
ದಾವಣಗೆರೆ.ಮಾ.೧೮; ಕದಳಿ ಮಹಿಳಾ ವೇದಿಕೆಯ ತಾಲೂಕು ಘಟಕದಿಂದ ದತ್ತಿ ಉಪನ್ಯಾಸ ಮತ್ತು ಮಹಿಳಾ ದಿನಾಚರಣೆ ಆಚರಿಸಲಾಯಿತು. ಸಂತೆಬೆನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಕಾಲೇಜಿನ ಪ್ರಾಂಶುಪಾಲರಾದ ಎಚ್. ಗಿರಿಸ್ವಾಮಿ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಕದಳಿ ಮಹಿಳಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ವಿನೋದ ಅಜಗಣ್ಣನವರು ವಹಿಸಿಕೊಂಡಿದ್ದರು. ಲಿಂಗೈಕ್ಯ ಶರಣ ಷಡಾಕ್ಷರಪ್ಪ, ಶರಣೆ ಅಂಜಿನಮ್ಮ ಬಿ.ಕಲ್ಪನಹಳ್ಳಿ ದತ್ತಿ, ದತ್ತಿ ದಾನಿಗಳು ಶರಣ ಆದರ್ಶ್ ಎಮ್ ಎನ್ ಹಾಗೂ ಮಮತಾ ನಾಗರಾಜ್ ಇವರ ದತ್ತಿ ಕಾರ್ಯಕ್ರಮವನ್ನು ನಡೆಸಲಾಯಿತು.ಕನ್ನಡ ಉಪನ್ಯಾಸಕರಾದ ಶರಣೆ ಗಾಯತ್ರಮ್ಮಜೆ.ಸಿ ಉಪನ್ಯಾಸ ನೀಡಿದರು. ಆದ್ಯ ವಚನಕಾರ ಜೇಡರ ದಾಸಿಮಯ್ಯನವರನ್ನು ಕುರಿತು ಉಪನ್ಯಾಸ ನೀಡಿದರು. ಬಸವಾದಿ ಶರಣರಿಗೆ ಮೊದಲೇ 11ನೇ ಶತಮಾನದಲ್ಲಿ ಶರಣ ದಾಸಿಮಯ್ಯ ನವರು ಕಾಯಕಕ್ಕೆ, ಮಹಿಳೆಯರಿಗೆ ನೀಡಿದ ಮಹತ್ವ, ಸ್ವಾತಂತ್ರ್ಯವನ್ನು ಎಲ್ಲರೂ ಮನಮುಟ್ಟುವಂತೆ ವಿವರಿಸಿದರು.ಶರಣೆ ವಿನೋದ ಮಾತನಾಡಿ 12ನೇ ಶತಮಾನದಲ್ಲಿ ಶರಣರು ಸ್ತ್ರೀಯರಿಗೆ ನೀಡುತ್ತಿದ್ದ ಸಮಾನತೆ ಮತ್ತು ಗೌರವವನ್ನು ಈಗಿನ ಸಮಾಜದಲ್ಲಿ ಕಾಣಲು ಸಾಧ್ಯವಿಲ್ಲ ಎಂದು ತಿಳಿಸಿ ಇತ್ತೀಚೆಗೆ ಹೆಣ್ಣಿನ ಶೋಷಣೆಯು ಅವ್ಯಾಹತವಾಗಿ ನಡೆಯುತ್ತಿದ್ದರು ಸಮಾಜವು ಕಣ್ಣಿದ್ದು ಕುರುಡಾಗಿದೆ ಎಂದು ತಿಳಿಸಿದರು.ದತ್ತಿ ದಾನಿಗಳಾದ ಶರಣೆ ಮಮತಾ ನಾಗರಾಜ್ ರವರು ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಬಗ್ಗೆ ತಮ್ಮಲ್ಲಿ ತಾವು ಅಳವಡಿಸಿಕೊಳ್ಳಬೇಕಾದ ನೀತಿ ಮಾರ್ಗಗಳನ್ನು ತಿಳಿಸಿದರು.ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಹೆಚ್. ಗಿರಿ ಸ್ವಾಮಿಯವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಶರಣರ ಬಗ್ಗೆ ವಿದ್ಯಾರ್ಥಿಗಳು ಇನ್ನು ಹೆಚ್ಚು ಅರಿತುಕೊಂಡು ಸನ್ಮಾರ್ಗದಲ್ಲಿ ನಡೆಯುವಂತೆ ಸೂಚಿಸಿದರು. ಶರಣರ ಪಥ ಸರ್ವಕಾಲಕ್ಕೂ ಅನ್ವಯವಾಗುತ್ತದೆ ಎಂಬುದನ್ನು ವಿವರಿಸಿದರು.ಕಾರ್ಯಕ್ರಮಕ್ಕೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶರಣ ಶಂಕರ್ ನಾಯ್ಕ ಸ್ವಾಗತ ಕೋರಿದರು.ಕದಳಿ ಮಹಿಳಾ ವೇದಿಕೆಯ ಶರಣೆ ವಸಂತ ಕೆ.ಆರ್. ದತ್ತಿ ಮತ್ತು ದಾನಿಗಳನ್ನು ಪರಿಚಯಿಸಿದರು. ವೇದಿಕೆಯ ಚಂದ್ರಿಕಾ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು, ವಾಣಿ ರಾಜ್ ವಂದನಾರ್ಪಣೆ ಮಾಡಿದರು.ಶರಣೆ ಲಕ್ಷ್ಮಿ ಮಲ್ಲಿಕಾರ್ಜುನ್ ಕಾಲೇಜಿನ ಮೃತ್ಯುಂಜಯ ಹಿರೇಮಠ,ಡಾ.ರಾಜಶೇಖರ್ , ಹನುಮಂತಪ್ಪ ಹಾಗು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.