ಶರಣರು, ಸಂತರ ತತ್ವಾದರ್ಶ ಪಾಲಿಸಿ : ಶಾಸಕ ಪರಣ್ಣ ಮುನವಳ್ಳಿ

ಗಂಗಾವತಿ ಮಾ. 27: ನಗರದ ಹಿರೇಜಂತಕಲ್‍ನಲ್ಲಿ ಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಗದ್ಗುರು ರೇಣಕಾ ಚಾರ್ಯರ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು.
ಜಯಂತಿ ನಿಮಿತ್ತ ಶ್ರೀ ಮುಡ್ಡಾಣೇಶ್ವರ ದೇವಸ್ಥಾನದಲ್ಲಿ ರೇಣುಕಾ ಚಾರ್ಯರ ಮೂರ್ತಿಗೆ ಬೆಳಗ್ಗೆ ರುದ್ರಾಭಿಷೇಕ, ಅಲಂಕಾರ, ಮಹಾಮಂಗಳಾರತಿ, ವಿಶೇಷ ಧಾರ್ಮಿಕ ಪೂಜಾ
ಕಾರ್ಯಕ್ರಮ ನಡೆದವು.
ನಂತರ ಶ್ರೀ ಮುಡ್ಡಾಣೇಶ್ವರ ದೇವಸ್ಥಾನದಿಂದ ವೀರಭದ್ರೇಶ್ವರ ದೇವಸ್ಥಾನದವರೆಗೆ ಕಳಶ, ಕುಂಭಗಳೊಂದಿಗೆ ಅದ್ದೂರಿ ಮೆರವಣಿಗೆ ಜರುಗಿತು.
ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ನಮ್ಮ ನಾಡಿನ ಸಾಕಷ್ಟು ಶರಣರು, ಸಂತರು ಸಮಾಜಕ್ಕೆ ಅವರದೇ ಆದಾ ಕೊಡುಗೆ ನೀಡಿದ್ದಾರೆ. ಜೊತೆಗೆ ಧರ್ಮ ರಕ್ಷಣೆಗಾಗಿ ತಮ್ಮ ವಚನಗಳ ಮೂಲಕ ಸಂದೇಶಗಳನ್ನು ಸಾರಿದ್ದಾರೆ. ಅಂತಹ ಮಾಹನ್ ವ್ಯಕ್ತಿಗಳ ಸಂದೇಶ, ತತ್ವ, ಸಿದ್ದಾಂತಗಳನ್ನು ನಾವೆಲ್ಲರೂ ಅನುಸರಿಸಿ, ಸಮಾಜದ ಸೇವೆಗೆ ಮುಂದಾಗಬೇಕು ಎಂದರು.
ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಮಾತನಾಡಿ, ಜಂಗಮ ಸ್ಥಾನ ದೊಡ್ಡದು, ಸಮುದಾಯದವರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ, ಜಿ.ಪಂ. ಮಾಜಿ ಸದಸ್ಯ ಸಿದ್ರಮಯ್ಯಸ್ವಾಮಿ, ರಾಘವೇಂದ್ರ ಶ್ರೇಷ್ಠಿ,
ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ, ಮುಖಂಡರಾದ ಬಸವರಾಜಸ್ವಾಮಿ ಮಳಿಮಠ , ಸಂಗಮೇಶ, ವಿಶ್ವನಾಥ, ಬಸಯ್ಯಸ್ವಾಮಿ, ಶಿವಯ್ಯಸ್ವಾಮಿ, ಶಂಕರಯ್ಯಸ್ವಾಮಿ, ಹೆಚ್.ಎಮ್.ಮಂಜುನಾಥ, ಶರಣಯ್ಯಸ್ವಾಮಿ, ಸಂಗಮೇಶ ಸೊಪ್ಪಿನಮಠ ಹಾಗೂ ಸಂಗಯ್ಯಸ್ವಾಮಿ ಇದ್ದರು.