
ಕಲಬುರಗಿ:ಆ.19:ಮನುಷ್ಯನು ಸಮಯದ ಜೊತೆ ನಡೆಯುವ ಅವಶ್ಯಕತೆ ಇಲ್ಲ ಸತ್ಯ ಪರಿಶುದ್ಧ ಭಾವನೆಯೊಂದಿಗೆ ಜೀವನ ಸಾಗಿಸಿದರೆ ಸಮಯವೇ ನಮ್ಮ ಜೊತೆ ಬರುತ್ತದೆ ಎಂದು ನ್ಯಾಯವಾದಿ ಹಣಮಂತರಾಯ ಅಟ್ಟೂರ ಹೇಳಿದರು. ನಿನ್ನೆ ಕಲಬುರಗಿ ತಾಲೂಕಿನ ಪಾಂಡವರ ಅಣಿ ಯಲ್ಲಿ ಚಿಂಚನ ಸುರ ಹಾಗೂ ಮಡಕಿ ಸಿದ್ದ ಮಲ್ಲೇಶ್ವರ ಮಠದ ಪೂಜ್ಯರಾದ ಅಭಿನವ ಸಿದ್ದಲಿಂಗ ಶಿವಾಚಾರ್ಯರ 47 ದಿನದ ಅನುಷ್ಠಾನ ಮುಕ್ತಾಯ ಸಮಾರಂಭದಲ್ಲಿ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದ ವತಿಯಿಂದ ಪೂಜ್ಯರಿಗೆ ಗೌರವಿಸಿ ಮಾತನಾಡುತ್ತಾ ಕಲ್ಯಾಣ ನಾಡು ಶರಣರು, ಸಂತರು, ಮಹಾಂತರು, ಅನುಷ್ಠಾನ ಮೂರ್ತಿಗಳು ಜನಿಸಿದ ನಾಡು. ನುಡಿದಂತೆ ನಡೆದು ಉತ್ತಮವಾದ ಸಮಾಜ ನಿರ್ಮಾಣ ಮಾಡಲು ಸತತ ಪ್ರಯತ್ನಿಸಿದ್ದಾರೆ. ಸಂಸ್ಕಾರಯುತವಾದ ಭೂಮಿಯಲ್ಲಿ ನುಡಿದಂತೆ ನಡೆದು ಕಲ್ಯಾಣ ನಾಡಿನ ಶಕ್ತಿ ಜಗತ್ತಿಗೆ ಪರಿಚಯಿಸಿದ್ದಾರೆ. ಇಂದಿನ ದಿನಗಳಲ್ಲಿ ಹಲವಾರು ಪೂಜ್ಯರು ತಮ್ಮ ತ್ಯಾಗ ಮನೋಭಾವ ಭಕ್ತಿಯೊಂದಿಗೆ ಸಮಾಜ ಸೇವೆಗೈಯುತ್ತ ಜಗ ಬೆಳಗುವ ಕಾರ್ಯ ಮಾಡುತ್ತಿದ್ದಾರೆ. ಅಂತವರ ಸಾಲಿನಲ್ಲಿ ಅನುಷ್ಠಾನ ಮೂರ್ತಿಗಳಾದ ಮಡಕಿ ಪೂಜ್ಯರು ಸಹ ಒಬ್ಬರು ಎಂದು ಹೇಳುವುದಕ್ಕೆ ಹೆಮ್ಮೆ ಅನಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಇದೇ ಸಂದರ್ಭದಲ್ಲಿ ಪಾಂಡವರ ಅಣಿಯ ಪೂಜ್ಯರಾದ ಲಿಂಗಾನಂದ ಶರಣರು, ತಪೆÇನಿಧಿ ಸಾವಿತ್ರಮ್ಮ ಅಮ್ಮನವರು, ಸಂಗಮೇಶ ನಾಗೂರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರವೀಣ ಮಡಿವಾಳ, ಸುಧಾಕರ ಮಡಿವಾಳ, ಸಂಜಿವಕುಮಾರ ಬಿರಾದಾರ, ಶ್ರೀಕಾಂತ ಕೆರಳ್ಳಿ, ರಾಮರತನ ಪಾಟಿಲ, ರಾಜಕುಮಾರ ಪಾಟೀಲ, ಪ್ರವೀಣ ಮಡಿವಾಳ, ಶಿವಾನಂದ ಹಡಪದ, ಬಾಬು ಒಡೆಯರ, ಬಾಲಾಜಿ ಪಾಟೀಲ, ಬಸವರಾಜ ಕೆರೂರ, ಪ್ರಭಾಕರ ಸುತ್ತಾರ, ಜಗನ್ನಾಥ ಮಂಠಾಳ, ಚಂದ್ರಕಾಂತ ಬಿರಾದಾರ, ಬಸವಂತರಾವ ಪೆÇಲೀಸ ಪಾಟೀಲ, ಕಾಶಿನಾಥ ಮಡಿಕಿ, ಶರಣಬಸಪ್ಪ ಪೂಜಾರಿ, ಶಿವಕುಮಾರ ಜಂಬಗಿ ಸೇರಿದಂತೆ ಅತಿಥಿ ಗಣ್ಯರು ಹಾಗೂ ಸುತ್ತಮುತ್ತಲಿನ ಗ್ರಾಮದ ಅನೇಕ ಜನಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.