ಸಂತೇಬೆನ್ನೂರು.ಮಾ.30; ಕನ್ನಡದಲ್ಲಿ ಬರೆದ ಶರಣರು, ದಾಸರು ನಮ್ಮ ಸಂಸ್ಕೃತಿಯ ಕುರುಹಾಗಿದ್ದಾರೆ ಎಂದು ಜನತಾ ಪ್ರೌಢಶಾಲೆಯ ಕನ್ನಡ ಅಧ್ಯಾಪಕರಾದ ಜನಪದ ವಾಗ್ಮಿ ಜಯಣ್ಣ ಮೂಲಿಮನಿ ಹೇಳಿದರು.ಸಂತೆಬೆನ್ನೂರು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಏರ್ಪಡಿಸಿದ್ದ ಮಾಸದ ಮಾತು ಕಾರ್ಯಕ್ರಮದ ಅತಿಥಿಯಾಗಿ ” ವಚನ- ಕೀರ್ತನ- ಸಂಗಮ” ವಿಷಯದ ಬಗ್ಗೆ ಉಪನ್ಯಾಸ ನೀಡಿದರು.ಕಾಯವಾಚ ಮನಸ ಬದುಕನ್ನು ಪ್ರೀತಿಸಿದರೆ, ಪರೋಪಕಾರದ ನಡೆ ರೂಢಿಸಿಕೊಂಡರೆ ಜೀವ ಜೇನಾಗುತ್ತದೆ ಎಂದು ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಕನಕದಾಸರು ವಿಜಯದಾಸರು ಪುರಂದರ ದಾಸರ ರಚನೆಗಳ ಉದಾಹರಣೆ ಕೊಟ್ಟು ಹೇಳಿದರು.ಬಂದದ್ದು ಬರಲಿ ಗುರು ಗೋವಿಂದನ ದಯೆ ಇರಲಿ ಎಂಬ ಮಾತು ಹೇಳುತ್ತಾ ಗುರು ಮಹತ್ವ ಸಾರಿದರು.ಇಬ್ರಾಹಿಂ ಸುತಾರೆ ಅವರು ಸರ್ವ ಧರ್ಮಗಳ ಸಮನ್ವಯ ಹರಿಕಾರರಾಗಿದ್ದರು.
ಅವರ ಬದುಕು ತೊಳೆದಿಟ್ಟ ಹೊನ್ನ ಗಿಂಡಿ ಎಂದರು. ಮಹಮ್ಮದ್ ಪೈಗಂಬರ್ ಅವರ ಜೀವನ ಸಂದೇಶಗಳ ಬಗ್ಗೆ ಪ್ರಸ್ತುತತೆಯನ್ನು ಒತ್ತಿ ಹೇಳಿದರು
ಮಾಸದ ಮಾತು ಮೂಲಕ ಕನ್ನಡ ಸಂಸ್ಕೃತಿ ಪಸರಿಸುವ ಕೈಂಕರ್ಯ ಶ್ಲಾಘನೀಯ ಎಂದರು
ಕುಮಾರಿ ಪೂರ್ಣಿಮ ವಚನಗಳನ್ನು ಹಾಡಿದರು. ಮಾರುತಿ ಸುಗಮ ಸಂಗೀತ ನಡೆಸಿಕೊಟ್ಟರು
ಬಸವೇಶ್ವರ ನಾಟ್ಯ ಸಂಘದ ಕಲಾವಿದರು ಭರತನಾಟ್ಯ ಕಾರ್ಯಕ್ರಮ ನೀಡಿದರು.
ಕುಮಾರಿ ಚಂದ ಸ್ವಾಗತಿಸಿದರು. ಕುಮಾರಿ ಶಾಲಿನಿ ವಂದಿಸಿದರು
ಕುಮಾರಿ ಪೂಜಾ ನಿರೂಪಿಸಿದರು