ಶರಣರ ಕೊಡುಗೆ ಅಪಾರ

ನವಲಗುಂದ,ಜ22 : 12 ನೇ ಶತಮಾನದ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮುಖಾಂತರ ಪ್ರಸಿದ್ದರಾಗಿದ್ದರೆಂದು ತಹಶೀಲ್ದಾರ ಅನೀಲ ಬಡಿಗೇರ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕ ಆಡಳಿತದದಿಂದ ಆಯೋಜಿಸಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಹಾಗೂ ವಿಜಯಪುರ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿ.ಜಿ.ಸುಣಗಾರ ಉಪನ್ಯಾಸ ನೀಡಿ ಮಾತನಾಡಿ 12 ನೇ ಶತಮಾನ ವಚನ ಸಾಹಿತ್ಯದ ಒಂದು ಪ್ರಮುಖ ಕಾಲಘಟ್ಟವಾಗಿದ್ದು ವಚನಗಳ ಮೂಲಕ ವಿಶೇಷ ಆಂದೋಲನವೇ ನಡೆಯಿತು. ನಾಡಿನ ಶರಣರಲ್ಲಿ ಅಂಬಿಗರ ಚೌಡಯ್ಯನವರ ವಚನಗಳು ದಿಟ್ಟತೆ, ಕಠೋರತೆ ಇದ್ದರು ಸಹ ಮನಸ್ಸಿನಿಂದ ತುಂಬಾ ದಯಾಳುಗಳಾಗಿದ್ದರು. ಅಂತಹ ಮಹಾತ್ಮರು ನೀಡಿದ ವಚನಗಳು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಅವುಗಳನ್ನು ಪಾಲಸಬೇಕೆಂದು ಹೇಳಿದರು.
ಅಂಬಿಗರ ಚೌಡಯ್ಯ ಸಮಾಜ ಭಾಂದವರು ತಹಶೀಲ್ದಾರ ಕಾರ್ಯಾಲಯದಿಂದ ಅಂಬಿಗರ ಚೌಡಯ್ಯನವರ ಭಾವಚಿತ್ರದೊಂದಿಗೆ ಪಟ್ಟಣದ ಕುಂಭ ಹೊತ್ತ ಸುಮಂಗಲೆಯರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಟ್ಟಣದ ಶ್ರೀ ಗಂಗಾಪರಮೇಶ್ವರಿ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ದೇವಸ್ಥಾನಕ್ಕೆ ಆಗಮಿಸಿದರು.
ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ, ಪುರಸಭೆ ಅಧ್ಯಕ್ಷ ಮೋದಿನಸಾಬ ಶಿರೂರ, ಅಶೋಕ ಕರಿಸಕ್ರಣ್ಣವರ, ಸಮಾಜದ ಮುಖಂಡರಾದ ಅರ್ಜುನಪ್ಪ ಗುಳೇದ, ನಿಂಗಪ್ಪ ಅಸುಂಡಿ, ಸಹದೇವಪ್ಪ ಗುಳೇದ, ರಂಗಪ್ಪ ಜಾಲಗಾರ, ಪ್ರಧಾನಿ ಗುಂಡಪ್ಪನವರ, ಸಂತೋಷ ಅಸುಂಡಿ, ಧರ್ಮರಾಜ ಗುಳೇದ, ಕಿರಣ ಉಳ್ಳಿಗೇರಿ, ಮಂಜು ಸುಣಗಾರ, ವೆಂಕಟೇಶ ಬಾರಕೇರ, ಆನಂದ ಮಸಾಲಜಿ, ರಮೇಶ ಪೂಜಾರ, ಗಿರೀಶ ಹೆಬಸೂರ, ಪಾಪು ಅಂಬಿಗೇರ, ಉಮೇಶ ನಾಗರಹಳ್ಳಿ, ಪ್ರಕಾಶ ನಾಗರಹಳ್ಳಿ ಇತರರು ಇದ್ದರು.