ಕಲಬುರಗಿ:ಎ.5: ನೈತಿಕತೆಗೆ ಸರಿ ಮತ್ತು ತಪ್ಪುಗಳ ನಡುವಿನ ವ್ಯಾತ್ಯಾವನ್ನು ತೋರಿಸುವ ಸಾಮಥ್ರ್ಯವಿದೆ. ಇವುಗಳು ಸಮಾಜದ ನಡವಳಿಕೆಯ ನೀತಿ ಸಂಹಿತೆಗಳನ್ನು ಅಭಿವೃದ್ಧಿಪಡಿಸಬಲ್ಲವು. ಇಂತಹ ಸತ್ಯ, ನ್ಯಾಯ ನೀತಿಯುಕ್ತ ವಿಚಾರಗಳನ್ನು ಶರಣರು ಸಮಾಜದಲ್ಲಿ ಬಿತ್ತಿದರು ಎಂದು ರಾಯಚೂರಿನ ಡಾ. ಸರ್ವಮಂಗಳಾ ಸಕ್ರಿ ತಿಳಿಸಿರು.
ಬಸವ ಸಮಿತಿ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಆಶ್ರಯದಲ್ಲಿ ಜಯನಗರದ ಅನುಭವ ಮಂಟಪದಲ್ಲಿ ಲಿಂ. ವೀರಪ್ಪ ಗುರುಪಾದಪ್ಪ ಅನಂತಪುರ ಹಾಗೂ ದಾನಮ್ಮ ವೀರಪ್ಪ ಅನಂತಪುರ ಸ್ಮರಣಾರ್ಥ ಹಮ್ಮಿಕೊಂಡಿದ್ದ 748ನೇ ಅರಿವಿನ ಮನೆ ಕಾರ್ಯಕ್ರಮದಲ್ಲಿ ನೈತಿಕತೆ ಬಿತ್ತಿದ ಶರಣರು ವಿಷಯ ಕುರಿತು ಮಾತನಾಡಿದರು.
ಅದ್ಯಾತ್ಮದ ಪಯಣ ಬಹಳಷ್ಟು ನಿಗೂಢವಾಗಿದ್ದು, ಇದರಲ್ಲಿ ಧರ್ಮ, ನೈತಿಕಮೌಲ್ಯ ಇತ್ಯಾದಿಗಳು ಅವಶ್ಯವಿದ್ದು, ಮನುಷ್ಯ ಧರ್ಮದ ಅವಲೋಕನವೇ ಇಲ್ಲಿ ನಡೆಯುತ್ತದೆ. ಸದಾಚರ, ಸದ್ಗುಣಗಳನ್ನು ಎತ್ತಿ ತೋರಿಸಿದ ಶರಣರು, ಕಂದಾಚಾರ, ಮೂಢನಂಬಿಕೆ, ಅನ್ಯಾಯ, ದೌರ್ಜನ್ಯಗಳನ್ನು ನೇರವಾಗಿ ಖಂಡಿಸಿದರು ಎಂದು ತಿಳಿಸಿದರು.
ಬಸವ ಸಮಿತಿ ಜಿಲ್ಲಾಧ್ಯಕ್ಷೆ ಡಾ. ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾಸೋಹಿಗಳಾದ ಸಿದ್ದೇಶ್ವರ, ಜ್ಯೋತಿ ಅನಂತಪುರ ವೇದಿಕೆಯಲ್ಲಿದ್ದರು. ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ದಂಡೆ, ಬಸವ ಸಮಿತಿ ಉಪಾಧ್ಯಕ್ಷೆ ಡಾ. ಜಯಶ್ರೀ ದಂಡೆ, ಡಾ. ಕೆ.ಎಸ್. ವಾಲಿ ಇತರರಿದ್ದರು. ಎಚ್.ಕೆ. ಉದ್ದಂಡಯ್ಯ ನಿರೂಪಿಸಿ ವಂದಿಸಿದರು.
ನುಡಿದರೆ ಮುತ್ತಿನ ಹಾರÀದಂತಿರಬೇಕು, ಏನು ಬಂದಿರಿ ಹದುಳವಿದ್ದಿರೆ?, ಮತ್ರ್ಯಲೋಕವೆಂಬುದು ಕರ್ತಾರನ ಕಮ್ಮಟ ಮುಂತಾದ ಹಲವಾರು ವಚನಗಳಲ್ಲಿ ನೈತಿಕತೆ ತುಂಬಿ ತುಳುಕಾಡುತ್ತಿದ್ದು, ಶರಣರು ನೈತಿಕತೆಯ ತಳಹದಿಯ ಮೇಲೆಯೇ ಸಮಾಜ