ಶರಣರು ಬಡವರ ಪಾಲಿಗೆ ಕಲ್ಪವೃಕ್ಷವಾಗಿದ್ದರು:ಮಸೂತಿಶ್ರೀ

ತಾಳಿಕೋಟೆ:ಮಾ.27: ಹಿಂದಿನ ಕಾಲದ ಭಕ್ತರ ಭಕ್ತಿಗೆ ಮೆಚ್ಚಿ ಅವರ ಭಕ್ತಿಗೆ ಅವರ ಬೇಕು ಬೇಡಿಕೆಗಳಿಗೆ ಸ್ಪಂದಿಸಿ ಅವರನ್ನು ಸನ್ಮಾರ್ಗದೆಡೆಗೆ ಒಯುವಂತಹ ಕಾರ್ಯಕ್ಕೆ ಮುಂದಾಗಿದ್ದ ಹಿಂದಿನ ಕಾಲದ ಶರಣರು ಭಕ್ತರಿಗೆ ಕಲ್ಪವೃಕ್ಷದಂತೆ ಅವರು ಕಾರ್ಯ ನಿರ್ವಹಿಸುತ್ತಿದ್ದರೆಂದು ಖ್ಯಾತ ಪುರಾಣ ಪ್ರವಚನಕಾರರಾದ ಮಸೂತಿಯ ಪೂಜ್ಯ ಶ್ರೀ ಡಾ.ಶಿವಲಿಂಗಯ್ಯ ಶರಣರು ನುಡಿದರು.
ಸಾಂಭ ಪ್ರಭು ಶರಣ ಮುತ್ಯಾರವರ ಜರುಗಲಿರುವ ಜಾತ್ರೋತ್ಸವ ಕುರಿತು ಮಂಗಳವಾರರಂದು 16ನೇ ದಿನದಂದು ಜರುಗಿದ ಸುಕ್ಷೇತ್ರ ಅಂಕಲಿಯ ಶ್ರೀ ಗುರು ನಿರೂಪಾದೀಶ್ವರರ ಮಹಾ ಪುರಾಣ ಪ್ರವಚನದಲ್ಲಿ ಮಾತನಾಡುತ್ತಿದ್ದ ಅವರು ಇಂದಿನ ಕಾಲದಲ್ಲಿ ಹೊಲಗಳಿಗೆ ನೀರುಣಿಸುವ ಕಾರ್ಯಕ್ಕೆ ಮೊಟ್ಟಿ ಹೊಡೆಯಲಾಗುತ್ತಿತ್ತು ಒಮ್ಮಿ ನಿರುಪಾದೀಶ್ವರರು ರಸ್ತೆಗುಂಟಾ ತೆರಳುತ್ತಿರುವಾಗ ಮಟ್ಟಿ ಹೊಡೆಯುತ್ತಿದ್ದ ರೈತನು ನೋಡಿ ಕೂಡಲೇ ತನ್ನ ಕಾರ್ಯವನ್ನು ನಿಲ್ಲಿಸಿ ನಿರುಪಾದೀಶ್ವರರ ಬಳಿಗೆ ಹೋಗಿ ಗುರುಗಳೇ ನೀವು ಮನೆಗೆ ಬಂದು ಪ್ರಸಾದ ಮಾಡಬೇಕೆಂದು ಕೇಳಿದ ಆ ರೈತನ ಹೆಂಡತಿ ಪತಿಯೊಂದಿಗೆ ಸ್ವಲ್ಪು ಜಗಳ ಮಾಡಿದ್ದರಿಂದ ಆಕೆ ಕುಪಿತಗೊಂಡು ತಮ್ಮ ಮನೆಗೆ ರೈತ ಶ್ರೀಗಳನ್ನು ಅಹ್ವಾನಿಸಿ ಅವರಿಗೆ ಸ್ನಾನ ಮಾಡಿಸಿ ಪ್ರಸಾದ ವ್ಯವಸ್ಥೆ ಮಾಡಿದ ಇದನ್ನು ನೋಡಿ ಕುಪಿತಕೊಂಡ ರೈತನ ಪತ್ನಿ ಮನದಲ್ಲಿಯೇ ನೊಂದುಕೊಂಡಿದ್ದರಿಂದ ಮನೆಯಲ್ಲಿದ್ದ ಒಂದು ಹೋರಿ ವಿಲಿ ವಿಲಿ ಒದ್ದಾಡಿ ಸತ್ತು ಬಿಟ್ಟಿತ್ತಂತೆ ಇದನ್ನು ಲಕ್ಷೀಸಿದ ಆ ಮಹಿಳೆ ಪತಿಗೆ ಹೇಳಿ ನೀನು ಶ್ರೀಗಳನ್ನು ಕರೆದುಕೊಂಡು ಬಂದಿದ್ದೀರಿ ಅವರು ಮನೆಯಲ್ಲಿ ಪ್ರವೇಶವಾಗಿದ್ದರಿಂದ ನಮ್ಮ ಮನೆಯಲ್ಲಿಯ ಹೋರಿ ಸತ್ತು ಹೋಯಿತು ಕಾರಣ ಆ ಸತ್ತ ಹೋರಿಯನ್ನು ಶ್ರೀಗಳಿಗೆ ಕೊಟ್ಟು ಬಿಡಿ ಎಂದಳಂತೆ ಇದನ್ನು ಕೇಳಿದ ನಿರುಪಾದೀಶ್ವರರು ಹೋರಿಗೆ ಏನಾಗಿದೆ ಎಂದು ತಮ್ಮ ಕೈಯಲ್ಲಿದ್ದ ಬೆತ್ತವನ್ನು ಆ ಸತ್ತ ಹೋರಿ ಡುಬ್ಬದ ಮೇಲೆ ಸವರಿದಾಗ ಸತ್ತ ಹೋರಿ ಎದ್ದು ನಿಂತಿತಂತೆ ಶ್ರೀಗಳ ಪವಾಡ ನೋಡಿ ಬೆರಗಾದ ಈ ರೈತ ಕುಟುಂಭ ಸತಿ ಪತಿ ಒಳಗೊಂಡು ಶ್ರೀಗಳಿಗೆ ದಕ್ಷೀಣೆ ನೀಡಿ ನಮಿಸಿ ಕ್ಷಮೆಯಾಚಿಸಿದರೆಂದು ಶ್ರೀಗಳು ನುಡಿದರು.
ಆಕಳ ಹೊಟ್ಟೆಯಲ್ಲಿ ಹುಲ್ಲು ಹೋದಾಗ ಅದು ರಕ್ತವಾಗುತ್ತದೆ ಅದು ಶಗಣಿ ಹಾಕುತ್ತದೆ ಆಕಳು ಎಂಬುದಕ್ಕೆ ಗೋ ಮಾತೆ ಎಂದು ಹೇಳಲಾಗುತ್ತದೆ ಈ ಗೋಮಾತೆಗೆ ಪೂಜೆ ಮಾಡುತ್ತಾರಲ್ಲದೇ ಅದು ಹಾಕಿದ ಶಗಣಿಯಿಂದ ವಿಭೂತಿಯನ್ನು ತಯಾರಿಸಿ ಭಕ್ತರು ಹಚ್ಚಿಕೊಳ್ಳುವದರಿಂದ ಜ್ಞಾನವೆಂಬುದು ಪಕ್ವವಾಗುತ್ತದೆ ದೇವರ ಒಲುಮೆಯೂ ಕೂಡಾ ಆಗುತ್ತದೆ ಎಂದು ಶ್ರೀಗಳು ನುಡಿದರು.
ನವಲಗುಂದ ನಾಗಲಿಂಗ ಶ್ರೀಗಳ ಕುರಿತು ಅವರ ಲೀಲೆ ಕುರಿತು ವಿವರಿಸಿದ ಶ್ರೀಗಳು ಒಮ್ಮೆ ನಾಗಲಿಂಗ ಹಾಗೂ ನಿರುಪಾದೀಶ್ವರರು ಹೊರಟಾಗ 6 ಹಾವುಗಳು ಹಾಗೂ 1 ಮುಂಗಲಿ ಜಗಳ ನಡೆದಿತಂತೆ ಈ ಎಲ್ಲ ಜಗಳವನ್ನು ನೋಡುತ್ತ ನಿಂತ ನಾಗಲಿಂಗರು ಹಾಗೂ ನಿರುಪಾದೀಶ್ವರರು ಮುಂಗಲಿ 6 ಹಾವುಗಳಲ್ಲಿ ಒಂದೊಂದರಂತೆ 5 ಹಾವುಗಳನ್ನು ಕಚ್ಚಿ ಹಾಕಿತಂತೆ ಆದರೆ ಇನ್ನೊಂದು ಹಾವು ಉಳಿಯಿತಲ್ಲಾ ಎಂದು ಮುಂಗಲಿ ದೀಡಿರನೆ ಓಡಿ ಹೋದಾಗ ನಿರುಪಾದೀಶ್ವರರಿಗೆ ನಾಗಲಿಂಗರು ಕೇಳುತ್ತಾರೆ ಮುಂಗಲಿ ಅಂಜಿ ಹೊಯಿತಲ್ಲಾ ಎಂದಾಗ ನಿರುಪಾದೀಶ್ವರರು ಹೇಳಿದ ಮಾತು ಹಾವಿನ ವಿಷ ಏರದಂತೆ ಅದು ಆ ತಪ್ಪಲ್ಲನ್ನು ಗಿಡದ ಬೇರನ್ನು ಹುಡುಕಿ ಇಟ್ಟಿರುತ್ತದೆ ಅದನ್ನು ತಿನ್ನಲು ಓಡಿ ಹೋಗಿದೆ ಮತ್ತೇ ಮರಳಿ ಬರುತ್ತದೆ ಎಂದಾಗ ಸ್ವಲ್ಪ ಸಮಯದಲ್ಲಿ ಮುಂಗಲಿ ಮರಳಿ ಓಡಿ ಬಂದು ಉಳಿದ ಆ ನಾಗರ ಹಾವಿನ ಜೊತೆ ಜಗಳ ಪ್ರಾರಂಬಿಸಿ ಅದನ್ನು ಕಚ್ಚಿ ಹಾಕಿ ಹೋಯಿತ್ತೆಂದು ಕಥೆಯೊಂದನ್ನು ಹೇಳಿದ ಶ್ರೀಗಳು ಕಾಮ, ಕ್ರೋದ, ಲೋಬ, ಮದ ಮತ್ಸರ ಜೀವಾತ್ಮ ಎಂಬ ಮುಂಗಲಿಯನ್ನು ತಿಂದು ಸಾಯಿಹೊಡೆಯಬೇಕೆನ್ನುವಂತಹದ್ದು ಇವುಗಳಿಂದ ದೂರವಿರಲು ಮುಂಗಲಿಯಂತೆ ನಾವು ಕೂಡಾ ಈ ಅಡಷಡ್ ವರ್ಗಗಳನ್ನು ತೊರೆಯಲು ಮುಂದಾಗಬೇಕೆಂದರು.
1942ರಲ್ಲಿ ಮಹಾತ್ಮ ಗಾಂಧಿಜಿಯವರ ಭಾಷಣ ಕೇಳಲು ಓರ್ವ ಶ್ರೀಮಂತ ಮಹಿಳೆ ಮೈತುಂಬಾ ಚಿನ್ನದ ಒಡವೆಗಳನ್ನು ಹಾಕಿಕೊಂಡು ಭಾಷಣ ಕೇಳುತ್ತಿದ್ದಾಗ ಮಹಾತ್ಮ ಗಾಂಧಿಜಿ ಅವರ ಭಾಷಣ ಮನದಟ್ಟನೆಯಾಗಿ ಭಾಷಣದಿಂದ ಪರಿವರ್ತನೆಗೊಂಡ ಆಕೆ ಕೊರಳಲ್ಲಿಯ ಎಲ್ಲ ಸಾಮಾನುಗಳನ್ನು ತೆಗೆದು ಮಗ್ಗಲು ಕುಳಿತ ಆ ಮನುಷ್ಯನ ಉಡೆಯಲ್ಲಿ ಹಾಕಿದಳಂತೆ ಅದನ್ನು ನೋಡಿದ ಆ ಮನುಷ್ಯ ನನ್ನ ಉಡೆಯಲ್ಲಿ ಇವುಗಳು ಏಕೆ ಹಾಕಿದ್ದರಿ ಇವುಗಳನ್ನು ನಾನು ಏನು ಮಾಡಲಿ ಎಂದಾಗ ಈ ಎಲ್ಲ ಸಮಾನುಗಳನ್ನು ನಮ್ಮ ಅತ್ತೆಯ ಕೈಯಲ್ಲಿ ಕೊಡಿ ಎಂದಾಗ ನಾನು ನಿಮ್ಮ ಅತ್ತೆಯ ಕೈಯಲ್ಲಿ ಕೊಡುತ್ತೇನೆಂಬುದು ನಿಮಗೆ ಹೇಗೆ ವಿಸ್ವಾಸ ಗೊತ್ತಾಗಿದೆ ನಾನು ನನ್ನ ಮನೆಗೆ ಒಯ್ದರೆ ಏನು ಮಾಡುತ್ತೀರಿ ಎಂದಾಗ ಹಾಗಾಗುವದಿಲ್ಲಾ ನಿಮ್ಮ ತಲೆಯ ಮೇಲೆ ಆ ಟೊಪ್ಪಿಗೆ ಇದೆ ಅಲ್ಲಾ ಆ ತಲೆಯ ಮೇಲಿನ ಟೊಪ್ಪಿಗೆಯೇ ನಮ್ಮ ಪ್ರಾಮಾಣಿಕತೆಯ ಸಂಸ್ಕಾರ ಕುರಿತು ತಿಳಿಸುತ್ತದೆ ನಿಮ್ಮ ಮೇಲೆ ವಿಸ್ವಾಸವಿದೆ ಅದಕ್ಕೆ ಕೊಟ್ಟಿದ್ದೇನೆಂದು ಹೇಳಿದಳಂತೆ. ಹಿಂದಿನ ಕಾಲದ ಹಾಗೂ ಇಂದಿನ ಕಾಲದ ಸಂಸ್ಕಾರಗಳ ಕುರಿತು ವಿವರಿಸಿದ ಶ್ರೀಗಳು ದೇಶದ ಸಂಸ್ಕøತಿ ಬಿಟ್ಟು ವಿದೇಶದ ಸಂಸ್ಕಾರ ಕುರಿತು ಒಲವು ತೋರಿಸುತ್ತಾ ಸಾಗಿದ ಇಂದಿನ ಜೀವನವನ್ನು ನೋಡಿದರೆ ಅಷ್ಟೇ ಖೇದವೆನಿಸುತ್ತದೆ ಅಷ್ಟೇ ದುಃಖವೆನಿಸುತ್ತದೆ ಎಂದರು.
ವೇದಿಕೆಯ ಮೇಲೆ ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಶರಣಗೌಡ ಪೊಲೀಸ್‍ಪಾಟೀಲ, ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಶ್ರೀಮತಿ ಕಾಶಿಬಾಯಿ ಶರಣರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.