಾ.15: ಕಲಬುರಗಿ ಮಹಾನಗರದ ಜನತೆಗೆ ತರಕಾರಿ ಪೂರೈಸುತ್ತಿರುವುದೇ ಕಡಣಿ’ ಗ್ರಾಮ. ಮೇಲ್ನೋಟಕ್ಕೆ ಅದೊಂದು ವೃತ್ತಿ ಅನ್ನಿಸಬಹುದು. ಆದರೆ, ವಾಸ್ತವದಲ್ಲಿ ಕಡಣಿ ಕೃಷಿಕರುಕಾಯಕವೇ ಕೈಲಾಸ’ ಎನ್ನುವ ದೃಷ್ಟಿಯಿಂದ ತರಕಾರಿ ಪೂರೈಸುತ್ತಿರುವುದು ಅದೊಂದು ಭಕ್ತಿ ಸೇವೆಯಾಗಿದೆ, ಅದುವೇ ಮಹಾದಾಸೋಹವಾಗಿದೆ ಎಂದು ಗುಣಗಾನ ಮಾಡಿದವರು ಶ್ರೀ ಶರಣಬಸವೇಶ್ವರ ಸಂಸ್ಥಾನದ ಕುಡಿ ಹಾಗು ವಿಶ್ವ ಹಿಂದೂ ಪರಿಷತ್‍ನ ಉತ್ತರ ಪ್ರಾಂತದ ಉಪಾಧ್ಯಕ್ಷ ಶ್ರೀ ಲಿಂಗರಾಜಪ್ಪ ಅಪ್ಪ.
ಅವರು ಮಂಗಳವಾರ ಸಂಜೆ ಶ್ರೀ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಪುರಾಣ ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಿ ಮಾತನಾಡಿದ ಅವರು, ಶರಣರ ಪುರಾಣ ಆಲಿಕೆಯಿಂದ ಮನಸ್ಸಿಗೆ ತೃಪ್ತಿಯಷ್ಟೇ ನೀಡದೇ, ಕುಟುಂಬಗಳಲ್ಲಿನ ಹಾಗು ಗ್ರಾಮಗಳಲಿನನ ವ್ಯಾಜ್ಯಗಳು ಪರಿಹಾರಗೊಂಡು ಶಾಂತಿ ನೆಲೆಗೊಳ್ಳುತ್ತದೆ ಎಂದು ನುಡಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಶಂಕರ ಸಿರಿ’ ಪ್ರಶಸ್ತಿ ಭಾಜನರಾದ ಪೊಲೀಸ್ ಸಬ್ ಇನ್ಸಪೆಕ್ಟರ್ ಯಶೋಧ ಕಟಕೆಯವರು ಮಾತನಾಡಿ, ಮಕ್ಕಳು ಸಂಸ್ಕಾರವಂತರಾಗಿ ಬೆಳೆಯಲು ತಾಯಂದಿರರ ಪಾತ್ರ ಮುಖ್ಯವಾಗಿದೆ. ಸಂಸ್ಕøತಿ ಹಾಗು ಸಂಸ್ಕಾರದಿಂದ ಭಾರತ ಸಿರಿವಂತ ರಾಷ್ಟ್ರ. ಆದರೆ, ಇವತ್ತಿನ ವಿಜ್ಞಾನ ಸಾಕಷ್ಟು ಪ್ರಗತಿ ಸಾಧಿಸಿದ್ದರೂ, ಸಾಂಸ್ಕøತಿಕ ಹಾಗು ಸಂಸ್ಕಾರದಿಂದ ತೀರಾ ಹಿಂದುಳಿದಿದೆ ಎಂದು ವಿಷಾಧದಿಂದ ನುಡಿದರು. ಸುಕ್ಷೇತ್ರ ಚಿನ್ಮಯಗಿರಿಯ ಮಹಾತಪಸ್ವಿ ಶ್ರೀ ಗುರು ಮಹಾಂತೇಶ್ವರ ಮಠದ ನೂತನ ಪೀಠಾಧಿಪತಿ ಪೂಜ್ಯಶ್ರೀ ಷ.ಬ್ರ. ವೀರಮಹಾಂತೇಶ್ವರ ಶಿವಾಚಾರ್ಯರ ಸಿರಿಕಂಠದಲ್ಲಿಮಹಾದಾಸೋಹಿ ಶ್ರೀ ಶರಣಬಸವೇಶ್ವರ’ರ ಪುರಾಣವನ್ನು ಪ್ರಾರಂಭಿಸಿದರು. ಪುರಾಣದ ನಾಯಕರಾಗಿರುವ ಶ್ರೀ ಶರಣಬಸವೇಶ್ವರರ ಜನನ ಮತ್ತು ಅವರಿಗೆ ತೊಟ್ಟಿಲೋತ್ಸವ ಅತ್ಯಂತ ವೈಭವದಿಂದ ನಡೆಯಿತು. ಮಾದನಹಿಪ್ಪರ್ಗಿಯ ಪೂಜ್ಯರು ತೊಟ್ಟಿಲೋತ್ಸವಕ್ಕೆ ಸಾಕ್ಷಿಯಾಗಿದ್ದರು. ಗ್ರಾಮದ ಹಿರಿಯರಾದ ಚಂದ್ರಶ್ಯಾ ಅಗಸರ ಬಸವಣ್ಣನ ಪಾರ ನಿರ್ವಹಿಸಿದರು. ಜೆಡಿಎಸ್ ಯುವ ಘಟಕದ ರಾಜ್ಯುಪಾಧ್ಯಕ್ಷರೂ ಆಗಿರುವ ಕಲಬುರಗಿ ದಕ್ಷಿಣ ಮತಕ್ಷೇತ್ರದ ಅಭ್ಯರ್ಥಿ ಕೃಷ್ಣಾರೆಡ್ಡಿ, ನೀಲಕಂಠರಾವಗೌಡ ಮಾಲಿ ಪಾಟೀಲ ಕೋಳಕೂರ, ನೆರೆಯ ಗ್ರಾಮದ ಗಣ್ಯರಾದ ಮಿಣಜಗೆಮ್ಮ ದೇವಸ್ಥಾನ ಟ್ರಸ್ಟ್ ಕಮೀಟಿ ಕಾರ್ಯದರ್ಶಿ ಬಸವರಾಜ ಪಾಟೀಲ, ದಳಪತಿ ವೀರಣಗೌಡ ಪಾಟೀಲ, ಗುಂಡಣಗೌಡ ಆರ್. ಪಾಟೀಲ, ಅಣ್ಣಾರಾಯ ಪಾಟೀಲ, ದೊಡ್ಡಪ್ಪಗೌಡ ಪೊ. ಪಾಟೀಲ, ಗ್ರಾ.ಪಂ. ಸದಸ್ಯರಾದ ಭೈಲಪ್ಪ ಪೂಜಾರಿ, ಬಸವರಾಜ ಶೇರಿ, ಚಾಂದಪಾಶಾ, ಶಿವರಾಯ ನಾಟೀಕಾರ, ಲಿಂಬು ರಾಠೋಡ, ಟೆಂಟ್‍ಹೌಸ್‍ನ ಚಂದ್ರಕಾಂತ ನಾಯಕೋಟಿ, ಯಲ್ಲಾಲಿಂಗ ನಾಟೀಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಾದ ಅನ್ನಪೂರ್ಣ ರಾಚಣ್ಣ ಸಂಗೋಳಗಿ, ಪಿಎಸ್‍ಐ ಯಶೋಧಾ ಕಟಕೆ, ಹಾಗರಗುಂಡಗಿಯ ದತ್ತು ಸಿದ್ದಪ್ಪ ಪೂಜಾರಿ ಗೌನಳ್ಳಿ, ಶರಣಬಸಪ್ಪ ದೇವಣಗಾಂವ ಅವರುಗಳಿಗೆ `ಶಂಕರ ಸಿರಿ’ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ದೇವಿಂದ್ರಪ್ಪ ಎಕಲೂರ ಕಾರ್ಯಕ್ರಮ ನಿರೂಪಿಸಿದರು. ಅಪಾರ ಸಂಖ್ಯೆಯಲ್ಲಿ ಸದ್ಭಕ್ತಾಧಿಗಳು ಭಾಗವಹಿಸಿದ್ದರು.