ಶರಣರು ಸಮಾನತೆಗೆ ಸರಳ ಸೂತ್ರ ರೂಪಿಸಿದವರು:ಡಾ.ಪರುತೆ

ಕಲಬುರಗಿ:ಎ.4:ಜಾತಿಯ ಜಂಜಾಟವು ಜನರಲ್ಲಿ ಬೇರ್ಪಡಿಸಿ ಎಲ್ಲರಿಗೂ ಸಿಗಬೇಕಾದ ಮೋಕ್ಷ ಮಾರ್ಗ ಕೆಲವರ ಸ್ವತ್ತಾದಾಗ ವಿರೋಧದ ಕಹಳೆ ಮೊಳಗಿಸಿದವರು ಬಸವಾದಿ ಶರಣರು ಎಂದು ವೀರಮ್ಮ ಗಂಗಸಿರಿ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಸಾಹಿತಿ ಡಾ. ವಿಜಯಕುಮಾರ ಪರುತೆ ಹೇಳಿದರು.
ಕಲಬುರಗಿ ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ 152ನೇ ಶಿವಾನುಭವ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಎಷ್ಟು ಗುಡಿಸಿದರೂ ಮತ್ತೆ ಮನೆಯಲ್ಲಿ ಕಸ ತುಂಬಿಕೊಳ್ಳುವಂತೆ ದೇಶದಲ್ಲಿ ನಾನಾ ಜಾತಿ ಮತಗಳ ಕಲಹದ ಸ್ವರ ತಾರಕಕ್ಕೇರಿದಾಗ ಆದರ ಶಮನಕ್ಕಾಗಿ ಸರ್ವ ಸಮಾನತೆಯ, ಸರಳ ಸೂತ್ರದ ಆಧಾರದ ಮೇಲೆ ಸಮಾಜದ ರಥವನ್ನು ಸರಿಯಾದ ರೀತಿಯಲ್ಲಿ ನಡೆಸಲು ಶರಣರು ಸಾರಥ್ಯ ವಹಿಸಿ ಸಮ ಸಮಾಜ ನಿರ್ಮಾಣ ಮಾಡಿದರು. ಅವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ, ಶರಣರ ವಚನಗಳು ಬಹಳ ಸರಳವಾಗಿದ್ದು ಅವುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಸಮಾಜ ನಿರ್ಮಿಸಲು ಪ್ರಯತ್ನ ಮಾಡಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ, ಸಂಗಮೇಶ ನಾಗೂರ, ಮಾಣಿಕ ಮಿರಕಲ್ಲ, ಡಾ. ಶರಣಬಸಪ್ಪ ವಡ್ಡಣಕೇರಿ, ಮಹಾದೇವ ಅಟ್ಟೂರ, ಗುರುರಾಜ ಹಸರಗುಂಡಗಿ, ಶಿವಕುಮಾರ ಸಾವಳಗಿ, ಕವಿತಾ ದೇಗಾಂವ, ಶಿವರಾಜ ಭಾಲ್ಕೇಡ, ವೀರಯ್ಯ ಮಠಪತಿ, ಶರಣು ವರನಾಳ, ಸಿದ್ದಣ್ಣ ವಾಡಿ, ಶಾಂತು ಕಲಬುರ್ಗಿ, ಡಾ. ಶಿವಶರಣಪ್ಪ ಮಾಲಿ ಪಾಟೀಲ, ಸಿಂಚನಾ ದೇಗಾಂವ, ಸುಮಿತ್ರಾ ಗುತ್ತೆದಾರ, ಮಲ್ಲಯ್ಯ ಗುತ್ತೇದಾರ ಸೇರಿದಂತೆ ಹಲವಾರು ಜನ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕೋಶಾಧ್ಯಕ್ಷರಾದ ಶ್ರೀ ಶರಣರಾಜ ಛಪ್ಪರ ಬಂದಿ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು.