ಶರಣರು ಹೇಳಿದ ವಿಚಾರಗಳು ಜೀವನದಲ್ಲಿ ಅಳವಡಿಸಿಕೊಂಡರೆ ಅದ್ಬುತ ಪರಿವರ್ತನೆ: ಡಾ. ಶಿವಾನಂದ ಮಹಾಸ್ವಾಮೀಜಿ

ಬಸವಕಲ್ಯಾಣ:ಅ.21: ಜೀವನದಲ್ಲಿ ಚಾಚು ತಪ್ಪದೇ ಶರಣರು ಹೇಳಿದ ವಿಚಾರಗಳು ಅಳವಡಿಸಿಕೊಂಡರೆ ಅದ್ಬುತ ಪರಿವರ್ತನೆಯಾಗುತ್ತದೆ. ಎಂದು ಹುಲಸೂರು ಗುರುಬಸವೇಶ್ವರ ಸಂಸ್ಥಾನದ ಪೂಜ್ಯ ಡಾ.ಶಿವಾನಂದ ಮಹಾಸ್ವಾಮೀಜಿ ಹೇಳಿದರು.
ನಗರದ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ, ನಾಡಹಬ್ಬ, ಹುತಾತ್ಮ ದಿನಾಚರಣೆ ಪ್ರಯುಕ್ತ ಜರುಗಿದ ಅಂಧಶ್ರದ್ಧೆ ನಿವಾರಣೆಗಾಗಿ ವಚನದ ನೆಲೆಗಳ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ಅವರು ದೇಶದ ಸಂಸ್ಕøತಿ ಅದ್ಬುತವಿದೆ. ಅದು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮೂಡನಂಬಿಕೆಗೆ ಬೆನ್ನು ಹತ್ತದೆ ವೈಜ್ಞಾನಿಕವಾಗಿ ಗಟ್ಟಿಯಾಗಿ ನಿಲ್ಲಬೇಕು ತಿಳಿಸಿದ ಅವರು ಇಂದಿನ ಸಮಾಜದಲ್ಲಿ ಜ್ಞಾನ ಹೆಚ್ಚಾದಂತೆ ಅನಿಷ್ಠ ಪದ್ಧತಿಗಳು ಹೆಚ್ಚಾಗುತ್ತಿವೆ. ನಮ್ಮ ಮನಸ್ಸು ಮೊದಲು ಪರಿವರ್ತನೆಯಾಗಬೇಕು ಎಂದು ಸಲಹೆ ನೀಡಿದರು.
ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನೇತೃತ್ವ ವಹಿಸಿ ಮಾತನಾಡಿ, ಅಂಧಶ್ರದ್ಧೆ ಎಂದರೆ, ಕುರಡು ನಂಬಿಕೆ. ಅಜ್ಞಾನದಿಂದ ಮಾಡುವ ಆಚರಣೆಗಳಿಂದ ಜೀವನ ನಾಶ ಮಾಡಿಕೊಳ್ಳದೆ ಮೌಢ್ಯತೆಯಿಂದ ಹೊರಬಂದು ಬಸವಾದಿ ಶರಣರು ನೀಡಿದ ವೈಚಾರಿಕತೆಯಿಂದ ಬದುಕಿ ಪರಿಪೂರ್ಣ ಜೀವನ ನಡೆಸಬೇಕು. ಈ ದೇಹ ದೇವರನೊಲಿಸ ಬಂದ ಪ್ರಸಾದ ಕಾಯ ಕೇಡಿಸಿಕೊಳ್ಳಬಾರದು ಕಲೆಗಳನ್ನು ಕಾಯಕವಾಗಿಸಿದ ಶರಣರು ಅಂಥ ಕಲೆಗಳನ್ನು ಈ ಶರಣ ಪರಂಪರೆಗೆ ತಂದು ಶರಣ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದು ವಿಚಾರ ವ್ಯಕ್ತಪಡಿಸಿದರು.
ಅಂತರ್ರಾಷ್ಟ್ರೀಯ ಪವಾಡ ಬಯಲು ತಜ್ಞ ಡಾ. ಹುಲಿಕಲ್ ನಟರಾಜ ಮುಖ್ಯ ಅನುಭಾವ ನೀಡಿ, ವೈಜ್ಞಾನಿಕತೆಯನ್ನು ಬಿತ್ತಬೇಕಾದ ಮಾಧ್ಯಮಗಳು ಮೂಢನಂಬಿಕೆಯನ್ನು ಬಿತ್ತುತ್ತಿವೆ. ಸಮಾಜದಲ್ಲಿ ಮನು ಧರ್ಮಕ್ಕಿಂತ ಮನೋಧವರ್i ಮುಖ್ಯ. ಮೋಸ ಮಾಡುವ ದೇವರು ದೇವರಲ್ಲ. ಇಂದಿನ ಸಮಾಜದಲ್ಲಿ ಜ್ಯೋತಿಷ್ಯದ ಹೆಸರಲ್ಲಿ ಹಾಗೂ ನಿಧಿ ಹುಡುಕುವ ನೆಪದಲ್ಲಿ ಜನರನ್ನು ವಂಚಿಸಲಾಗುತ್ತಿದೆ. ತೆಂಗಿನಲ್ಲಿ ಚಿನ್ನದ ಸರ, ಕೈಯಲ್ಲಿ ಬೆಂಕಿ ಹೇಗೆ ಬರುತ್ತದೆ. ಹಾಲು ಹೇಗೆ ಉಕ್ಕುತ್ತವೆ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿ ಇವುಗಳ ಬಗ್ಗೆ ಅರಿವು ಇರಲಿ. ನಮ್ಮ ಮಕ್ಕಳು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಯೋಜಿಸಿದಾಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಬಸವತತ್ತ್ವ ಅಳವಡಿಸಿಕೊಳ್ಳಬೇಕು ಇಂದಿನ ಸಮಾಜದಲ್ಲಿ ವಿದ್ಯಾವಂತಿಕೆ ಬುದ್ಧಿವಂತಿಕೆಗಿಂತ ಪ್ರಜ್ಞಾವಂತಿಕೆ ಬಹಳ ಮುಖ್ಯ ಎಂದು ತಿಳಿಸಿದರು.
ಬಿಡಿಪಿಸಿ ನಿರ್ದೇಶಕ ಸುಭಾಷ ಹೊಳಕುಂದೆ ಅಧ್ಯಕ್ಷತೆ ವಹಿಸಿದರು. ವೇದಿಕೆಯ ಮೇಲೆ ರಾಜಾಬಾಗ ಸವಾರ ದರ್ಗದ ಮುಖ್ಯಸ್ಥ ಖಾಜಾ ಜಿಯಾಉಲ್ ಹಸನ್ ಜಾಗಿರದಾರ, ಬಿಡಿಪಿಸಿ ನಿರ್ದೇಶಕ ಅಶೋಕ ನಾಗರಾಳೆ, ಪ್ರದೀಪ ವಾತಾಡೆ, ತಹಸೀನ ಅಲಿ ಜಮಾದಾರ, ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ, ಕಂಟೆಪ್ಪಾ ದಾನಾ, ಚನ್ನಬಸವಪ್ಪ ವಡ್ಡನಕೇರೆ, ಮಡಿವಾಳಯ್ಯಾ ಸ್ವಾಮಿ, ಜಗನ್ನಾಥ ಶಾಶೆಟ್ಟಿ, ವಿಜಯಲಕ್ಷ್ಮಿ ಪಾಟೀಲ, ವಿದ್ಯಾವತಿ ಬಿರಾದಾರ, ಪ್ರವೀಣ ಮಲಶೆಟ್ಟಿ ಉಪಸ್ಥಿತರಿದ್ದರು. ರವೀಂದ್ರ ಕೊಳಕೂರ ಸ್ವಾಗತ, ನಿರೂಪಣೆ ಮಹೇಶ ಸುಂಟನೂರೆ ನಿಭಾಯಿಸಿದರು.