ಶರಣರು ಸರಳ ಭಾಷೆಯಲ್ಲಿ ವಚನಗಳ ಮೂಲಕ ಸಾಹಿತ್ಯ ಜನರಿಗೆ ಉಣಬಡಿಸಿದ್ದಾರೆ:ಹಾಸಿಂಪೀರ

ವಿಜಯಪುರ: ಜೂ.10:ಶರಣರು ವಚನಗಳ ಮೂಲಕ ಸಾಮಾಜಿಕ ಕ್ರಾಂತಿಗೆ ಶ್ರಮಿಸುವ ಜತೆಗೆ ಸರಳ ಭಾಷೆಯಲ್ಲಿ ಜನರಿಗೆ ಸಾಹಿತ್ಯವನ್ನು ಉಣಬಡಿಸಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದರು.
ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಗ್ರಾಮದ ವಿವಿಧ ಸಂಘಟನೆ ಆಶ್ರಯದಲ್ಲಿ ನಡೆದ ವಚನಗಳ ಜಾಗೃತಿ ಸಮಾರಂಭ ಹಾಗೂ ನಿವೃತ್ತಗೊಂಡಿದ್ದ ಶಿಕ್ಷಕಿ ಶಿವುಬಾಯಿ ಇಮ್ಮನದ ಅವರಿಗೆ ಸನ್ಮಾನ ಸಮಾರಂಭನ್ನು ಉದ್ಘಾಟಿಸಿ ಮಾತನಾಡಿದರು.
ಎನಗಿಂತ ಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲ. ಹೊಗಳಿ ನನ್ನ ಹೊನ್ನ ಶೂಲಕ್ಕೇರಿಸಬೇಡಿ, ಕಾಯಕವೇ ಕೈಲಾಸ ಸೇರಿದಂತೆ ನಮ್ಮನ್ನು ಆತ್ಮಾವಲೋಕನಕ್ಕೆ ಒಳಪಡಿಸಿಕೊಳ್ಳಬೇಕಾದಂತಹ ಸಂದೇಶಗಳನ್ನು ವಿಶ್ವಗುರು ಬಸವಣ್ಣ ವಚನಗಳ ಮೂಲಕ ಸಮಾಜಕ್ಕೆ ನೀಡಿದ್ದಾರೆ ಎಂದರು.
ಇಂದಿನ ಯುವಕರು ಬುದ್ಧ, ಬಸವಣ್ಣ, ಅಂಬೇಡ್ಕರಂತಹ ಮಹಾನ ನಾಯಕರು ಆದರ್ಶ ಜೀವನಲ್ಲಿ ಅಳವಡಿಸಿಕೊಂಡಿದಾಗ ಮಾತ್ರ, ಸಮಾಜಕ್ಕೆ ಆದರ್ಶಯಾಗಬುಹುದು ಎಂದು ಹೇಳಿದರು.
ರಾಜೇಸಾಬ ಶಿವನಗುತ್ತಿ ಮಾತನಾಡಿ, ಮಕ್ಕಳಿಗೆ ವಿದ್ಯೆ ಕಲಿಸಿ, ಅವರು ಜವಾಬ್ದಾರಿ ನಾಗರಿಕರಾಗುವುದಕ್ಕೆ ಮಾರ್ಗದರ್ಶನ ಮಾಡುವ ಶಿಕ್ಷಕರು ಸಮಾಜದಲ್ಲಿ ಉನ್ನತ ಸ್ಥಾನವನ್ನು ಹೊಂದಿದ್ದಾರೆ. ಶಾಲೆಗೆ ಹೋಗಲು ಆರಂಭಿಸಿದ್ದಾಗ ಮಕ್ಕಳು ಮಣ್ಣಿನ ಮುದ್ದೆಯಂತಿರುತ್ತವೆ. ಕಲ್ಲನ್ನು ಕಟೆದು ಅದಕ್ಕೆ ಮೂರ್ತಿಯ ರೂಪವನ್ನು ಕೊಡುವ ಶಿಲ್ಪಿಯಂತೆ, ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಕೂಡ ಮಕ್ಕಳಿಗೆ ಆರಂಭಿಕ ಶಿಕ್ಷಣ ವನ್ನು ನೀಡುವ ಮೂಲಕ ಅವುಗಳು ಮುಂದೆ ಉನ್ನತ ಶಿಕ್ಷಣ ಪಡೆಯಲು ಬುನಾದಿ ಹಾಕುವ ಕೆಲಸವನ್ನು ಮಾಡುತ್ತಾರೆ ಎಂದರು.
ಸನ್ಮಾನ ಸ್ವೀಕರಿಸಿದ್ದ ನಿವೃತ್ತ ಶಿಕ್ಷಕಿ ಶಿವುಬಾಯಿ ಇಮ್ಮನದ ಮಾತನಾಡಿ, ನಾನು ಕೆಲಸ ಮಾಡಿದ ಶಾಲೆಯ ಬಗ್ಗೆ ನನಗೆ ಹೆಮ್ಮೆ ಇದೆ. ಕೌಟುಂಬಿಕ ಕೆಲಸ ಕ್ಕಿಂತ ಶಾಲೆಯ ಕೆಲಸ ಹಾಗೂ ಮಕ್ಕಳಿಗೆ ಪಾಠ ಮಾಡುವುದಕ್ಕೆ ನಾನು ಹೆಚ್ಚಿನ ಮಹತ್ವ ನೀಡಿದ್ದೇನೆ. ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿರುವ ಸಂತೃಪ್ತಿ ನನಗಿದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಖಾಜಾಮೈನುದ್ದೀನ್ ಪಟೇಲ್, ಗ್ರಾಮದ ಗಂಗಾಪ್ಪ ಕಾಂಬಳೆ, ಹಿರಿಯ ರುಕ್ಮುದಿನ್ ಮುಜಾವಾರ, ರಮೇಶ ಚಲವಾದಿ, ಯಮನಪ್ಪ ಹರಿಜನ, ವಿಜಯಕುಮಾರ ಮಾಳಿ, ಮಕ್ಕಬುಲ್ ಕೇಜಿ, ಪ್ರಕಾಶ ಚಲವಾದಿ, ದೇವಿಂದ್ರ ಬಿದರಿಕರ, ಚಂದಪ್ಪ ಹರಿಜನ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.