ಶರಣಯ್ಯನಾಯಕ ಬಗ್ಗೆ ಮಾತನಾಡುವ ನೈತಿಕತೆ ಕೃಷ್ಣ ನಾಯಕರಿಗೆ ಇಲ್ಲ

ಸಿರವಾರ,ಮೇ.೦೧- ಬಿಜೆಪಿ ಪಕ್ಷದಿಂದ ಪಂ.ಪಂಚಾಯತಿ ಸದಸ್ಯರಾಗಿದ್ದುಕೊಂಡು ಪಕ್ಷೇತರರಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ದೇ ಮಾಡಿದ ಪಂ.ಪಂಚಾಯತಿ ಸದಸ್ಯ ಕಾಂಗ್ರೆಸ್ ಯುವ ಮುಖಂಡ ಶರಣಯ್ಯನಾಯಕ ಗುಡದಿನ್ನಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಬಿ.ವಿ.ನಾಯಕರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು, ಆಗ ತೆಗಳಿ, ಈಗ ಹೋಗಳುತ್ತಿರುವುದನ್ನು ನೋಡಿದರೆ ಕ್ಷೇತ್ರದ ಮತದಾರರು ನಗುತ್ತಿದ್ದಾರೆ ಎಂದು ಪಂ.ಪಂಚಾಯತಿ ಮಾಜಿ ಉಪಾದ್ಯಕ್ಷ ಚನ್ನಬಸವ ಗಡ್ಲ ಹೇಳಿದರು.
ಪಟ್ಟಣದ ಚುಕ್ಕಿ ತೇಜಸ್ ಮಹಲ್‌ನಲ್ಲಿ ಇಂದು ಬೆಳಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ೨೦೧೮ ಚುನಾವಣೆಯಲ್ಲಿ ಶರಣಯ್ಯ ನಾಯಕರು ಕೊನೆ ಗಳಿಯಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಆದರೂ ಕ್ಷೇತ್ರದ ಜನರು ೩೦ ಸಾವಿರಕೂ ಅಧಿಕ ಮತಗಳನ್ನು ನೀಡಿದ್ದಾರೆ. ಅದೇ ಚುನಾವಣೆಯಲ್ಲಿ ಕೃಷ್ಣ ನಾಯಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿರುವುದು ಮರೆತಂತಿದೆ, ಆಗ ಬಿಜೆಪಿ ಅಭ್ಯರ್ಥಿ ವಿರುದ್ದ ಸ್ಪರ್ಧೆ ಮಾಡಿದವರು ಈಗ ಮಾತನಾಡುವ ಹಕ್ಕು ಇಲಾ, ಪಂಚಾಯತಿ ಅಧ್ಯಕ್ಷ- ಉಪಾಧ್ಯಾಕ್ಷ ಚುನಾವಣೆಯಲ್ಲಿ ನಾವು ಪಕ್ಷದ ಸದಸ್ಯರ ಪರ ಮತ ಹಾಕಿ ಎಂದು ಸದಸ್ಯತ್ವ ರದ್ದು ಮಾಡಿದಿರಿ. ಕೃಷ್ಣ ನಾಯಕನ ಮೇಲೆ ಏಕೆ ಕ್ರಮಕೈಗೊಳ್ಳಲಿ. ಲೋಕಸಭಾ ಚುನಾವಣೆಯಲ್ಲಿ ಬಿ.ವಿ.ನಾಯಕರನ್ನು ತೆಗಳಿದ ನೀವು ಇಂದು ಉತ್ತಮ, ಸಮರ್ಥ ಅಭ್ಯರ್ಥಿ ಎಂದು ಹೇಳುತ್ತಿರುವುದು ನೋಡಿದರೆ ಬಿಜೆಪಿಯಲ್ಲಿಯೇ ಸಮರ್ಥರು ಇಲವೆಂದು ಕಾಣುತ್ತದೆ.
ದೇವದುರ್ಗದಲ್ಲಿ ಬಿ.ವಿ ನಾಯಕರಿಗೆ ಗೆಲುವಿನ ಪೂರಕ ವಾತಾವರಣ ಇದರೂ ಮಾನ್ವಿಯಲ್ಲಿ ಸ್ಪರ್ಧೆ ಮಾಡಿರುವುದು, ಶಿವನಗೌಡ ನಾಯಕರ ಜೊತೆ ಒಳ ಒಪ್ಪಂದ ಎಂಬುದು ಜಿಲ್ಲೆಯ ಙತೆಗೆ ಗೊತಾಗಿದೆ. ಈ ಚುನಾವಣೆಯಲ್ಲಿ ಮಾಜಿ ಶಾಸಕ ಜಿ.ಹಂಪಯ್ಯನಾಯಕ ಗೆಲುವು ಖಚಿತ ಎಂದರು. ಪ.ಪಂಚಾಯತಿಸದಸ್ಯ ಸೂರಿ ದುರುಗಣ್ಣನಾಯಕ ಮಾತನಾಡಿ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಜಿ.ಹಂಪಯ್ಯನಾಯಕ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ.
ಪಟ್ಟಣದಲ್ಲಿ ಮುಖರಸ್ತೆ, ವಾರ್ಡಗಳ ಸಿಸಿರಸ್ತೆ ನಿರ್ಮಾಣ, ಪಂಚಾಯತಿ ಕಟ್ಟಡ ಅನುದಾನ, ಅನೇಕ ಆಶ್ರಯ ಮನೆಗಳು, ಇನೂ ಅನೇಕ ಅಭಿವೃದ್ದಿ ಕಾಮಗಾರಿಗಳು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಹಂಪಯ್ಯನಾಯಕ ಶಾಸಕರ ಅವದಿಯಲ್ಲಿ ಆಗಿವೆ. ೨೦೧೮ ರಲ್ಲಿ ಮತದಾರರು ಸೊಲಿಸಿದರು ಅದನು ಒಪ್ಪಿಕೊಂಡು ನಿತ್ಯ ಕ್ಷೇತ್ರದ ಜನರ, ರೈತರೊಂದಿಗೆ ಇದ್ದಾರೆ, ಬಿಜೆಪಿ ಅಭ್ಯರ್ಥಿ ಸುಗ್ಗಿ ಮಾಡಲು ಬರುವವರಂತೆ ಬಂದಿದ್ದಾರೆ. ಹಂಪಯ್ಯನಾಯಕರಂತವರು ಬೇಕಾ, ಸುಗ್ಗಿ ಮಾಡುವವರು ಬೇಕಾ ಎಂದರು. ಮಾಜಿ ಸದಸ್ಯ ಬಸವರಾಜ ಗಡ್ಲ, ನಾಗರಾಜ ಚಿನ್ನಾನ್, ಚನ್ನಪ್ಪ ನಾಗೋಲಿ, ದಲಿತ ಮುಖಂಡ ಎಲ್.ಕೆ.ಮರಿಯಣ್ಣ ಮಾತನಾಡಿದರು.
ಈ ಸಂದರ್ಭದಲ್ಲಿ ರಂಗನಾಥ ಬೋವಿ, ವೆಂಕಟೇಶ ದೊರೆ, ರಾಜ ಸೇರಿದಂತೆ ಇನ್ನಿತರರು ಇದ್ದರು.